More

    ರಿಲಯನ್ಸ್​ ಜಿಯೋಕ್ಕೆ ಮತ್ತೊಂದು ಜಾಕ್​ಪಾಟ್​, ಹರಿದು ಬಂತು 11,367 ಕೋಟಿ ರೂ. ಬಂಡವಾಳ

    ಮುಂಬೈ: ಭಾರತದ ಅತಿಶ್ರೀಮಂತ ಮುಖೇಶ್​ ಅಂಬಾನಿ ನೇತೃತ್ವದ ರಿಲಯನ್ಸ್​ ಜಿಯೋಕ್ಕೆ ಮತ್ತೊಂದು ಜಾಕ್​ಪಾಟ್​ ಹೊಡೆದಿದೆ. ಫೇಸ್​ ಬುಕ್​ ಮತ್ತು ಸಿಲ್ವರ್​ ಲೇಕ್​ ನಂತರದಲ್ಲಿ ಅಮೆರಿಕ ಮೂಲದ ವಿಸ್ಟಾ ಈಕ್ವಿಟಿ ಪಾರ್ಟನರ್ಸ್​ ಎಂಬ ಸಂಸ್ಥೆ 11,367 ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದೆ. ಇದಕ್ಕಾಗಿ ಅದು ಜಿಯೋ ಪ್ಲಾಟ್​ಫಾರಂನ ಶೇ.2.32 ಷೇರುಗಳನ್ನು ಖರೀದಿಸಿದೆ.

    ತನ್ಮೂಲಕ ವಿಸ್ಟಾ ಈಕ್ವಿಟಿ ಪಾರ್ಟನರ್ಸ್​ ರಿಲಯನ್ಸ್​ ಜಿಯೋದಲ್ಲಿ ಅತಿಹೆಚ್ಚು ಬಂಡವಾಳ ಹೂಡಿಕೆ ಮಾಡಿದ ಕಂಪನಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

    ಇದನ್ನೂ ಓದಿ: ತೀವ್ರ ಸೊಂಟದ ನೋವು ಎಂದ ವ್ಯಕ್ತಿಯಲ್ಲಿ ದೇಹದಲ್ಲಿ ಎಂಥ ಅಚ್ಚರಿ ಕಾದಿತ್ತು ನೋಡಿ!

    ಏಪ್ರಿಲ್​ನಲ್ಲಿ ಫೇಸ್​ಬುಕ್​ ಸಂಸ್ಥೆ ರಿಲಯನ್ಸ್​ ಜಿಯೋದ ಶೇ.9.9 ಷೇರು ಖರೀದಿಸಿತ್ತು. ಇದಕ್ಕಾಗಿ ಅದು 42,969.45 ಕೋಟಿ ರೂ. ನಗದು ಪಾವತಿಸಿತ್ತು. ಈ ಒಪ್ಪಂದಕ್ಕೆ ಹೋಲಿಸಿದರೆ ವಿಸ್ಟಾದ ಖರೀದಿಸಿರುವ ಷೇರುಗಳ ಮೌಲ್ಯ ಶೇ.12.5 ಹೆಚ್ಚಾಗಿದೆ. ಅಮೆರಿಕದ ಖಾಸಗಿ ಈಕ್ವಿಟಿ ಸಂಸ್ಥೆ ಸಿಲ್ವರ್​ ಲೇಕ್​, 5,655.75 ಕೋಟಿ ರೂ. ಪಾವತಿಸಿ ರಿಲಯನ್ಸ್​ ಜಿಯೋದ ಶೇ.1.15 ಷೇರುಗಳನ್ನು ಖರೀದಿಸಿದೆ.

    ವಿಸ್ಟಾದೊಂದಿಗಿನ ಒಪ್ಪಂದದಿಂದಾಗಿ ಕೇವಲ ಮೂರು ವಾರಗಳ ಅಂತರದಲ್ಲಿ ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ (ಆರ್​ಐಎಲ್​) ಭಾಗವಾಗಿರುವ ರಿಲಯನ್ಸ್​ ಜಿಯೋದ ಪ್ಲಾಟ್​ಫಾರಂ 3 ಜಾಗತಿಕ ಹೂಡಿಕೆದಾರ ಸಂಸ್ಥೆಯ ಮೂಲಕ 60,596.37 ಕೊಟಿ ರೂ.ಗಳ ಬಂಡವಾಳ ಕ್ರೋಢಿಕರಿಸಿದಂತಾಗಿದೆ.

    ಇದನ್ನೂ ಓದಿ: ವೈಜಾಗ್​ ವಿಷಾನಿಲ ದುರಂತ: ಸದ್ಯ ತಮ್ಮ ಮನೆಗಳಿಗೆ ಹೋಗುವಂತಿಲ್ಲ ಕಾರ್ಖಾನೆ ಸಮೀಪದ ಗ್ರಾಮಸ್ಥರು!

    ವಿಸ್ಟಾದ ಈ ಹೂಡಿಕೆಯೊಂದಿಗೆ ಜಿಯೋ ಪ್ಲಾಟ್​ಫಾರಂನ ಈಕ್ವಿಟಿ ಮೌಲ್ಯ 4.91 ಲಕ್ಷ ಕೋಟಿ ರೂ.ಗೆ ಹೆಚ್ಚಾಗಿದೆ. ತನ್ಮೂಲಕ ಅದರ ಎಂಟರ್​ಪ್ರೈಸ್​ ಮೌಲ್ಯ 5.16 ಲಕ್ಷ ಕೋಟಿ ರೂ. ಆಗಿದೆ ಎಂದು ಆರ್​ಐಎಲ್​ ಪ್ರಕಟಣೆಯಲ್ಲಿ ತಿಳಿಸಿದೆ.

    ಕಂಪನಿಯ ಹಿನ್ನೆಲೆ: ವಿಸ್ಟಾ ಈಕ್ವಿಟಿ ಪಾರ್ಟನರ್ಸ್​ ಜಾಗತಿಕ ಬಂಡವಾಳ ಹೂಡಿಕೆ ಸಂಸ್ಥೆಯಾಗಿದೆ. ಸಾಫ್ಟ್​ವೇರ್​, ಡೇಟಾ ಮತ್ತು ತಂತ್ರಜ್ಞಾನ ಆಧಾರಿತವಾದ ಉದಯೋನ್ಮುಖ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತದೆ.

    ಇದನ್ನೂ ಓದಿ: ಗಂಡನ ಕೊಂದಳು, ಸಾವಿಗೆ ಕೋವಿಡ್​ ಕಾರಣ ಎಂದಳು…!

    ನಮ್ಮ ಇತರ ಪಾಲುದಾರರಂತೆ ವಿಸ್ಟಾ ಕೂಡ ನಮ್ಮ ಕಂಪನಿಯ ರೀತಿಯಲ್ಲೇ ಅಭಿವೃದ್ಧಿ ಮತ್ತು ಪರಿವರ್ತನಾಶೀಲತೆಯಲ್ಲಿ ನಂಬಿಕೆ ಹೊಂದಿದೆ. ಭಾರತೀಯರೆಲ್ಲರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾವೂ ಬೆಳೆಯುವ ಜತೆಗೆ ಭಾರತೀಯ ಡಿಜಿಟಲ್​ ರಂಗದಲ್ಲಿ ಭಾರಿ ಪರಿವರ್ತನೆ ತರುವಲ್ಲಿ ಈ ಒಪ್ಪಂದ ಸಹಕಾರಿಯಾಗಲಿದೆ ಎಂದು ಆರ್​ಐಎಲ್​ನ ಚೇರ್ಮನ್​ ಮುಖೇಶ್​ ಅಂಬಾನಿ ಹೇಳಿದ್ದಾರೆ.

    ಭಾರತೀಯ ಸ್ಪರ್ಶ: ವಿಸ್ಟಾ ಸಂಸ್ಥೆ ಅಮೆರಿಕ ಮೂಲದ್ದಾದರೂ ಭಾರತೀಯ ಸ್ಪರ್ಶವನ್ನು ಹೊಂದಿದೆ. ಇದರ ಮಾಲೀಕರಾದ ರಾಬರ್ಟ್​ ಮತ್ತು ಬ್ರಿಯಾನ್​ ಗುಜರಾತ್​ ಮೂಲದವರಾಗಿದ್ದಾರೆ. ಇವರಿಬ್ಬರೂ ಜಾಗತಿಕ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ನಾಯಕರು ಎನಿಸಿಕೊಂಡಿದ್ದಾರೆ. ಭಾರತ ಮತ್ತು ಡಿಜಿಟಲ್​ ಭಾರತ ಸಮಾಜದ ಪರಿವರ್ತನಾಶೀಲ ಗುಣದಲ್ಲಿ ಅಪಾರ ನಂಬಿಕೆಯುಳ್ಳವರಾಗಿದ್ದಾರೆ. ವಿಸ್ಟಾದ ರಿಲಯನ್ಸ್​ ಜಿಯೋದಲ್ಲಿನ ಹೂಡಿಕೆ, ಆ ಸಂಸ್ಥೆ ಭಾರತದಲ್ಲಿ ಇದುವರೆಗೆ ಮಾಡಿರುವ ಗರಿಷ್ಠ ಹೂಡಿಕೆ ಎನಿಸಿಕೊಂಡಿದೆ.

    ಹೊರಗಡೆ ತಿರುಗಾಡಿ ಬರುತ್ತೇವೆಂದು ಹೇಳಿ ಹೊರಟ ನವದಂಪತಿ ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts