

ಕಳೆದ ಕೆಲವು ದಿನಗಳಿಂದ ಸ್ಟಾರ್ ಪುತ್ರಿ ಎಂಬ ಕಾರಣಕ್ಕೆ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾದವರಲ್ಲಿ ಅನಿಲ್ ಕಪೂತ್ ಅವರ ಮಗಳು ಸೋನಂ ಕಪೂರ್ ಸಹ ಒಬ್ಬರು. ಸುಶಾಂತ್ ಸಾವಿನ ಹಿನ್ನೆಲೆಯಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ)ದ ಕುರಿತಾಗಿ ಚರ್ಚೆ ಶುರುವಾಗುತ್ತಿದ್ದಂತೆಯೇ ಸೋನಂ ಅಲ್ಲದೆ, ಮಹೇಶ್ ಭಟ್ ಮಗಳು ಆಲಿಯಾ ಭಟ್, ಶತ್ರುಘ್ನ ಸಿನ್ಹಾ ಮಗಳು ಸೋನಾಕ್ಷಿ ಸಿನ್ಹಾ ಸಹ ಟಾರ್ಗೆಟ್ ಆಗಿದ್ದಾರೆ.
ಹೀಗಿರುವಾಗಲೇ ಸೋನಂ ಕಪೂರ್ ಕಳೆದ ವಾರ ಗಂಡ ಆನಂದ್ ಅಹುಜಾ ಜತೆಗೆ ಸೋನಂ ಲಂಡನ್ಗೆ ಹಾರಿದ್ದಾರೆ. ಇನ್ನಾದರೂ ಅವರ ಮೇಲಿನ ಟ್ರೋಲ್ಗಳು ಸ್ವಲ್ಪ ಕಡಿಮೆಯಾಗಬಹುದು ಎಂದುಕೊಂಡರೆ ಅದು ಸುಳ್ಳಾಗಿದೆ. ಸೋನಂ ಕಪೂರ್ ಬೇರೆ ಕಾರಣಕ್ಕೆ ಎರಡು ದಿನಗಳಿಂದ ಸಾಕಷ್ಟು ಟ್ರೋಲ್ಗೆ ಒಳಗಾಗಿದ್ದಾರೆ.
ಇದನ್ನೂ ಓದಿ: ಆರಡಿ ಅಂತರ ಕಾಪಾಡಿ ಅಂತಿದ್ದಾರೆ ಶಾರೂಖ್ …
ಇಷ್ಟಕ್ಕೂ ಆಗಿದ್ದೇನೆಂದರೆ, ಸೋನಂ ಲಂಡನ್ಗೆ ಹೋದರಲ್ಲಾ? ಅಲ್ಲಿ ಸಹಜವಾಗಿಯೇ 14 ದಿನಗಳ ಕಾಲ ಕ್ವಾರಂಟೈನ್ ಆಗಬೇಕು. ಅದಕ್ಕೆ ಸರಿಯಾಗಿ ಸೋನಂ ಎಲ್ಲೋ ಹೊರಗೆ ಕಾಣಿಸಿಕೊಂಡಿದ್ದಾರೆ. ಈ ಕುರಿತು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರ ಪ್ರಾಣಕ್ಕೆ ಸಂಚಕಾರ ತರುತ್ತಿದ್ದಾರೆ ಎಂದು ಕಿಡಿಕಾರುತ್ತಿದ್ದಾರೆ.
ಮೊದಲು ಸ್ವಲ್ಪ ಸುಮ್ಮನಿದ್ದ ಸೋನಂ, ಇದೀಗ ಉತ್ತರ ಕೊಟ್ಟಿದ್ದಾರೆ. ತಾವು ಲಂಡನ್ಗೆ ಬಂದ ನಂತರ, ಎಲ್ಲೂ ಹೊರಗೆ ಬಂದಿಲ್ಲ. ಅದು ತಮ್ಮ ಗಾರ್ಡನ್ನ ಫೋಟೋ ಎಂದು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ಇದಕ್ಕೆ ಧ್ವನಿಗೂಡಿಸಿದ ಅವರ ಕೆಲವು ಅಭಿಮಾನಿಗಳು, ಸೋನಂ ಮನೆ ಬಿಟ್ಟು ಎಲ್ಲೂ ಹೋಗಿಲ್ಲ, ಮನೆಯ ಗಾರ್ಡನ್ನಲ್ಲಿದ್ದಾರೆ ಎಂದು ತಿಳಿ ಹೇಳಿದ್ದಾರೆ. ಅಲ್ಲೇ ವರ್ಕೌಟ್ ಮಾಡುತ್ತಿದ್ದಾರೆ ಎಂದು ಅರ್ಥ ಮಾಡಿಸುವುದಕ್ಕೆ ಪ್ರಯತ್ನ ಮಾಡಿದ್ದಾರೆ.
ಯಾವಾಗ ಅದನ್ನು ಮೀರಿ ಟ್ರೋಲ್ ಹೆಚ್ಚಾಯಿತು, ಆಗ ಸೋನಂ ತಮ್ಮ ಅಭಿಮಾನಿಗಳು ಈ ವಿಷಯ ಕೈಬಿಡುವುದಕ್ಕೆ ಮನವಿ ಮಾಡಿಕೊಂಡಿದ್ದಾರೆ. 'ನಾನು ಮನೆಯಲ್ಲೇ ಕ್ವಾರಂಟೈನ್ನಲ್ಲೇ ಇದ್ದೇನೆ. ಯಾವುದೇ ರೂಲ್ಸ್ ಬ್ರೇಕ್ ಮಾಡಿಲ್ಲ. ಕೆಲವರಿಗೆ ಸಿಕ್ಕಾಪಟ್ಟೆ ಸಮಯವಿರುತ್ತದೆ. ಏನು ಮಾಡಬೇಕು ಎಂಬುದು ಗೊತ್ತಿರುವುದಿಲ್ಲ. ಹೀಗೆ ಟ್ರೋಲ್ ಮಾಡುತ್ತಿರುತ್ತಾರೆ. ಅವರನ್ನು ಇಗ್ನೋರ್ ಮಾಡಿ' ಎಂದು ಸೋನಂ ಈ ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ.