

ನವದೆಹಲಿ: ಬಿಗ್ ಬಾಸ್ ಒಟಿಟಿ ಸ್ಪರ್ಧಿ ಉರ್ಫಿ ಜಾವೆದ್ ತಮ್ಮ ಬೋಲ್ಡ್ ಡ್ರೆಸ್ಸಿಂಗ್ ಸ್ಟೈಲ್ನಿಂದ ಸುದ್ದಿ ಮಾಡುತ್ತಾ ಬಂದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಅವರು ಪ್ರದರ್ಶಿಸುವ ವಿವಿಧ ಮೈತೋರಿಸುವ ಔಟ್ಫಿಟ್ಗಳು ನೆಟ್ಟಿಗರಲ್ಲಿ ತಲ್ಲಣ ಮೂಡಿಸಿದ್ದು, ಇದಕ್ಕಾಗಿ ಅವರು ಟ್ರೋಲ್ ಆಗುವುದು ಸಾಮಾನ್ಯ ವಿಷಯವಾಗಿದೆಬಿಟ್ಟಿದೆ. ಆದರೆ ಇದಕ್ಕೆ ತಲೆ ಕೆಡಿಸಿಕೊಳ್ಳದ ಉರ್ಫಿ ತಮ್ಮನ್ನು ಟ್ರೋಲ್ ಮಾಡುವವರಿಗೆ ಇದೀಗ ದಿಟ್ಟ ಉತ್ತರ ನೀಡಿದ್ದಾರೆ.
ವೈರಲ್ ಆಗಿರುವ ಅವರ ಹೊಸ ಇನ್ಸ್ಟಾ ವಿಡಿಯೋದಲ್ಲಿ ಉರ್ಫಿ ಕೆಂಪು ಕ್ರಾಪ್ ಟಾಪನ್ನು ಜೀನ್ಸ್ ಪ್ಯಾಂಟ್ ಮೇಲೆ ತೊಟ್ಟಿದ್ದು, ಜೀನ್ಸ್ ಜ್ಯಾಕೆಟ್ ತೊಟ್ಟಿದ್ದಾರೆ. ಈ ಕಸ್ಟಮೈಸ್ಡ್ ಜ್ಯಾಕೆಟ್ ಮೇಲೆ 'ಮೈಂಡ್ ಯುವರ್ ಓನ್ ಬಿಸಿನೆಸ್' ಅಂತ ಅರ್ಥಾತ್ 'ನಿಮ್ಮ ಕೆಲಸ ನೀವ್ ನೋಡ್ಕೊಳ್ಳಿ' ಎಂದು ಬರೆದಿರುವುದನ್ನು ಉರ್ಫಿ ಪ್ರದರ್ಶಿಸಿದ್ದಾರೆ.
"ನನಗೆ ಹೇಗೆ ಡ್ರೆಸ್ ಮಾಡ್ಕೋಬೇಕು ಅಂತ ಯಾರಾದರೂ ಹೇಳಿದಾಗಲೆಲ್ಲಾ ಅಥವಾ ನನ್ನನ್ನು ಟ್ರೋಲ್ ಮಾಡಿದಾಗೆಲ್ಲ, ಇದೇ ನಾನು ಕೊಡುವ ಉತ್ತರ" ಎಂದು ಈ ವಿಡಿಯೋದಲ್ಲಿ ಉರ್ಫಿ ಜಾವೆದ್ ಹೇಳಿದ್ದಾರೆ. (ಏಜೆನ್ಸೀಸ್)