ಶಾರುಖ್ ಪುತ್ರಿ ಸುಹಾನಾ ಬಾಲಿವುಡ್ ಪ್ರವೇಶ ಯಾವಾಗ? ಫೋಟೋಶೂಟ್​ಗಳು ವೈರಲ್...

Published on
ನಟ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಅವರು ಇನ್ನೂ ಬಾಲಿವುಡ್ ಸಿನಿಮಾಗಳಲ್ಲಿ ನಟಿಯಾಗಿ ಎಂಟ್ರಿ ಕೊಟ್ಟಿಲ್ಲ. ಆದರೆ, ಸುಹಾನಾ ಖಾನ್​ಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ. ಆವರ ಅಭಿಮಾನಿಗಳಿಗೆ ಇವರನ್ನು ಪರದೆಯ ಮೇಲೆ ನೋಡಲು ಕಾತುರರಾಗಿದ್ದಾರೆ. ಅಂತಹ ಅಭಿಮಾನಿಗಳಿಗೆ ಇಲ್ಲೊಂದು ಸಂತಸದ ಸುದ್ದಿ ಇದೆ.
ಅಂದಹಾಗೆ, ಬಾಲಿವುಡ್​ನ ಖ್ಯಾತ ನಿರ್ದೇಶಕಿ ಜೋಯಾ ಅಖ್ತರ್ ನಿರ್ದೇಶನ ಮಾಡಲಿರುವ ಒಂದು ಹೆಸರಿಲ್ಲದ ಚಿತ್ರದಲ್ಲಿ ಸುಹಾನಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಇಷ್ಟು ದಿನ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಆದರೆ, ಇದೀಗ ಈ ಸಿನಿಮಾ ಏಪ್ರಿಲ್ 2022ಕ್ಕೆ ಸೆಟ್ಟೇರಲಿದೆ ಎಂಬ ಮಾಹಿತಿಗಳು ಕೇಳಿಬರುತ್ತಿವೆ. ಇನ್ನು, ಈ ಕುರಿತು ಅಧಿಕೃತ ಘೋಷಣೆಯೊಂದೆ ಬಾಕಿಯಿದೆ.
ಇನ್ನು, ಮುಂದೆ ಆಗಲಿರುವ ನಟಿ ಸುಹಾನಾ ಖಾನ್ ಅವರ ಇತ್ತೀಚಿನ ಫೋಟೋಗಳು ವೈರಲ್ ಆಗಿವೆ. ಸುಹಾನಾ ಖಾನ್​ಗೆ ಇನ್​ಸ್ಟಾಗ್ರಾಂನಲ್ಲಿ ಸುಮಾರು 1 ಮಿಲಿಯನ್​ಗೂ ಹೆಚ್ಚು ಫಾಲೋವರ್​ಗಳಿದ್ದಾರೆ. ಇತ್ತೀಚೆಗೆ, ಖ್ಯಾತ ವಸ್ತ್ರವಿನ್ಯಾಸಕ ಮನೀಶ್ ಮಲ್ಹೋತ್ರಾ ವಿನ್ಯಾಸ ಮಾಡಿರುವ ಬಿಳಿ ಬಣ್ಣದ ಸೀರೆಯನ್ನು ಧರಿಸಿ ಸುಹಾನಾ ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ.
ಈ ಹಿಂದೆ ಕೂಡಾ ಮನೀಶ್ ಅವರೇ ವಿನ್ಯಾಸಗೊಳಿಸಿದ ಒಂದು ಕೆಂಪು ಬಣ್ಣದ ಸೀರೆಯಲ್ಲಿ ಸುಹಾನಾ ಮಿಂಚಿದ್ದರು. ಫೋಟೋಶೂಟ್​ಗಳಲ್ಲಿ ಬರೀ ಸೀರೆಗಳಲ್ಲೇ ಮಿಂಚುತ್ತಿರುವ ಸುಹಾನಾ ಅವರನ್ನು ಕಂಡು ಅಭಿಮಾನಿಗಳು ಕೂಡಾ ದಿಲ್ ಖುಷ್ ಆಗಿದ್ದಾರೆ. ಸುಹಾನಾ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net