More

    ಫೇಸ್ ಬುಕ್ ಜಾಹೀರಾತು; ಹೂಡಿಕೆ ನೆಪದಲ್ಲಿ 1.88 ಕೋಟಿ ಧೋಖಾ

    ಬೆಂಗಳೂರು: ಫೇಸ್ ಬುಕ್ ಜಾಹೀರಾತು ನೋಡಿ ಷೇರು ಮತ್ತು ಈಕ್ವೀಟ್ಸ್‌ಗಳಲ್ಲಿ ಹೂಡಿಕೆ ಮಾಡಿದ ಉದ್ಯಮಿಗೆ ಸೈಬರ್ ಕಳ್ಳರು ಬರೋಬ್ಬರಿ 1.88 ಕೋಟಿ ರೂ. ವಂಚನೆ ಮಾಡಿದ್ದಾರೆ.

    ಶಾಂತಿನಗರದ ನಂಜಪ್ಪ ರಸ್ತೆಯಲ್ಲಿ ನೆಲೆಸಿರುವ 45 ವರ್ಷದ ಉದ್ಯಮಿ ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಕೇಂದ್ರ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    2024ರ ಫೇಸ್ ಬುಕ್ ನಲ್ಲಿ ಷೇರು ಮತ್ತು ಈಕ್ವೀಟ್ಸ್‌ಗಳಲ್ಲಿ ಹೂಡಿಕೆ ಕುರಿತು ಜಾಹೀರಾತು ನೋಡಿದ್ದಾರೆ. ಬಳಿಕ ಅದರಲ್ಲಿನ ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ರಾಣಿ ಖಾನ್ ಎಂಬಾಕೆ ಕರೆ ಸ್ವೀಕರಿಸಿ ಮಾತನಾಡಿ ವಾಟ್ಸ್‌ಆ್ಯಪ್ ಕಾಲ್‌ನಲ್ಲಿ ಮಾತನಾಡುವಂತೆ ಸಲಹೆ ಕೊಟ್ಟಿದ್ದಾರೆ. ವಾಟ್ಸ್‌ಆ್ಯಪ್ ಕರೆ ಮಾಡಿ ಉದ್ಯಮಿಗೆ, ಷೇರು ಮತ್ತು ಈಕ್ವೀಟ್ಸ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರಲಿದೆ ಎಂದು ಆಮಿಷವೊಡ್ಡಿದ್ದಾರೆ.

    ಇದಕ್ಕೆ ಒಪ್ಪಿದ ಉದ್ಯಮಿಗೆ ವಿವಿಧ ಬ್ಯಾಂಕ್ ಖಾತೆಗಳ ನಂಬರ್ ಕೊಟ್ಟು ಆರಂಭದಲ್ಲಿ 10 ಸಾವಿರ ರೂ. ಆನಂತರ 20 ಸಾವಿರ ರೂಪಾಯಿ ಹೂಡಿಕೆ ಮಾಡಿಸಿಕೊಂಡು ಹಂತ ಹಂತವಾಗಿ ಬರೋಬ್ಬರಿ 1.88 ಕೋಟಿ ರೂ. ವರ್ಗಾವಣೆ ಮಾಡಿಸಿಕೊಂಡಿದ್ದರು. ಕೊನೆಗೊಂದು ದಿನ ಉದ್ಯಮಿ, ತನ್ನ ಲಾಭಾಂಶ ಕೊಡುವಂತೆ ಕೇಳಿದಾಗ ಸಬೂಬು ಹೇಳಿ ಮತ್ತಷ್ಟು ಹಣ ಹೂಡಿಕೆ ಮಾಡಿದರೆ ಡ್ರಾ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

    ಅದಕ್ಕೆ ಒಪ್ಪದೆ ಹೂಡಿಕೆ ಹಣ ವಾಪಸ್ ಕೊಡುವಂತೆ ಒತ್ತಾಯ ಮಾಡಿದಾಗ ಸಂಪರ್ಕ ಕಡಿತ ಮಾಡಿಕೊಂಡಿದ್ದಾರೆ. ಕೊನೆಗೆ ಸೈಬರ್ ವಂಚನೆಗೆ ಒಳಗಾಗಿರುವುದಾಗಿ ಗೊತ್ತಾಗಿ ಉದ್ಯಮಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts