ಆಸ್ಕರ್​ಗೆ ಭಾರತದ ಆಯ್ಕೆ ಯಾವುದು?

Oscar
Published on

ಅಕ್ಟೋಬರ್ ಬಂತೆಂದರೆ, ಇಡೀ ದೇಶದ ಗಮನ ಆಸ್ಕರ್ ಕಣಕ್ಕೆ ದೇಶದಿಂದ ಯಾವ ಚಿತ್ರ ಆಯ್ಕೆಯಾಗುತ್ತದೆ ಎಂಬುದರ ಕುರಿತಾಗಿರುತ್ತದೆ. ಕಳೆದ ವರ್ಷ, ಮಲಯಾಳಂ ಚಿತ್ರ ‘ಜಲ್ಲಿಕಟ್ಟು’ ಭಾರತದಿಂದ ಅಧಿಕೃತ ಆಯ್ಕೆಯಾಗಿತ್ತು. ಈ ವರ್ಷ ಯಾವ ಚಿತ್ರವನ್ನು ಆಯ್ಕೆ ಮಾಡಬೇಕು ಎಂಬ ಪ್ರಕ್ರಿಯೆ ಶುರುವಾಗಿದ್ದು, ಖ್ಯಾತ ಮಲಯಾಳಂ ನಿರ್ದೇಶಕ ಶಾಜಿ ಕರುಣ್ ನೇತೃತ್ವದ 15 ಜನರ ಆಯ್ಕೆ ಸಮಿತಿಯು ಕೊಲ್ಕತ್ತಾದಲ್ಲಿ ಬೀಡುಬಿಟ್ಟಿದೆ.

ಈ ಬಾರಿ 14 ಚಿತ್ರಗಳು ಸ್ಪರ್ಧಿಸಿದ್ದು, ಮಲಯಾಳಂ ಚಿತ್ರ ‘ನಾಯತ್ತು’, ತಮಿಳಿನ ‘ಮಂಡೇಲ’, ಹಿಂದಿಯ ‘ಸರ್ದಾರ್ ಉಧಮ್ ಮತ್ತು ‘ಶೇರ್ನಿ’, ಗುಜರಾತಿಯ ‘ಚೆಲ್ಲೋ ಶೋ’, ಅಸ್ಸಾಂನ ‘ಬ್ರಿಡ್ಜ್’ ಮುಂತಾದ ಚಿತ್ರಗಳು ಪೈಪೋಟಿ ನಡೆಸಿವೆ. ಈ ಪೈಕಿ ಒಂದು ಚಿತ್ರವನ್ನು ಆಯ್ಕೆ ಸಮಿತಿಯು ಆಯ್ಕೆ ಮಾಡಿ, 2022ರ ಮಾರ್ಚ್​ನಲ್ಲಿ ನಡೆಯುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ಅಂತಾರಾಷ್ಟ್ರೀಯ ಕಣಕ್ಕೆ, ಭಾರತದ ಪ್ರತಿನಿಧಿಯಾಗಿ ಕಳಿಸಿಕೊಡಬೇಕಿದೆ. ಈ ಪೈಕಿ ಯಾವ ಚಿತ್ರ ಅಧಿಕೃತವಾಗಿ ಆಯ್ಕೆಯಾಗಲಿದೆ ಎಂಬುದು ಕೆಲವೇ ದಿನಗಳಲ್ಲಿ ಬಹಿರಂಗಗೊಳ್ಳಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net