More

    ರಂಜಾನ್​ ಮಾಸದಲ್ಲಿ ಬುರ್ಖಾಧಾರಿಣಿಯ ಈಶ ಸೇವೆ!

    ನವದೆಹಲಿ: ಇದು ರಂಜಾನ್​ ಮಾಸ. ಈ ಮಾಸದಲ್ಲಿ ಮುಸ್ಲಿಂ ಬಾಂಧವರು ನಸುಕಿನಿಂದ ಸಂಜೆಯವರೆಗೆ ಉಪವಾಸ ಮಾಡುತ್ತಾರೆ. ಒಂದು ಹನಿ ನೀರು ಕುಡಿಯದೆ ತಮ್ಮ ಕಾಯಕವನ್ನೂ ಮಾಡುತ್ತಾರೆ. ಇದೇ ರೀತಿ ನಸುಕಿನಿಂದ ಸಂಜೆಯವರೆಗೆ ರಂಜಾನ್​ ಉಪವಾಸ ಮಾಡುವ ಇಮ್ರಾನಾ ಸೈಫಿ ಕರೊನ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ ಇಮ್ರಾನಾ ಸೈಫಿ. ಇವರು ಈಗ ಮತೀಯ ಸೌಹಾರ್ದತೆಯ ಕುರುಹು ಕೂಡ ಆಗಿದ್ದಾರೆ.

    ಉತ್ತರ ದೆಹಲಿಯ ನೆಹರು ವಿಹಾರದ ನಿವಾಸಿಯಾಗಿರುವ ಇವರು ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರು ಕೊಡಿಸಿರುವ ಸ್ಯಾನಿಟೈಸರ್​ ಟ್ಯಾಂಕ್​ ಮತ್ತು ಸ್ಪ್ರೇ ಹಿಡಿದು ಹೊರಡುವ ಇವರು ಆ ಪ್ರದೇಶದ ಸುತ್ತಮುತ್ತಲಿರುವ ದೇವಾಲಯ, ದರ್ಗಾ, ಮಸೀದಿ, ಗುರುದ್ವಾರಗಳನ್ನು ಸ್ಯಾನಿಟೈಸ್​ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಭಾರತದಲ್ಲೇ ಉಳಿದಿರುವ ಮಾಲ್ಡೋವಾ ಟೆನಿಸ್​ ಆಟಗಾರನ ವಿಶಿಷ್ಟ ಸರ್ವಿಸ್​

    ದೇವಾಲಯದ ಒಳಭಾಗ, ಹೊರಭಾಗ ಸೇರಿ ಮೂಲೆ, ಮೂಲೆಯನ್ನೂ ಸ್ಯಾನಿಟೈಸ್​ ಮಾಡುವ ಇವರ ಕಾರ್ಯಕ್ಕೆ ಪೂಜಾರಿಗಳು ಮತ್ತು ಭಕ್ತರು ತುಂಬು ಹೃದಯದ ಸಹಕಾರ ನೀಡುತ್ತಿದ್ದಾರೆ.
    ಮೂರು ಮಕ್ಕಳ ತಾಯಿಯಾಗಿರುವ 32 ವರ್ಷದ ಇಮ್ರಾನಾ ಸೈಫಿ ಕೇವಲ 7ನೇ ತರಗತಿವರೆಗೆ ಓದಿದ್ದಾರೆ. ತಮ್ಮ ಬಡಾವಣೆಯ ಇನ್ನೂ

    ಮೂವರು ಮಹಿಳೆಯರ ಜತೆಗೂಡಿ ಕರೊನಾ ಸೇನಾನಿಗಳ ಸಣ್ಣ ಗುಂಪನ್ನು ರಚಿಸಿಕೊಂಡಿದ್ದಾರೆ. ಇವರೆಲ್ಲರೂ ಸೇರಿ ಬಡಾವಣೆಯ ಸುತ್ತಮುತ್ತಲ ಪ್ರದೇಶವನ್ನು ಸ್ಯಾನಿಟೈಸ್​ ಮಾಡಿ, ಕರೊನಾ ಸೋಂಕು ಮುಕ್ತಗೊಳಿಸುವ ಕಾರ್ಯದಲ್ಲಿ ಟೊಂಕ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ.

    ಇದನ್ನೂ ಓದಿ: ತೀವ್ರ ಸೊಂಟದ ನೋವು ಎಂದ ವ್ಯಕ್ತಿಯಲ್ಲಿ ದೇಹದಲ್ಲಿ ಎಂಥ ಅಚ್ಚರಿ ಕಾದಿತ್ತು ನೋಡಿ!

    ಜಫರಾಬಾದ್​, ಮುಸ್ತಫಾಬಾದ್​, ಚಾಂದ್​ಬಾಗ್​, ನೆಹರು ವಿಹಾರ್​, ಶಿವ ವಿಹಾರ್​, ಬಾಬುನಗರ ಸೇರಿ ವಿವಿಧೆಡೆಗಳಲ್ಲಿ ಇರುವ ದೇವಸ್ಥಾನ, ದರ್ಗಾ, ಮಸೀದಿ, ಗುರುದ್ವಾರಗಳನ್ನು ಬಿಡದೆ ಸ್ಯಾನಿಟೈಸ್​ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
    ತಮ್ಮ ಈ ಕಾರ್ಯದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಕರೊನಾ ಸೇನಾನಿ ಇಮ್ರಾನಾ, ಭಾರತದ ಜಾತ್ಯತೀತ ತತ್ವಗಳನ್ನು

    ಎತ್ತಿಹಿಡಿಯುವುದು ನನ್ನ ಉದ್ದೇಶವಾಗಿದೆ. ನಾವೆಲ್ಲರೂ ಒಂದೇ, ನಾವೆಲ್ಲರೂ ಸದಾ ಒಂದಾಗಿ, ಒಗ್ಗಟ್ಟಿನಿಂದ ಇರಬೇಕು ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಲು ಬಯಸುತ್ತೇನೆ ಎಂದು ಹೇಳುತ್ತಾರೆ.

    ಇದನ್ನೂ ಓದಿ: ಸಾ.ರಾ. ಗೋವಿಂದುಗೆ ನಿಂದಿಸಿದ ಆರೋಪ: ನಟ ಜೈಜಗದೀಶ್​ ನೀಡಿದ ಸ್ಪಷ್ಟನೆ ಏನು?

    ನಮ್ಮ ಈ ಕಾರ್ಯದಲ್ಲಿ ಎಲ್ಲಿಯೂ ತೊಡಕಾಗಿಲ್ಲ, ಲೋಪವೂ ಆಗಿಲ್ಲ. ದೇವಾಲಯ ಇರಲಿ, ದರ್ಗಾ-ಮಸೀದಿಯೇ ಇರಲಿ, ಎಲ್ಲರೂ ನಮ್ಮನ್ನು ಪ್ರೀತಿ, ಗೌರವದಿಂದ ಬರಮಾಡಿಕೊಂಡು ಸ್ಯಾನಿಟೈಸ್​ ಮಾಡುವ ಕಾರ್ಯಕ್ಕೆ ಸಹಕರಿಸುತ್ತಿದ್ದಾರೆ ಎಂದು ತಿಳಿಸುತ್ತಾರೆ.

    ನೆಹರು ವಿಹಾರದ ನವ ದುರ್ಗಾ ದೇವಸ್ಥಾನದ ಪೂಜಾರಿ ಪಂಡಿತ್​ ಯೋಗೇಶ್​ ಕೃಷ್ಣ, ಇಂಥ ಕ್ರಮಗಳನ್ನು ಸ್ವಾಗತಿಸಬೇಕು. ಇದರಿಂದ ಮತೀಯ ಸೌಹಾರ್ದತೆ ಸಾಧಿಸಲು ಸಾಧ್ಯವಾಗುತ್ತದೆ. ನಾವು ದ್ವೇಷವನ್ನು ತ್ಯಜಿಸಿ, ಪ್ರೀತಿ-ಪ್ರೇಮದಿಂದ ಎಲ್ಲರನ್ನೂ ಒಪ್ಪಿಕೊಳ್ಳಬೇಕು ಎಂದು ಹೇಳುತ್ತಾರೆ.

    ಕಾಶಿನಾಥ್​ ಜನ್ಮದಿನ; ಗಾಡ್​ಫಾದರ್​ ನೆನೆದ ಸ್ಯಾಂಡಲ್​ವುಡ್​ ಕಲಾವಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts