More

  ಲಾಕ್​ಡೌನ್​ ಸುತ್ತ ‘ಉಂಡೆನಾಮ’; ಕೋಮಲ್​ ಹೊಸ ಚಿತ್ರದ ಟ್ರೇಲರ್​ ಬಿಡುಗಡೆ

  ಬೆಂಗಳೂರು: ಕೋಮಲ್ ನಾಯಕರಾಗಿ ಅಭಿನಯಿಸಿರುವ ಚಿತ್ರ ‘ಉಂಡೆನಾಮ’ ಇದೇ ಶುಕ್ರವಾರ (ಏ 14) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಇತ್ತೀಚೆಗೆ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ.

  ಟ್ರೇಲರ್​ ಬಿಡುಗಡೆ ಮಾಡುವುದಕ್ಕೆ ಕೋಮಲ್​ ಸಹೋದರ ಹಾಗೂ ನಟ-ಸಂಸದ ಜಗ್ಗೇಶ್​ ಬಂದಿದ್ದರು. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರ ಉಮೇಶ್ ಬಣಕಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

  ಇದನ್ನೂ ಓದಿ: ಮೈ ಬೇಬಿ, ಬೊಮ್ಮಾ..ಜಾಕ್ವೆಲಿನ್…ತಿಹಾರ್ ಜೈಲಿನಿಂದಲೇ ಪತ್ರ ಬರೆದ ಸುಕೇಶ್!

  ಲಾಕ್​ಡೌನ್​ ಸುತ್ತ 'ಉಂಡೆನಾಮ'; ಕೋಮಲ್​ ಹೊಸ ಚಿತ್ರದ ಟ್ರೇಲರ್​ ಬಿಡುಗಡೆಕೋಮಲ್​ ನೋಡಿ ಕಾಮಿಡಿ ಮಾಡುವುದನ್ನು ಕಲಿಯಬೇಕು ಎಂದ ಜಗ್ಗೇಶ್​, ‘ಕೋಮಲ್​ ಬಹಳ ವರ್ಷಗಳ ನಂತರ ನಟಿಸಿರುವ ಚಿತ್ರವಿದು. ಅವನು ಕಾಮಿಡಿ ಪಾತ್ರಗಳನ್ನು ಮಾಡುವುದನ್ನು ನೋಡಿದಾಗ, ಅವನಿಂದ ನಾನು ಕಲಿಯುವುದು ಬಹಳಷ್ಟಿದೆ ಎಂದನಿಸಿತ್ತು. ಅಷ್ಟು ಚೆನ್ನಾಗಿ ಕೋಮಲ್​ ಅಭಿನಯಿಸುತ್ತಾನೆ’ ಎಂದು ಜಗ್ಗೇಶ್​ ಮೆಚ್ಚಿಕೊಂಡರು. ಅಷ್ಟೇ ಅಲ್ಲ, ಚಿತ್ರ ಗೆಲ್ಲಲಿ ಎಂದು ಶುಭ ಹಾರೈಸಿದರು.

  ಕೋಮಲ್​ಗೆ ನಿರ್ದೇಶಕ ರಾಜಶೇಖರ್​ ಹೇಳಿದ ಕಥೆ ಬಹಳ ಇಷ್ಟವಾಯಿತಂತೆ. ‘ಬಹಳ ದಿನಗಳ ನಂತರ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕ ರಾಜಶೇಖರ್ ಅವರು ಹೇಳಿದ ಕಥೆ ಇಷ್ಟವಾಯಿತು. ನನ್ನ ಜತೆ ತಬಲ ನಾಣಿ, ಹರೀಶ್ ರಾಜ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಸಿನಿಮಾ ನೋಡಿ ಹಾರೈಸಿ’ ಎಂದರು.

  ಇದನ್ನೂ ಓದಿ: ‘ಟೈಗರ್​ ವರ್ಸಸ್​ ಪಠಾಣ್​’ನಲ್ಲಿ ಮತ್ತೆ ಜತೆಯಾಗಲಿದ್ದಾರೆ ಸಲ್ಮಾನ್​ ಮತ್ತು ಶಾರುಖ್​

  ರಾಜಶೇಖರ್​ ಕಥೆ ಬರೆದುಕೊಂಡು ನಿರ್ಮಾಪಕರ ಬಳಿ ಹೋದಾಗ, ಅವರು ಈ ಚಿತ್ರವನ್ನು ಕೋಮಲ್​ ಮಾಡಿದರೆ ಚೆಂದ ಎಂದರಂತೆ. ‘ನಾನು ಕೋಮಲ್ ಅವರಿಗಾಗಿಯೇ ಈ ಕಥೆ ಮಾಡಿದೆ. ಆದರೆ ಅವರು ನಟಿಸಲು ಒಪ್ಪುತ್ತಾರೊ? ಇಲ್ಲವೊ? ಎಂಬ ಆತಂಕವಿತ್ತು. ಕಥೆ ಕೇಳಿದ ಮೇಲೆ, ಈ ಕಥೆ ಚೆನ್ನಾಗಿದೆ ಎಂದರು. ನಾನಲ್ಲ, ಯಾರು ಮಾಡಿದರೂ ಯಶಸ್ವಿಯಾಗುತ್ತದೆ ಎಂದರು. ಅದು ಅವರ ದೊಡ್ಡ ಗುಣ’ ಎಂದು ನೆನಪಿಸಿಕೊಂಡರು ರಾಜಶೇಖರ್.

  ‘ಉಂಡೆನಾಮ’ ಚಿತ್ರವನ್ನು ಟಿ.ಆರ್ ಚಂದ್ರಶೇಖರ್ ಹಾಗೂ ಸಿ. ನಂದಕಿಶೋರ್ ನಿರ್ಮಿಸಿದ್ದು, ಧನ್ಯಾ ಬಾಲಕೃಷ್ಣ, ಹರೀಶ್ ರಾಜ್, ತಬಲನಾಣಿ, ಅಪೂರ್ವ ಹಾಗೂ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ಚಿತ್ರದ ಕುರಿತು ಮಾತನಾಡಿದರು.

  ಹೆಣ್ಣು ಮಗುವಿಗೆ ಜನ್ಮ ನೀಡಿದ ಸೀರಿಯಲ್ ನಟಿ ದಿವ್ಯಾ ಶ್ರೀಧರ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts