ಭಿಕ್ಷುಕ ನಾಳೆ ರಾಜನಾಗಬಹುದು ... ಹಾಗಂತ ‘ದುನಿಯಾ’ ವಿಜಯ್ ಹೇಳಿದ್ದೇಕೆ?

Vijay - Venkat - Final
Published on

ನಟ-ನಿರ್ದೇಶಕ ವೆಂಕಟ್ ಅವರಿಗೆ ಶ್ರೀರಂಗಪಟ್ಟಣದಲ್ಲಿ ಕೆಲವರು ಹೊಡೆದಿದ್ದಕ್ಕೆ ವ್ಯಾಪಕವಾಗಿ ಟೀಕೆಗಳು ವ್ಯಕ್ತವಾಗಿವೆ. ವೆಂಕಟ್ ಅವರ ಮೇಲೆ ಕೈ ಮಾಡಿದ ಹುಡುಗರನ್ನು ಹಿರಿಯ ನಟ ಜಗ್ಗೇಶ್ ಪ್ರಶ್ನಿಸಿದ್ದರು. ನಿಮ್ಮ ಮನೆಯಲ್ಲಿ ಒಬ್ಬ ಅಣ್ಣನೋ ತಮ್ಮನೋ ತಂದೆಯೋ ವೆಂಕಟ್ ರೀತಿ ಮಾನಸಿಕರೋಗಿ ಇದ್ದು, ಯಾರಾದರೂ ಅವನ ಮೇಲೆ ಕೈ ಮಾಡಿದರೆ ನಿಮಗೆ ನೋವಾಗುತ್ತದೋ, ಇಲ್ಲವೋ ಎಂದು ಪ್ರಶ್ನಿಸಿದ್ದರು.

ಈಗ ‘ದುನಿಯಾ’ ವಿಜಯ್ ಸಹ, ವೆಂಕಟ್ ಅವರ ಸಹಾಯಕ್ಕೆ ಬಂದಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ವ್ಯಕ್ತಿಗೆ ದಯವಿಟ್ಟು ಯಾರೂ ಹಲ್ಲೆ ಮಾಡಬೇಡಿ ಎಂದು ಕಳಕಳಿಯಿಂದ ವಿನಂತಿಸಿಕೊಂಡಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಅವರು ಸುದೀರ್ಘವಾಗಿ ಅವರು ಬರೆದುಕೊಂಡಿದ್ದಾರೆ. ವೆಂಕಟ್ ಮೇಲೆ ಹಲ್ಲೆ ಮಾಡಿದವರಿಗೆ, ಹಾಗೆಲ್ಲಾ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ. ‘ಬದುಕು ಯಾರ ಕೈಯಲ್ಲಿಯೂ ಇಲ್ಲ. ಇಂದು ಒಬ್ಬ ರಾಜ ಭಿಕ್ಷೆ ಬೇಡಬಹುದು. ಅದೇ ಭಿಕ್ಷಕ ನಾಲೆ ರಾಜನಾಗಬಹುದು. ನಾವು ಅವರ ಪರಿಸ್ಥಿತಿಯನ್ನು ವ್ಯಂಗ್ಯ ಮಾಡುವುದು ಮಾನವೀಯತೆಯಲ್ಲ. ಹಾಗಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ವ್ಯಕ್ತಿಗೆ ದಯವಿಟ್ಟು ಯಾರೂ ಹಲ್ಲೆ ಮಾಡಬೇಡಿ’ ಎಂದು ಕಳಕಳಿಯಿಂದ ವಿನಂತಿಸಿಕೊಂಡಿದ್ದಾರೆ.

ವೆಂಕಟ್‌ಗೆ ಹೊಡೆಯುವವರಷ್ಟೇ ಅಲ್ಲ, ಮಾಧ್ಯಮಗಳಿಗೂ ಅವರು ವಿನಂತಿ ಮಾಡಿದ್ದಾರೆ. ‘ರಾಜ್ಯದ ಜನತೆಯು ವೆಂಕಟ್ ಅವರನ್ನು ಗುರುತಿಸುವುದಕ್ಕಿಂತ ಹೆಚ್ಚು, ಮಾಧ್ಯಮಗಳಲ್ಲಿನ ಚರ್ಚೆಗಳ ಮೂಲಕ ಗುರುತಿಸುತ್ತಿದ್ದಾರೆ. ವೆಂಕಟ್ ಅವರಿಗೆ ಚಿಕಿತ್ಸೆಯ ಅಗತ್ಯ ಇದೆಯೇ ಹೊರತು, ಚರ್ಚೆ, ಮಾತುಕಥೆ, ಹೊಡೆದಾಟಗಳಲ್ಲ. ಆತನ ಸಂಬಂಧಿಕರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಜವಾಬ್ದಾರಿಯಿಂದ ಜಾರಿಕೊಳ್ಳದ ಹಾಗೆ ಕಾಳಜಿ ವಹಿಸಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net