ಸುಶಾಂತ್​ ಸತ್ತಿದ್ದು ನಿಮ್ಮಂತವರಿಂದಲೇ ... ಕರೀನಾಗೆ ಕಂಗನಾ ತಿರುಗೇಟು

Kangana - Kareena - Final
Published on

ಸುಶಾಂತ್ ಸಿಂಗ್​ ರಜಪೂತ್​ ಆತ್ಮಹತ್ಯೆಯ ನಂತರ ನೆಪೋಟಿಸಂ (ಸ್ವಜನಪಕ್ಷಪಾತ) ಚರ್ಚೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗ ಆ ಬಿಸಿ ಕರೀನಾ ಕಪೂರ್​ಗೂ ತಟ್ಟಿದೆ.

ಇತ್ತೀಚೆಗೆ ಒಂದು ಸಂದರ್ಶನವೊಂದರಲ್ಲಿ ಕರೀನಾ, ನೆಪೋಟಿಸಂ ಬಗ್ಗೆ ಮಾತನಾಡಿದ್ದರು. 'ಚಿತ್ರರಂಗದಲ್ಲಿ ನೆಪೋಟಿಸಂನಿಂದ ಮಾತ್ರ 20 ವರ್ಷಗಳ ಕಾಲ ಉಳಿಯೋಕೆ ಸಾಧ್ಯವೇ ಇಲ್ಲ. ಇಷ್ಟು ದೀರ್ಘ ಕಾಲ ಇಲ್ಲಿ ಬಾಳಬೇಕು ಎಂದರೆ ಪ್ರತಿಭೆ ಮುಖ್ಯ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ ಕಂಗನಾಗೆ ಸಿಕ್ಕಾಪಟ್ಟೆ ಸಿಟ್ಟು ಬಂದುಬಿಟ್ಟಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಜನಪ್ರಿಯತೆ ಮತ್ತು ಯಶಸ್ಸು ಸಿಕ್ಕ ನಂತರ ನೀವೆಲ್ಲಾ ಬಾಲಿವುಡ್​ನ ಬುಲ್ಲಿವುಡ್​ನ್ನಾಗಿ ಮಾಡುತ್ತೀರಾ ಎಂದು ಜನರಿಗೆ ಗೊತ್ತಿರಲಿಲ್ಲ.

ತಕ್ಷಣವೇ ಟ್ವಿಟರ್​ನಲ್ಲಿ ಕರೀನಾಗೆ ಆರು ಪ್ರಶ್ನೆಗಳನ್ನು ಕಂಗನಾ ಕೇಳಿದ್ದಾರೆ. ಇದಕ್ಕೆ ಉತ್ತರಿಸುವುದಕ್ಕೆ ಹೇಳಿದ್ದಾರೆ.

1) ನಿಮ್ಮ ಬೆಸ್ಟ್​ ಫ್ರೆಂಡ್​, ಕಂಗನಾಗೆ ಚಿತ್ರರಂಗ ಬಿಟ್ಟು ಹೋಗು ಅಂತ ಹೇಳಿದ್ದ್ಯಾಕೆ?

2) ಸುಶಾಂತ್​ಗೆ ದೊಡ್ಡ ದೊಡ್ಡ ಪ್ರೊಡಕ್ಷನ್​ ಹೌಸ್​ಗಳ ಚಿತ್ರಗಳಲ್ಲಿ ಯಾಕೆ ಕೆಲಸ ಸಿಗುತ್ತಿರಲಿಲ್ಲ.

3) ಕಂಗನಾಗೆ ಮಾಟಗಾತಿ ಮತ್ತು ಸುಶಾಂತ್​ಗೆ ರೇಪಿಸ್ಟ್​ ಎಂದು ಪಟ್ಟ ಕಟ್ಟಿದ್ದ್ಯಾಕೆ?

4) ಕಂಗನಾ ಮತ್ತು ಸುಶಾಂತ್​ ಇಬ್ಬರಿಗೂ ಬೈಪೋಲಾರ್​ನಂತಹ ಮಾನಸಿಕ ಖಾಯಿಲೆ ಇದೆ ಎಂದು ಬಿಂಬಿಸುತ್ತಿರುವುದ್ಯಾಕೆ?

5) ನಿಮ್ಮ ತರಹವೇ ನೆಪೋಟಿಂನಿಂದ ಬೆಳೆದ ನಟನೊಬ್ಬ, ನಟಿಯೊಬ್ಬಳಿಗೆ ಮದುವೆಯಾಗುವುದಾಗಿ ಪ್ರಾಮಿಸ್​ ಮಾಡಿ, ಕೊನೆಗೆ ಅವಳ ಮೇಲೆ ಕ್ರಿಮಿನಲ್​ ಕೇಸ್​ ಹಾಕಿದ್ದು ಯಾಕೆ?

6) ಕಂಗನಾ ಮತ್ತು ಸುಶಾಂತ್​ ಇಬ್ಬರನ್ನೂ ಚಿತ್ರರಂಗ ದೂರವಿಟ್ಟಿದ್ದು ಯಾಕೆ? ಇಬ್ಬರಿಗೂ ಯಾವುದೇ ಪಾರ್ಟಿಗೆ ಆಹ್ವಾನ ಇಲ್ಲದಿರುವ ಜತೆಗೆ ಅವರ ಹುಟ್ಟುಹಬ್ಬಕ್ಕೆ ಯಾರೊಬ್ಬರೂ ವಿಶ್​ ಮಾಡುವುದಿಲ್ಲವೇಕೆ?

ಹೀಗೆ ಆರು ಪ್ರಶ್ನೆಗಳನ್ನು ಹಾಕಿರುವ ಕಂಗನಾ ಅವರ ತಂಡ, ಸುಶಾಂತ್​ ಸತ್ತಿದ್ದು ನಿಮ್ಮಂತವರಿಂದಲೇ ಎಂದು ಹೇಳಿದೆ. 'ನೆಪೋಟಿಸಂನಿಂದಾಗಿ ಚಿತ್ರರಂಗದಲ್ಲಿ ಮಿಂಚುತ್ತಿರುವ ಪ್ರತಿಭೆಗಳೇ, ವಿಷಯವನ್ನು ಬದಲಾಯಿಸುವುದಕ್ಕೆ ಪ್ರಯತ್ನಿಸಬೇಡಿ. ನಮಗೆ ನಿಮ್ಮ ಯಶಸ್ಸು ಮತ್ತು ಜನಪ್ರಿಯತೆಯ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಸಮಸ್ಯೆ ಇರುವುದು ನಮ್ಮಂತವರನ್ನು ನೀವು ನೋಡುವ ರೀತಿಯಲ್ಲಿ. ಸುಶಾಂತ್​ ಸತ್ತಿದ್ದು ನಿಮ್ಮಂತವರ ಕಿರುಕುಳದಿಂದಾಗಿ. ತಮಗೆ ಇಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ ಎಂದು ಸುಶಾಂತ್ ಹೇಳಿಕೊಂಡಿದ್ದರು. ಜತೆಗೆ ತಮ್ಮನ್ನು ರೇಪಿಸ್ಟ್​ ಎಂದು ಕರೆದಿದ್ದರ ಬಗ್ಗೆ ಬಹಳ ಬೇಸರಿಸಿಕೊಂಡಿದ್ದರು. ಈ ವಿಷಯದ ಬಗ್ಗೆ ಮೊದಲು ಮಾತಾಡೋಣ. ಅದು ಬಿಟ್ಟು ವಿಷಯ ಬದಲಾಯಿಸುವ ಪ್ರಯತ್ನ ಮಾಡಬೇಡಿ' ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net