ಇವರಲ್ಲಿ ನಿಜವಾದ ಮಾಧುರಿ ದೀಕ್ಷಿತ್​ ಯಾರು ಎಂದು ಹೇಳಬಲ್ಲಿರಾ?

madhuri
Published on

ನವದೆಹಲಿ: ಬಾಲಿವುಡ್​ನಲ್ಲಿ ಜಿಂಕೆಯಂತೆ ಕುಣಿಕುಣಿದು, ಎಲ್ಲರನ್ನೂ ಕುಣಿಸಿದ ನಟಿ ಮಾಧುರಿ ದೀಕ್ಷಿತ್​ ಸದ್ಯ ತಮ್ಮ ಪತಿ ಡಾ. ನೆನೆ ಹಾಗೂ ಆರಿನ್​ ಮತ್ತು ರ‍್ಯಾನ್​ ಎಂಬ ಇಬ್ಬರು ಪುತ್ರರೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಲಾಕ್​ಡೌನ್​ ಅವಧಿಯಲ್ಲಿ ಅವರು ತಮ್ಮ ಫೋಟೋ ಆಲ್ಬಂನಲ್ಲಿದ್ದ ಅತ್ಯಂತ ಹಳೆಯ ಫೋಟೋವೊಂದನ್ನು ಟ್ವೀಟ್​ ಮಾಡಿ, ಇದರಲ್ಲಿ ನಿಜವಾದ ಮಾಧುರಿ ದೀಕ್ಷಿತ್​ ಯಾರೆಂದು ಹೇಳಬಲ್ಲಿರಾ ಎಂದು ಸವಾಲು ಹಾಕಿದ್ದಾರೆ.

ಈ ಫೋಟೋದಲ್ಲಿ ಅವರು ತಮ್ಮ ಸಹೋದರಿಯ ಜತೆ ಶಾಲಾ ನೃತ್ಯ ಕಾರ್ಯಕ್ರಮದಲ್ಲಿ ಡಾನ್ಸ್​ ಮಾಡುತ್ತಿದ್ದಾರೆ. ನೋಡಲು ಇಬ್ಬರೂ ಒಂದೇ ತರ ಇದ್ದು, ಒಂದೇ ಬಗೆಯ ಡಾನ್ಸ್​ ಡ್ರೆಸ್​ ಹಾಕಿದ್ದಾರೆ.

ಇದು ನನ್ನ ಪ್ರೀತಿಯ ಸಹನೃತ್ಯಗಾರ್ತಿಯೊಂದಿಗೆ ನರ್ತಿಸುತ್ತಿರುವ ಚಿತ್ರ. ಇದು ನನಗೆ ಅತ್ಯಂತ ಪ್ರಿಯವಾದ ಚಿತ್ರವೂ ಹೌದು. ಈ ಚಿತ್ರದಲ್ಲಿ ನನ್ನ ಸಹೋದರಿ ನನ್ನೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಇದು ನನ್ನ ಬಾಲ್ಯದ ಅತ್ಯಂತ ಸ್ಮರಣೀಯ ಫೋಟೋ ಕೂಡ ಹೌದು. ನಾವಿಬ್ಬರೂ ಒಟ್ಟಾಗಿ ಶಾಲೆಯ ಡಾನ್ಸ್​ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆವು ಎಂದು ಹೇಳಿರುವ ಅವರು, ನಿಜವಾದ ಮಾಧುರಿ ದೀಕ್ಷಿತ್​ ಯಾರೆಂಬ ಗುಟ್ಟನ್ನು ಬಿಟ್ಟುಕೊಡಲು ನಿರಾಕರಿಸಿದ್ದಾರೆ.

ಹಾಗೆ ನೋಡಿದರೆ ಮಾಧುರಿ ದೀಕ್ಷಿತ್​ ಅವರಿಗೆ ಭಾರತಿ ಮತ್ತು ರೂಪಾ ಎಂಬ ಇಬ್ಬರು ಸಹೋದರಿಯರಿದ್ದಾರೆ. ಅಜಿತ್​ ಎಂಬ ಸಹೋದರ ಕೂಡ ಇದ್ದಾರೆ. ತಮ್ಮ ಆ ಇಬ್ಬರು ಸಹೋದರಿಯಲ್ಲಿ ತಮ್ಮೊಂದಿಗೆ ಹೆಜ್ಜೆ ಹಾಕುತ್ತಿರುವವರು ಯಾರು ಎಂಬುದನ್ನು ತಿಳಿಸುವಂತೆ ಸವಾಲು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net