More

    ಹೆಣ್ಣು ಮಗುವಿಗೆ ಜನ್ಮ ನೀಡಿದ ಸೀರಿಯಲ್ ನಟಿ ದಿವ್ಯಾ ಶ್ರೀಧರ್

    ಬೆಂಗಳೂರು: ‘ಆಕಾಶದೀಪ’ ಸೀರಿಯಲ್ ಖ್ಯಾತಿಯ ನಟಿ ದಿವ್ಯಾ ಶ್ರೀಧರ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತೋಷದ ವಿಚಾರವನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ನಟಿ ದಿವ್ಯಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ- ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ.ಮುದ್ದು ಮಗಳ ಕೈ ಹಿಡಿದು ಕ್ಲಿಕ್ಕಿಸಿರುವ ಫೋಟೋವನ್ನು ದಿವ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ತಾಯಿ- ಮಗು ಆರೋಗ್ಯವಾಗಿರಿ ಎಂದು ಕಾಮೆಂಟ್​ ಮಾಡಿದ್ದಾರೆ.

    ಇದನ್ನೂ ಓದಿ:  ಮೈ ಬೇಬಿ, ಬೊಮ್ಮಾ..ಜಾಕ್ವೆಲಿನ್…ತಿಹಾರ್ ಜೈಲಿನಿಂದಲೇ ಪತ್ರ ಬರೆದ ಸುಕೇಶ್!

    ಈ ಕಾಯುವಿಕೆ ಬಹಳ ವಿಶೇಷವಾದದ್ದು. ಈ ಹಿಂದೆ ಏನು ನಡೆದಿತ್ತು ಎನ್ನುವುದಕ್ಕಿಂತ ಇನ್ನು ಮುಂದೆ ಏನು ಆಗುತ್ತದೆ ಎನ್ನುವುದು ಮುಖ್ಯ. ನೀನು ನನಗೆ ಪ್ರೀತಿ, ಬಲ, ಬೆಂಬಲ ಎನ್ನವನ್ನು ಕೇಳುವುದಕ್ಕೂ ಮೊದಲೇ ಕೊಟ್ಟಿದ್ದೀಯಾ. ನನ್ನ ಭಾಗವಾಗಿದ್ದಕ್ಕೆ ನಿನಗೆ ಕೃತಜ್ಞತೆಗಳು. ಎಂದೆಂದಿಗೂ ನಾನು ನಿನ್ನವಳೇ ಎಂದು ಮಾತು ಕೊಡುತ್ತಿದ್ದೇನೆ. ಎಂದೆಂದು ನಿನ್ನೊಟ್ಟಿಗೆ ನಾನು ಇರುತ್ತೇನೆ. ನನ್ನ ಮುದ್ದು ಕಂದ. ಲವ್ ಯು ಡಾರ್ಲಿಂಗ್. ಈ ಹಾದಿಯಲ್ಲಿ ನನ್ನೊಟ್ಟಿಗೆ ನಿಂತ ಎಲ್ಲರಿಗೂ ಧನ್ಯವಾದ ಎಂದು ನಟಿ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ:  ಬಂಡೀಪುರದಲ್ಲಿ ಮೋದಿ: ಗಮನ ಸೆಳೆದ ಸಫಾರಿ ಫೋಟೋಗಳು
    ಕಳೆದ ವರ್ಷ ದಿವ್ಯಾ ಶ್ರೀಧರ್ ಅವರು ಪತಿ ಅರ್ನವ್ ಕಿರುಕುಳ ವಿರುದ್ಧ ತಿರುಗಿ ಬಿದ್ದಿದ್ದರು. ಪ್ರೀತಿಸಿ ಮದುವೆಯಾದ ಗಂಡ ನಾನು ಗರ್ಭಿಣಿ ಆಗುತ್ತಿದ್ದಂತೆ ಮತ್ತೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ನನಗೆ ಕಿರುಕುಳ ಕೊಡುತ್ತಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಕಿರುತೆರೆ ನಟ ಅರ್ನವ್ ಬಂಧನವಾಗಿತ್ತು.

    ವಿಷಕಾರಿ ಅಣಬೆ ಸೇವಿಸಿ ವಾಂತಿ, ಹೊಟ್ಟೆನೋವು; ಒಂದೇ ಕುಟುಂಬದ 5 ಮಂದಿ ಅಸ್ವಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts