ಸದ್ಯದಲ್ಲೇ ತಾತ ಆಗಲಿದ್ದಾರೆ ವಿಕ್ರಮ್​!

Vikram - Final
Published on

ಹೊಸ ಹೀರೋಗಳಿಗೂ ಸಖತ್​ ಕಾಂಪಿಟೇಶನ್​ ಕೊಡುವ ಒಬ್ಬ ಕಾಲಿವುಡ್ ನಟ ಎಂದರೆ ಅದು 'ಚಿಯಾನ್​' ವಿಕ್ರಮ್​. ಪ್ರತಿ ಚಿತ್ರದಲ್ಲೂ ಒಂದಲ್ಲಾ ಒಂದು ವಿಭಿನ್ನ ಪಾತ್ರ, ಗೆಟಪ್​ ಮತ್ತು ಮೇಕ್​ಓವರ್​ ಮೂಲಕ ವಿಕ್ರಮ್​ ಗಮನಸೆಳೆಯುತ್ತಲೇ ಇರುತ್ತಾರೆ.

ಈಗ ವಿಕ್ರಮ್​ ರಿಯಲ್​ ಲೈಫ್​ನಲ್ಲಿ ಸದ್ಯ ತಾತಾ ಆಗಲಿದ್ದಾರೆ. ಇಷ್ಟು ಬೇಗ ತಾತಾನಾ? ಎಂಬ ಪ್ರಶ್ನೆ ಬರುವುದು ಸಹಜ. ಇಷ್ಟು ಬೇಗ ಏನಿಲ್ಲ. ಇಷ್ಟಕ್ಕೂ ವಿಕ್ರಮ್​ ಅವರ ವಯಸ್ಸೆಷ್ಟು ಎಂದುಕೊಂಡಿದ್ದೀರಿ? 1966ರಲ್ಲಿ ಹುಟ್ಟಿದ ಅವರಿಗೆ ಈಗ 54 ವರ್ಷ. ಆದರೆ, ಅವರು ಯುವಕರು ಸಹ ನಾಚುವಂತೆ ತಮ್ಮ ದೇಹವನ್ನು ಹುರಿಗೊಳಿಸಿದ್ದಾರೆ. ಈ ವಯಸ್ಸಿನಲ್ಲೂ ಹೊಸ ಹೀರೋಗಳಿಗೆ ಸವಾಲು ಹಾಕುವ ರೀತಿಯಲ್ಲಿ ಬಾಡಿ ಮೇಕ್​ಓವರ್​ ಮಾಡಿಕೊಳ್ಳುತ್ತಲೇ ಇದ್ದಾರೆ.

ಈಗ ವಿಷಯಕ್ಕೆ ಬರುವುದಾರೆ, ಕೆಲವು ವರ್ಷಗಳ ಹಿಂದೆ, ಅವರ ಮಗಳು ಅಕ್ಷಿತಾ, ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಮೊಮ್ಮಗನನ್ನು ಮದುವೆಯಾಗಿದ್ದು ನೆನಪಿದೆ ತಾನೇ? ಈಗ ಅಕ್ಷಿತಾ ಗರ್ಭಿಣಿಯಾಗಿದ್ದು, ಸದ್ಯದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ. ತಾನು ಸದ್ಯದಲ್ಲೇ ತಾತನಾಗುತ್ತಿರುವ ವಿಷಯದಿಂದ ಬಹಳ ಖುಷಿಯಾಗಿರುವ ವಿಕ್ರಮ್​, ಸದ್ಯದಲ್ಲೇ ಒಂದು ಸಮಾರಂಭ ಮಾಡಿ, ಸಂಭ್ರಮವನ್ನು ಹಂಚಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

ಸದ್ಯ ಲಾಕ್​ಡೌನ್​ನಿಂದ ಮನೆಯಲ್ಲೇ ಉಳಿದಿರುವ ವಿಕ್ರಮ್​, ಕರೊನಾ ಹಾವಳಿ ಕಡಿಮೆಯಾಗುತ್ತಿದ್ದಂತೆಯೇ, ಮಣಿರತ್ನಂ ನಿರ್ದೇಶನದ 'ಪೊನ್ನಿಯನ್​ ಸೆಲ್ವನ್​' ಚಿತ್ರದಲ್ಲಿ ನಟಿಸಿದ್ದಾರೆ. ಅದಲ್ಲದೆ 'ಕೋಬ್ರಾ' ಚಿತ್ರದ ಚಿತ್ರೀಕರಣದಲ್ಲೂ ಭಾಗವಹಿಸಲಿದ್ದಾರೆ. ಈ ಎರಡೂ ಚಿತ್ರಗಳ ಚಿತ್ರೀಕರಣ ಅರ್ಧ ಆಗಿದ್ದು, ಈ ಎರಡೂ ಮುಗಿದ ನಂತರ, ತಮ್ಮ ಮಗ ಧ್ರುವ ವಿಕ್ರಮ್​ ಜತೆಗೆ ಹೊಸ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net