More

    ಭಾರತದಲ್ಲೇ ಉಳಿದಿರುವ ಮಾಲ್ಡೋವಾ ಟೆನಿಸ್​ ಆಟಗಾರನ ವಿಶಿಷ್ಟ ಸರ್ವಿಸ್​

    ಅಹಮದಾಬಾದ್​: ಭಾರತದ ಪ್ರವಾಸಕ್ಕೆ ಬಂದು ಲಾಕ್​ಡೌನ್​ನಿಂದಾಗಿ ಇಲ್ಲಿಯೇ ಸಿಲುಕಿಕೊಂಡಿರುವ ಸಹಸ್ರಾರು ವಿದೇಶಿಗರು ಸ್ವದೇಶಕ್ಕೆ ಮರಳಲು ಹಾತೊರೆಯುತ್ತಿದ್ದಾರೆ. ಅವರಿಗಾಗಿ ವಿಶೇಷ ವಿಮಾನವನ್ನೂ ವ್ಯವಸ್ಥೆ ಮಾಡಲಾಗಿತ್ತು. ಆದರೂ ಸ್ವದೇಶಕ್ಕೆ ಮರಳಲು ಬಯಸದ ಮಾಲ್ಡೋವಾದ ಟೆನಿಸ್​ ಆಟಗಾರರೊಬ್ಬರು ಭಾರತದಲ್ಲೇ ಉಳಿದು, ವಿಶಿಷ್ಟ ರೀತಿಯ ಸರ್ವಿಸ್​ ಮಾಡುತ್ತಿದ್ದಾರೆ.

    ಲಾಕ್​ಡೌನ್​ ಅವಧಿಯಲ್ಲಿ ಆಟವಾಡುವುದಿರಲಿ, ಅಭ್ಯಾಸ ಮಾಡಲೂ ನಿರ್ಬಂಧ ಇರುವಾಗ ಮಾಲ್ಡೋವಾದ ಟೆನಿಸ್​ ಆಟಗಾರ ಹೇಗೆ ಸರ್ವಿಸ್​ ಮಾಡಲು ಸಾಧ್ಯ?

    ಇದನ್ನೂ ಓದಿ: ರಿಲಯನ್ಸ್​ ಜಿಯೋಕ್ಕೆ ಮತ್ತೊಂದು ಜಾಕ್​ಪಾಟ್​, ಹರಿದು ಬಂತು 11,367 ಕೋಟಿ ರೂ. ಬಂಡವಾಳ

    ಸಾಧ್ಯವಿದೆ. ಟೆನಿಸ್​ನಲ್ಲಿ ಅಷ್ಟೇ ಅಲ್ಲ, ನಿಜಜೀವನದಲ್ಲೂ ಸರ್ವಿಸ್​ (ಸೇವೆ) ಮಾಡಲು ಅವಕಾಶವಿದೆ. ಲಾಕ್​ಡೌನ್​ನಿಂದಾಗಿ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವ ಸಹಸ್ರಾರು ಮಂದಿಗೆ ದಿನನಿತ್ಯ ಊಟ, ತಿಂಡಿ, ದಿನಸಿ ಸೇರಿ ಅಗತ್ಯವಸ್ತುಗಳನ್ನು ತಲುಪಿಸುವ ಸೇವೆಯಲ್ಲಿ ಈ ಆಟಗಾರ ತೊಡಗಿಕೊಂಡಿದ್ದಾರೆ.

    ಅವರೇ ಡಿಮಿಟ್ರಿ ಬಾಸ್ಕೋವ್​. ಅಹಮದಾಬಾದ್​ನ ಪ್ರಮೇಶ್​ ಮೋದಿ ಅವರ ಏಸ್​ ಟೆನಿಸ್​ ಅಕಾಡೆಮಿಗೆ 25 ವರ್ಷ ವಯಸ್ಸಿನ ಈ ಆಟಗಾರ ಬಂದಿದ್ದರು. ಅಲ್ಲಿ ತರಬೇತಿ ಪಡೆದುಕೊಳ್ಳುವ ಜತೆಗೆ ಮಕ್ಕಳಿಗೆ ಟೆನಿಸ್​ ಪಾಠವನ್ನೂ ಹೇಳಿಕೊಡುತ್ತಿದ್ದರು. ಇವರು ಮಾರ್ಚ್​ನಲ್ಲಿ ಸ್ವದೇಶಕ್ಕೆ ಮರಳಬೇಕಿತ್ತು. ಅಷ್ಟರಲ್ಲೇ ಕೋವಿಡ್​ 19ರಿಂದಾಗಿ ಲಾಕ್​ಡೌನ್​ ಘೋಷಣೆಯಾಯಿತು.

    ಇದನ್ನೂ ಓದಿ: ಹೊರಗಡೆ ತಿರುಗಾಡಿ ಬರುತ್ತೇವೆಂದು ಹೇಳಿ ಹೊರಟ ನವದಂಪತಿ ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆ

    ಹೀಗಾಗಿ ಭಾರತದಲ್ಲೇ ಉಳಿದ ಡಿಮಿಟ್ರಿ ಬಾಸ್ಕೋವ್​, ಏನು ಮಾಡಬೇಕು ಎಂಬುದು ತಿಳಿಯದೆ ಕುಳತಿದಿದ್ದಾಗ ಪ್ರಮೇಶ್​ ಮೋದಿ ಬಡವರಿಗೆ ಆಹಾರ ಪದಾರ್ಥಗಳನ್ನು ಹಂಚುವ ಐಡಿಯಾ ಕೊಟ್ಟರು. ಸರಿ ಇದಕ್ಕೆ ಕೈಜೋಡಿಸಲು ಸಿದ್ಧರಾದರು.

    100ರಿಂದ ಆರಂಭವಾದ ಆಹಾರಪೊಟ್ಟಣ ಪೂರೈಕೆ ಕಾರ್ಯ ದಿನೇದಿನೇ 200, 300 ಆಗಿ ಇಂದು ಸಾವಿರಾರು ಜನರಿಗೆ ಆಹಾರ ಒದಗಿಸುವವರೆಗೆ ತಲುಪಿದೆ. ಇಂಥ ಉದಾತ್ತ ಕಾರ್ಯದಲ್ಲಿ ತೊಡಗಿಕೊಂಡಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಒಬ್ಬ ಕ್ರೀಡಾಪಟುವಾಗಿ ಇದನ್ನು ನಾನು ಆಸ್ವಾದಿಸುತ್ತಿದ್ದೇನೆ ಎಂದು ಡಿಮಿಟ್ರಿ ಬಾಸ್ಕೋವ್​ ಹೇಳಿದರು.

    ಇದನ್ನೂ ಓದಿ: ತೀವ್ರ ಸೊಂಟದ ನೋವು ಎಂದ ವ್ಯಕ್ತಿಯಲ್ಲಿ ದೇಹದಲ್ಲಿ ಎಂಥ ಅಚ್ಚರಿ ಕಾದಿತ್ತು ನೋಡಿ!

    ಬಾಸ್ಕೋವ್​ ಪ್ರತಿದಿನ ರೊಟ್ಟಿಗಳನ್ನು ಸಿಲ್ವರ್​ ಫಾಯಿಲ್​ಗಳಲ್ಲಿ ಸುತ್ತಿ, ತಾಜಾ ಆಗಿರುವಂತೆ ಮಾಡುತ್ತಿದ್ದಾರೆ. ಈ ಕೆಲಸವನ್ನು ಅವರು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಈ ಕಾರ್ಯವನ್ನು ಅವರು ತುಂಬಾ ಆಸ್ವಾದಿಸುವುದರಿಂದ, ಈ ಕಾರ್ಯದಲ್ಲಿ ತಮ್ಮನ್ನು ತಾವು ತುಂಬಾ ಆಪ್ತವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಪ್ರಮೇಶ್​ ಮೋದಿ ಅವರ ಪತ್ನಿ ಆಮಿ ಮೋದಿ ಹೇಳಿದ್ದಾರೆ.

    ಪಾಲಕರಿಂದಲೂ ಸಮಾಜ ಸೇವೆ: ಬಾಸ್ಕೋವ್​ ಅವರ ಪಾಲಕರಿಬ್ಬರೂ ವೃತ್ತಿಯಲ್ಲಿ ವೈದ್ಯರು. ಇವರ ತಂದೆ ಇತ್ತೀಚೆಗಷ್ಟೇ ಕೋವಿಡ್​ 19ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ಕರ್ತವ್ಯಕ್ಕೆ ಮರಳಿದ್ದಾರೆ. ಈ ವಿಷಯವನ್ನೂ ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳುವ ಡಿಮಿಟ್ರಿ ಬಾಸ್ಕೋವ್​, ನಾನು ಸ್ವದೇಶಕ್ಕೆ ಮರಳಿದ ನಂತರದಲ್ಲಿ ತಮ್ಮ ಸಾಹಸದ ಬಗ್ಗೆ ಹೇಳಲು ನನ್ನ ಪಾಲಕರ ಬಳಿ ಸಾಕಷ್ಟು ಕಥೆಗಳಿರುತ್ತವೆ ಎಂದು ಹೇಳಿದ್ದಾರೆ.

    ಭಾರತದಲ್ಲೇ ಉಳಿದಿರುವ ಮಾಲ್ಡೋವಾ ಟೆನಿಸ್​ ಆಟಗಾರನ ವಿಶಿಷ್ಟ ಸರ್ವಿಸ್​

    ದೇಶದ ಅತಿದೊಡ್ಡ ಔಷಧ ಕಂಪನಿ ತಾತ್ಕಾಲಿಕವಾಗಿ ಮುಚ್ಚಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts