ನೃತ್ಯಗಾರರ ಸಮಸ್ಯೆಗೆ ಮಿಡಿದ ವರುಣ್​ ಧವನ್​ ಮನ; ಅಷ್ಟಕ್ಕೂ ಈ ಬಾಲಿವುಡ್​ ನಟ ಮಾಡಿದ್ದೇನು?

v
Published on

ಈಗಾಗಲೇ ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾ ಕ್ಷೇತ್ರ ಸ್ಥಗಿತಗೊಂಡಿದ್ದರ ಹಿನ್ನೆಲೆಯಲ್ಲಿ ಸಿನಿಮಾ ಕಾರ್ಮಿಕರ ಸ್ಥಿತಿ ಅತಂತ್ರವಾಗಿದೆ. ಜೂನಿಯರ್ ಕಲಾವಿದರು, ಕೂಲಿ ಕಾರ್ಮಿಕರ ಸಂಪಾದನೆ ನಿಂತು ಹೋಗಿದೆ. ತಾಂತ್ರಿಕ ಕೆಲಸಗಾರರು ಡಾನ್ಸರ್​ಗಳು ಹೀಗೆ ಎಲ್ಲರೂ ಕೆಲಸವಿಲ್ಲದೆ ಮನೆಯಲ್ಲಿ ದಿನಕಳೆಯುತ್ತಿದ್ದಾರೆ. ಈ ಸ್ಥಿತಿ ಕಂಡ ಬಾಲಿವುಡ್​ ನಟ ವರುಣ್​ ಧವನ್​, ನೃತ್ಯಗಾರರ ಸಹಾಯಕ್ಕೆ ಧಾವಿಸಿದ್ದಾರೆ.

ವರುಣ್​ ಧವನ್​ ಓರ್ವ ಅತ್ಯುತ್ತಮ ಡಾನ್ಸರ್​. ಡಾನ್ಸ್​ಗೆ ಸಂಬಂಧಿಸಿದಂತೆ ಹಲವು ಸಿನಿಮಾ ಮಾಡಿದ್ದಾರೆ. ಇತ್ತೀಚೆಗೆ ಅವರ ಸ್ಟ್ರೀಟ್​ ಡಾನ್ಸರ್​ ಸಿನಿಮಾ ತೆರೆಕಂಡಿತ್ತು. ಇದೀಗ ಡಾನ್ಸರ್​​ಗಳ ನೆರವಿಗೆ ಆಗಮಿಸಿದ್ದಾರೆ. 200ಕ್ಕೂ ಅಧಿಕ ನೃತ್ಯಗಾರರಿಗೆ ನಗದು ಮೊತ್ತವನ್ನು ನೀಡುತ್ತಿದ್ದಾರೆ. ಅವಶ್ಯಕತೆ ಉಳ್ಳವರ ಮಾಹಿತಿ ಸಂಗ್ರಹಿಸಿ, ನೇರವಾಗಿ ಅವರ ಖಾತೆಗೆ ಹಣ ಜಮಾ ಮಾಡುತ್ತಿದ್ದಾರೆ. ವರುಣ್​ ಧವನ್​ ಕೆಲಸಕ್ಕೆ ಡಾನ್ಸರ್​ಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅಂದಹಾಗೆ, ಹೀಗೆ ಹಣ ಜಮೆ ಮಾಡುವ ಕೆಲಸವನ್ನು ವರುಣ್​ ಹೇಳಿಕೊಂಡಿಲ್ಲ. ನೃತ್ಯಗಾರರೊಬ್ಬರು ವರುಣ್​ ಮಾಡುವ ಕೆಲಸವನ್ನು ಗುರುತಿಸಿ ಮೆಚ್ಚುಗೆಯ ಮಾತನಾಡಿದ್ದಾರೆ. ಎಷ್ಟೋ ಜನರ ಮನೆಗಳಿಗೆ ಬಾಡಿಗೆ, ಔಷಧಕ್ಕೆ ನಗದು ಹೀಗೆ ಎಲ್ಲವನ್ನೂ ವರುಣ್ ಭರಿಸಿದ್ದಾರಂತೆ.

ಸದ್ಯ ವರುಣ್​ ನಟನೆಯ ಕೂಲಿ ನಂ.1 ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಡೇವಿಡ್​ ಧವನ್​ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಸಾರಾ ಅಲಿ ಖಾನ್​ ನಾಯಕಿಯಾಗಿ ನಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net