ಪ್ರಿಯತಮೆಯ ಹುಡುಕಾಟದಲ್ಲಿ ವಿನಯ್ ; ‘ಒಂದು ಸರಳ ಪ್ರೇಮಕಥೆ’ ಮೊದಲ ಹಾಡು ರಿಲೀಸ್​

OSPK-SONG-IMAGE
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ವಿನಯ್ ರಾಜಕುಮಾರ್‌ಗೆ ಸಿಂಪಲ್ ಸುನಿಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ ಚಿತ್ರ ‘ಒಂದು ಸರಳ ಪ್ರೇಮಕಥೆ’. ಹೊಸ ವರ್ಷದ ಸಂಭ್ರಮದಲ್ಲಿ ಚಿತ್ರತಂಡ ಇತ್ತೀಚೆಗಷ್ಟೆ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ‘ನೀನ್ಯಾರೆಲೆ… ನಿನಗಾಗಿಯೇ.. ಈ ಜೀವ ಭಾವ ಸೋಜಿಗ..’ ಎಂದು ಸಾಗುವ ಮೆಲೋಡಿ ಸಾಂಗ್ ಇದು.

ಸಿದ್ದು ಕೋಡಿಪುರ ಮತ್ತು ನಿರ್ದೇಶಕ ಸಿಂಪಲ್ ಸುನಿ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ವೀರ್ ಸಮರ್ಥ್ ಸಂಗೀತದಲ್ಲಿ ಬಾಲಿವುಡ್ ಗಾಯಕ ಅರ್ಮಾನ್ ಮಲಿಕ್ ಧ್ವನಿಯಾಗಿದ್ದಾರೆ. ಚಿತ್ರದಲ್ಲಿ ವಿನಯ್ ರಾಜಕುಮಾರ್‌ಗೆ ಕಮಲ್ ಹಾಸನ್ ಜತೆ ತಮಿಳಿನ ‘ವಿಕ್ರಮ್’ ಚಿತ್ರದಲ್ಲಿ ನಟಿಸಿದ್ದ ಸ್ವಾತಿಷ್ಠ ಕೃಷ್ಣನ್ ಮತ್ತು ‘ರಾಧಾಕೃಷ್ಣ’ ಎಂಬ ಹಿಂದಿ ಧಾರಾವಾಹಿಯಲ್ಲಿ ರಾಧೆಯ ಪಾತ್ರದಲ್ಲಿ ಅಭಿನಯಿಸಿದ್ದ ಮಲ್ಲಿಕಾ ಸಿಂಗ್ ನಾಯಕಿಯಾಗಿದ್ದಾರೆ. ಇಬ್ಬರಿಗೂ ಇದು ಚೊಚ್ಚಲ ಕನ್ನಡ ಸಿನಿಮಾ.

ಹಾಗೇ ವಿಶೇಷ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ನಟಿಸಲಿದ್ದು ಜತೆಗೆ ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧು ಕೋಕಿಲ ಪ್ರಮುಖ ತಾರಾಗಣದಲ್ಲಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯ ಸಿಂಪಲ್ ಸುನಿ ಮತ್ತು ತಂಡ ರಿಲೀಸ್‌ಗೆ ಸಿದ್ದತೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net