

ಮುಂಬೈ: ನವರಾತ್ರಿ ಹಿನ್ನೆಲೆಯಲ್ಲಿ ಇಡೀ ದೇಶವೇ ದುರ್ಗಾಪೂಜೆಯನ್ನು ಆಚರಿಸುತ್ತಿದೆ. ಇದು ಪಶ್ಚಿಮ ಬಂಗಾಳದ ಪ್ರಮುಖ ಹಬ್ಬವೂ ಹೌದು. ಈ ನವರಾತ್ರಿಯ ಸಂದರ್ಭದಲ್ಲಿ ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ದೇಶದ ಮೂಲೆ ಮೂಲೆಯಲ್ಲೂ ದುರ್ಗಾ ಪೂಜೆಯ ಮಂಟಪಗಳು ಸಿದ್ಧವಾಗಿವೆ. ಸೆಲೆಬ್ರಿಟಿಗಳು ಕೂಡ ನವರಾತ್ರಿ ಪೂಜೆಯಲ್ಲಿ ಪಾಲ್ಗೊಳುತ್ತಿದ್ದಾರೆ. ಈ ಮಧ್ಯೆ ಬಾಲಿವುಡ್ ನಟಿ ಕಾಜೋಲ್ ( Actress Kajol ) ಪೂಜೆಯ ಸಂದರ್ಭದಲ್ಲಿ ಯಾವುದೋ ಅನುಚಿತ ಸಂಗತಿಯನ್ನು ನೋಡಿ ಕೋಪಗೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಗಮನ ಸೆಳೆಯುತ್ತಿದೆ.
ನಟಿ ಆಲಿಯಾ ಭಟ್ ಮತ್ತು ಅವರ ಸಹೋದರಿ ಶಾಹೀನ್ ಬಟ್ ಕೂಡ ಪೂಜೆಯಲ್ಲಿ ಉಪಸ್ಥಿತರಿದ್ದರು. ಸ್ವಲ್ಪ ಸಮಯದ ನಂತರ ಪೂಜೆ ಪ್ರಾರಂಭವಾಯಿತು. ಈ ವೇಳೆ ಪಾದರಕ್ಷೆಗಳನ್ನು ಧರಿಸಿದ ಕೆಲವರು ಮಂಟಪವನ್ನು ಪ್ರವೇಶಿಸಿ ದೇವಿಯ ಮೂರ್ತಿಯ ಬಳಿ ಬಂದರು. ಇದನ್ನು ನೋಡಿದ ಕಾಜೋಲ್ ತುಂಬಾ ಆಕ್ರೋಶಗೊಂಡು, ಸ್ಥಳದಲ್ಲೇ ಅವರನ್ನು ತರಾಟೆಗೆ ತೆಗೆದುಕೊಂಡರು.
ಇಲ್ಲಿ ಪೂಜೆ ನಡೆಯುತ್ತಿದೆ ಸ್ವಲ್ಪ ಗೌರವ ಕೊಡಿ. ಯಾರು ಯಾರು ಶೂ ಧರಿಸಿದ್ದೀರಿ ಅದನ್ನು ಬಿಚ್ಚಿಡಿ ಎಂದು ಮೈಕ್ ಮೂಲಕ ಆಕ್ರೋಶದಿಂದಲೇ ಹೇಳಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನೇಕ ನೆಟ್ಟಿಗರು ಕಾಜೋಲ್ ನಡೆಯನ್ನು ಕಾಮೆಂಟ್ ಮೂಲಕ ಪ್ರಶಂಸಿಸಿದ್ದಾರೆ. (ಏಜೆನ್ಸೀಸ್)