More

    PHOTO| ಇವರ್ಯಾರು?; ರಾಕುಲ್ ಅವತಾರ ಕಂಡು ದಿಗ್ಭ್ರಾಂತರಾದ ಏರ್​ಪೋರ್ಟ್​ ಮಂದಿ!

    ಲಾಕ್​ಡೌನ್​ ಸಡಿಲವಾಗುತ್ತಿದ್ದಂತೆ ಸಿನಿಮಾ ಮಂದಿಯೂ ಒಂದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಂಡು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಸಿನಿಮಾ ಕೆಲಸಗಳಿಗೆ ಚಾಲನೆ ಕೊಟ್ಟಿದ್ದರಿಂದ ಆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ಬಹುಭಾಷಾ ನಟಿ ರಾಕುಲ್​ ಪ್ರೀತ್​ ಸಿಂಗ್​, ಮುನ್ನೆಚ್ಚರಿಕೆ ದೃಷ್ಟಿಯಿಂದ ಪಿಪಿಇ ಕಿಟ್ ಧರಿಸಿಯೇ ರಸ್ತೆಗಿಳಿದಿದ್ದಾರೆ. ಇತ್ತೀಚೆಗೆ ಏರ್​ಪೋರ್ಟ್​ನಲ್ಲಿ ಅವರ ಅವತಾರ ಕಂಡು ಸ್ವತಃ ಏರ್​ಪೋರ್ಟ್​ ಮಂದಿಯೇ ದಿಗ್ಭ್ರಾಂತರಾಗಿದ್ದಾರೆ.

    ಇದನ್ನೂ ಓದಿ: VIDEO| ಸರಳವಾಗಿ ನಡೆಯಿತು ಮಯೂರಿ ಮದುವೆ …

    ಹೌದು, ಪಿಪಿಇ ಕಿಟ್​ ಧರಿಸಿಯೇ ದೆಹಲಿಗೆ ತೆರಳಲು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ರಾಕುಲ್, ಫುಲ್​ ಪ್ಯಾಕ್​ ಆಗಿದ್ದರು. ಒಂದು ಕ್ಷಣ ಇದು ರಾಕುಲ್​ ಎಂದು ಯಾರಿಗೂ ಗೊತ್ತಾಗದ ಹಾಗೆ ಕೈಗವುಸು, ಮಾಸ್ಕ್​ ಧರಿಸಿ ಎಂಟ್ರಿಕೊಟ್ಟಿದ್ದರು. ಅವರ ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts