ಮೂರಾಯ್ತು, ನಾಲ್ಕನೇ ಬಾರಿ ಒಂದಾಗಲು ದಳಪತಿ ವಿಜಯ್- ಅಟ್ಲಿ ಸಿದ್ಧತೆ?

thalapathy-63 vijay atlee movie
thalapathy-63 vijay atlee movie
Published on

ಈಗಾಗಲೇ ಹ್ಯಾಟ್ರಿಕ್ ಬಾರಿಸಿರುವ ನಟ ದಳಪತಿ ವಿಜಯ್ ಮತ್ತು ನಿರ್ದೇಶಕ ಅಟ್ಲಿ, ಇದೀಗ ನಾಲ್ಕನೇ ಸಿನಿಮಾಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಅಭಿಮಾನಿ ಬಳಗದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

‘ತೇರಿ’ ಸಿನಿಮಾ ಮೂಲಕ ಆರಂಭವಾದ ಈ ಜೋಡಿಯ ಹಿಟ್ ಪಯಣ, ಬಳಿಕ ‘ಮೆರ್ಸೆಲ್’ ಅದಾದ ಮೇಲೆ ‘ಬಿಗಿಲ್’ ತನಕ ಬಂದು ನಿಂತಿತ್ತು. ವಿಜಯ್ ಸಿನಿಮಾ ಕರಿಯರ್‌ನಲ್ಲಿ ಈ ಮೂರು ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಸ್ಥಾನದಲ್ಲಿವೆ. ಹೀಗಿರುವಾಗ ಇಂಥ ಸಿನಿಮಾ ನೀಡಿದ ಅಟ್ಲಿ ಮತ್ತೆ ವಿಜಯ್ ಜತೆ ಕೈ ಜೋಡಿಸಲು ಸಜ್ಜಾಗಿದ್ದಾರಂತೆ. ಕಥೆಯ ಒಂದೆಳೆ ವಿಜಯ್‌ಗೆ ತಲುಪಿದ್ದು, ಅವರಿಂದ ಸಿನಿಮಾ ಮಾಡುವ ಬಗ್ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ.

ಇತ್ತ ವಿಜಯ್ ಸದ್ಯ ಮಾಸ್ಟರ್ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮೇ ತಿಂಗಳಲ್ಲೇ ಈ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಕರೊನಾದಿಂದಾಗಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಯಿತು. ಹಾಗಾಗಿ ಸದ್ಯಕ್ಕೆ ಮಾಸ್ಟರ್ ಯಾವಾಗ ಬಿಡುಗಡೆ ಎಂಬ ಬಗ್ಗೆ ಮಾಹಿತಿ ಇಲ್ಲ. ನಿರ್ದೇಶಕ ಅಟ್ಲಿ ಶಾರುಖ್ ಖಾನ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಿದಾಡಿತ್ತಾದರೂ, ಅದರ ಬಗ್ಗೆ ಅಪ್‌ಡೇಟ್ ಮಾಹಿತಿ ಇನ್ನೂ ಲಭ್ಯವಾಗಿಲ್ಲ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net