More

    ವಿಷಕಾರಿ ಅಣಬೆ ಸೇವಿಸಿ ವಾಂತಿ, ಹೊಟ್ಟೆನೋವು; ಒಂದೇ ಕುಟುಂಬದ 5 ಮಂದಿ ಅಸ್ವಸ್ಥ

    ತ್ರಿಪುರಾ: ವಿಷಕಾರಿ ಅಣಬೆಗಳನ್ನು ಸೇವಿಸಿ ಒಂದೇ ಕುಟುಂಬದ ಕನಿಷ್ಠ ಐದು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

    ನಿನ್ನೆ ರಾತ್ರಿ ಕುಟುಂಬಸ್ಥರು ಕಾಡು ಅಣಬೆಯ ಪದಾರ್ಥವನ್ನು ಮಾಡಿ ಸೇವಿಸಿದ್ದಾರೆ. ಕಾಡು ಅಣಬೆಯನ್ನು ಸೇವಿಸಿದ ನಂತರ ವಾಂತಿ ಮತ್ತು ಹೊಟ್ಟೆನೋವು ಕಾಣಿಸಿಕೊಂಡಿದೆ. ಬುಡಕಟ್ಟು ಕುಟುಂಬದ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸೆಪಹಿಜಾಲಾ ಜಿಲ್ಲೆಯ ಬಿಶ್ರಾಮ್‌ಗಂಜ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಇದನ್ನೂ ಓದಿ: ಸುಕೇಶ್ ಚಂದ್ರಶೇಖರ್ ,ದೆಹಲಿ,ಜಾಕ್ವೆಲಿನ್ ಫೆರ್ನಾಂಡಿಸ್
    ಮೂರು ವರ್ಷದ ಮಗು ಸೇರಿದಂತೆ ಇತರರ ಸ್ಥಿತಿ ಹದಗೆಟ್ಟಾಗ ಅವರನ್ನು ಚಿಕಿತ್ಸೆಗಾಗಿ ಸರ್ಕಾರಿ ಗೋವಿಂದ್ ಬಲ್ಲಭ್ ಪಂತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರತಿ ವರ್ಷ ಈಶಾನ್ಯ ರಾಜ್ಯಗಳಲ್ಲಿ ಕಾಡು ಅಣಬೆಗಳನ್ನು ಸೇವಿಸಿದ ನಂತರ ಅನೇಕ ಜನರು, ಹೆಚ್ಚಾಗಿ ಬುಡಕಟ್ಟು ಜನಾಂಗದವರು ಪ್ರಾಣ ಕಳೆದುಕೊಳ್ಳುತ್ತಾರೆ ಅಥವಾ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಕಾಡು ಅಣಬೆ ಸೇವನೆ ವಿರುದ್ಧ ಜನಜಾಗೃತಿ ಅಗತ್ಯ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

    ಮೈ ಬೇಬಿ, ಬೊಮ್ಮಾ..ಜಾಕ್ವೆಲಿನ್…ತಿಹಾರ್ ಜೈಲಿನಿಂದಲೇ ಪತ್ರ ಬರೆದ ಸುಕೇಶ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts