More

    ದೇಶದ ಅತಿದೊಡ್ಡ ಔಷಧ ಕಂಪನಿ ತಾತ್ಕಾಲಿಕವಾಗಿ ಮುಚ್ಚಿದ್ದೇಕೆ?

    ಅಹಮದಾಬಾದ್​: ದೇಶದ ಅತಿದೊಡ್ಡ ಔಷಧ ತಯಾರಿಕಾ ಕಂಪನಿಗಳಲ್ಲಿ ಒಂದೆನಿಸಿದ ಕ್ಯಾಡಿಲಾ ಫಾರ್ಮಸ್ಯೂಟಿಕಲ್ಸ್​​ ತಾತ್ಕಾಲಿಕವಾಗಿ ಬಂದ್​ ಆಗಿದೆ. ಈ ಕಂಪನಿಯ 26ಕ್ಕೂ ಹೆಚ್ಚು ಸಿಬ್ಬಂದಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿರುವುದು ಇದಕ್ಕೆ ಕಾರಣ. ಇದು ಭಾರಿ ಆತಂಕಕ್ಕೆ ಕಾರಣವಾಗಿದೆ.

    ಆರು ದಿನಗಳ ಹಿಂದೆ ಈ ಕಂಪನಿಯ ಆರು ಜನರಿಗೆ ಕರೊನಾ ಸೋಂಕು ತಗುಲಿರುವುದು ಖಚಿತಪಟ್ಟಿತ್ತು. ಈ ವಾರ ಇನ್ನೂ 21 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ಗುಜರಾತ್​ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಗಂಡನ ಕೊಂದಳು, ಸಾವಿಗೆ ಕೋವಿಡ್​ ಕಾರಣ ಎಂದಳು…!

    ಮೇ 5ರಂದು ಕ್ಯಾಡಿಲಾ ಕಂಪನಿಯ 31 ಜನರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಇದರಲ್ಲಿ 21 ಜನರಿಗೆ ಸೋಂಕು ತಗುಲಿರುವುದು ಖಚಿತಪಟ್ಟಿರುವುದಾಗಿ ಹೇಳಿದ್ದಾರೆ.

    ಈ ಹಿನ್ನೆಲೆಯಲ್ಲಿ ಕಂಪನಿಯನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಗುರುವಾರವೇ ಆದೇಶಿಸಲಾಗಿತ್ತು. ಇದೀಗ ಕಂಪನಿಯನ್ನು ಮುಚ್ಚಲಾಗಿದೆ. ಈ ಕಂಪನಿಯ ಇನ್ನೂ 95 ಸಿಬ್ಬಂದಿಯನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಕಂಪನಿಯಲ್ಲಿ ಸ್ಯಾನಿಟೈಸಿಂಗ್​ ಕೆಲಸ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಲಾಕ್​ಡೌನ್​ನಲ್ಲಿ ಸರ್ಕಾರಿ ಶಾಲೆಯೇ ಕುಡುಕರ ಅಡ್ಡ!

    ಇದಕ್ಕೂ ಮುನ್ನ ಹೇಳಿಕೆ ಬಿಡುಗಡೆ ಮಾಡಿದ್ದ ಕ್ಯಾಡಿಲಾ ಫಾರ್ಮಸ್ಯೂಟಿಕಲ್ಸ್​, ನಮ್ಮ ಕಂಪನಿಯ ಢೋಲ್ಕಾ ಉತ್ಪಾದನಾ ಘಟಕದ 26 ಸಿಬ್ಬಂದಿಗೆ ಕರೊನಾ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಈ ಹಿನ್ನೆಲೆಯಲ್ಲಿ ಆ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚಲು ಸ್ವಯಂನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿತ್ತು.

    ರಿಲಯನ್ಸ್​ ಜಿಯೋಕ್ಕೆ ಮತ್ತೊಂದು ಜಾಕ್​ಪಾಟ್​, ಹರಿದು ಬಂತು 11,367 ಕೋಟಿ ರೂ. ಬಂಡವಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts