ವಿಶಾಲ್ ಚಕ್ರಕ್ಕೆ ಯಶ್ ಸಾಥ್

Vishals-Chakra-Trailer-Simultaneously-In-4-Languages
Published on

ಬೆಂಗಳೂರು: ‘ಕೆಜಿಎಫ್’ ಚಿತ್ರದ ತಮಿಳು ಅವತರಣಿಕೆಯ ಟ್ರೇಲರ್ ಬಿಡುಗಡೆ ಮಾಡುವುದರ ಜತೆಗೆ, ಚಿತ್ರವನ್ನು ತಮಿಳುನಾಡಿನಾದ್ಯಂತ ಬಿಡುಗಡೆ ಮಾಡಿದ್ದರು ನಟ ವಿಶಾಲ್.ಇದೀಗ ವಿಶಾಲ್ ನಾಯಕತ್ವದ ‘ಚಕ್ರ’ ಸಿನಿಮಾದ ಕನ್ನಡ ಅವತರಣಿಕೆಯ ಟ್ರೇಲರ್​ಅನ್ನು ಯಶ್ ಶನಿವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಲಿಂಕ್ ಶೇರ್ ಮಾಡಿ ರಿಲೀಸ್ ಮಾಡಿದ್ದಾರೆ.

ಸೈಬರ್ ಕ್ರೈಂ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ವಿಶಾಲ್ ಆರ್ವಿು ಆಫೀಸರ್ ಆಗಿ ಕಾಣಿಸಿಕೊಂಡರೆ, ಶ್ರದ್ಧಾ ಶ್ರೀನಾಥ್ ತನಿಖಾಧಿಕಾರಿಯ ಪೋಷಾಕು ತೊಟ್ಟಿದ್ದಾರೆ. ಸೈಬರ್ ಹ್ಯಾಕಿಂಗ್ ಮತ್ತು ದರೋಡೆ ಹಿನ್ನೆಲೆಯಲ್ಲಿ ಸಿನಿಮಾ ಸಾಗಲಿದ್ದು, ಟ್ರೇಲರ್​ನಲ್ಲಿ ಅದಕ್ಕೆ ಸಾಕ್ಷ್ಯ ಲಭಿಸಿದೆ.

ಒಟ್ಟು 4 ಭಾಷೆಗಳಲ್ಲಿ ನಿರ್ವಣವಾಗಿರುವ ‘ಚಕ್ರ’ ಸಿನಿಮಾಕ್ಕೆ, ದಕ್ಷಿಣದ ನಾಲ್ಕು ಖ್ಯಾತನಾಮ ನಟರು ಟ್ರೇಲರ್ ಹಂಚಿಕೊಳ್ಳುವ ಮೂಲಕ ಶುಭಹಾರೈಸಿದ್ದಾರೆ. ಮಲಯಾಳನಂನಲ್ಲಿ ಮೋಹನ್​ಲಾಲ್, ತೆಲುಗಿನಲ್ಲಿ ರಾಣಾ ದಗ್ಗುಬಾಟಿ, ತಮಿಳಿನಲ್ಲಿ ಕಾರ್ತಿ ಮತ್ತು ಆರ್ಯ ಜಂಟಿಯಾಗಿ ಟ್ರೇಲರ್ ಶೇರ್ ಮಾಡಿದ್ದಾರೆ. ‘ಚಕ್ರ’ ಚಿತ್ರಕ್ಕೆ ಎಂ.ಎಸ್. ಆನಂದನ್ ಆಕ್ಷನ್ ಕಟ್ ಹೇಳಿದ್ದು, ವಿಶಾಲ್ ನಿರ್ವಿುಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net