ಮೆಗಾ ಕ್ಲ್ಯಾಶ್​; ಸಂಕ್ರಾಂತಿಗೆ ಬಾಕ್ಸ್​ ಆಫೀಸ್​ನಲ್ಲಿ ಅಜಿತ್​ ವರ್ಸಸ್​ ವಿಜಯ್​‘

Thunivu - Varisu
Published on

ಚೆನ್ನೈ: ಅಜಿತ್​ ಅಭಿನಯದ 'ತುನಿವು' ಎಂಬ ಹೊಸ ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಈ ಚಿತ್ರವು 2023ರ ಸಂಕ್ರಾಂತಿ ಸಮಯದಲ್ಲಿ ಬಿಡುಗಡೆಯಾಗುವುದಾಗಿ ಚಿತ್ರತಂಡದವರು ಘೋಷಿಸಿದ್ದಾರೆ. ಇಷ್ಟಾದರೆ, ದೊಡ್ಡ ಸುದ್ದಿಯೇನಲ್ಲ. ವಿಶೇಷವೆಂದರೆ, ಸಂಕ್ರಾಂತಿಗೆ ವಿಜಯ್​ ಅಭಿನಯದ 'ವಾರಿಸು' ಚಿತ್ರ ಸಹ ಬಿಡುಗಗಡೆಯಾಗುತ್ತಿದ್ದು, ಬಾಕ್ಸ್​ ಆಫೀಸ್​ನಲ್ಲಿ ಮೆಗಾ ಕ್ಲ್ಯಾಶ್​ ಉಂಟಾಗಲಿದೆ.

ವಿಜಯ್​ ಅಭಿನಯದ 'ವಾರಿಸು' ಚಿತ್ರದ ಬಿಡುಗಡೆ ಮುಂದಿನ ವರ್ಷದ ಸಂಕ್ರಾಂತಿ ಸಂದರ್ಭದಲ್ಲಿ ಆಗಲಿದೆ ಎಂದು ಆ ಚಿತ್ರತಂಡ ಮೊದಲೇ ಘೋಷಿಸಿತ್ತು. ಈಗ ಅಜಿತ್​ ಅಭಿನಯದ 'ತುನಿವು' ಚಿತ್ರ ಸಹ ಅಂದೇ ಬಿಡುಗಡೆಯಾಗುತ್ತಿರುವುದು ಬಾಕ್ಸ್​-ಆಫೀಸ್​ನಲ್ಲಿ ದೊಡ್ಡ ಪೈಪೋಟಿ ಏರ್ಪಡಲಿದೆ.

ಸುಮಾರು ಎಂಟು ವರ್ಷಗಳ ಹಿಂದೆ ಇದೇ ಆಗಿತ್ತು. ಆಗ ಸಂಕ್ರಾಂತಿ ಹಬ್ಬದ ಪ್ರಯುಕ್ತ, ವಿಜಯ್​ ಅಭಿನಯದ 'ಜಿಲ್ಲಾ' ಮತ್ತು ಅಜಿತ್​ ಅಭಿನಯದ 'ವೀರಂ' ಚಿತ್ರಗಳು ಬಿಡುಗಡೆಯಾಗಿದ್ದವು. ಈ ಪೈಕಿ, 'ವೀರಂ' ಚಿತ್ರವು ಸೂಪರ್​ ಹಿಟ್​ ಆಗಿತ್ತು. ಈಗ ಎಂಟು ವರ್ಷಗಳ ನಂತರ ಮತ್ತೊಮ್ಮೆ ವಿಜಯ್​ ಮತ್ತು ಅಜಿತ್​ ಚಿತ್ರಗಳು ಬಿಡುಗಡೆಗೆ ಸಜ್ಜಾಗುತ್ತಿದ್ದು, ಈ ಪೈಕಿ ಯಾವ ಚಿತ್ರ ಪ್ರೇಕ್ಷಕರ ಗಮನ ಸೆಳೆಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಇದು ತಮಿಳಿನ ಸುದ್ದಿಯಾದರೆ, ತೆಲುಗಿನಲ್ಲಿ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗುವುದಕ್ಕೆ ದೊಡ್ಡ ಪೈಪೋಟಿ ಏರ್ಪಟಿದೆ. ಪ್ರಭಾಸ್​ ಅಭಿನಯದ 'ಆದಿಪುರುಷ್​', ಚಿರಂಜೀವಿ ಅಭಿನಯದ 'ವಾಲ್ಟರ್​ ವೀರಯ್ಯ' ಮತ್ತು ಬಾಲಕೃಷ್ಣ ಅಭಿನಯದ 'ವೀರ ಸಿಂಹ ರೆಡ್ಡಿ' ಚಿತ್ರಗಳು ಬಿಡುಗಡೆಯಾಗುತ್ತಿದೆ. 'ವಾರಿಸು' ತೆಲುಗಿನಲ್ಲೂ ಬಿಡುಗಡೆಯಾಗುತ್ತಿರುವುದರಿಂದ, ಅದು ಸಹ ಕಣದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net