ಮುಂಬೈ: ನಟ ವಿಜಯ್ ದೇವರಕೊಂಡ ಮತ್ತು ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಭಾನುವಾರ ಮಧ್ಯರಾತ್ರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹೌದು, ವಿಜಯ್ ಮತ್ತು ರಶ್ಮಿಕಾ ನಡುವಿನ ಪ್ರೇಮಾಯಣದ ಸುದ್ದಿಗಳು ಕಳೆದ 2, 3 ವರ್ಷಗಳಿಂದ ಕೇಳಿಬರುತ್ತಿಲೆ ಇವೆ. ಇನ್ನು, ಆ ಸುದ್ದಿಗಳಿಗೆ ನಟ ಮತ್ತು ನಟಿ ಸಹ ಉತ್ತರ ನೀಡದೆ ಮೌನವಾಗಿದ್ದಾರೆ. ಹೀಗಾಗಿ, ಆಗಾಗ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುವುದು ಮಾದ್ಯಮದಲ್ಲಿ ದೊಡ್ಡ ಸುದ್ದಿಯಾಗುತ್ತೆ. ರಶ್ಮಿಕಾ ಮಂದಣ್ಣ ಅವರು ಸದ್ಯ ಮುಂಬೈನಲ್ಲಿ ನೆಲೆಸಿದ್ದು, ವಿಜಯ್ ಕೂಡ ತಮ್ಮ 'ಲೈಗರ್' ಚಿತ್ರದ ಶೂಟಿಂಗ್ಗೆ ಅಂತ ಮುಂಬೈನಲ್ಲೇ ಇದ್ದಾರೆ.