ಹಳ್ಳಿ ಹಕ್ಕಿಯಾಗಿ ತೆರೆ ಮೇಲೆ ಮಿಂಚಲಿರುವ ವೈಷ್ಣವಿ ಗೌಡ! ಹೊಸ ಚಿತ್ರದ ಫಸ್ಟ್ ಲುಕ್ ವೈರಲ್

Published on
ಬೆಂಗಳೂರು: 'ಮಹಿರ' ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್ ಗೌಡ ಈ ಬಾರಿ ಹೊಸ ಪ್ರಯತ್ನದ ಸಿನಿಮಾವೊಂದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನು, ಯುಗಾದಿ ಹಬ್ಬದ ಸ್ಪೆಷಲ್ ಆಗಿ ಆ ಹೊಸ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಲಾಗಿದೆ. ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಸಿನಿಮಾಗೆ ಮಹೇಶ್ ಗೌಡ ಅವರು ಚಿತ್ರದ ಕಥೆಯನ್ನು ತಾವೇ ಬರೆದು ಜತೆಗೆ ನಿರ್ದೇಶನ ಕೂಡಾ ಮಾಡಿದ್ದಾರೆ. ಜತೆಗೆ, ಈ ಸಿನಿಮಾಗೆ ಮಹೇಶ್ ತಮ್ಮದೇ ಆದ ಹೊನ್ನುಡಿ ಪ್ರೊಡಕ್ಷನ್ ನಡಿ ನಿರ್ಮಾಣ ಮಾಡುತ್ತಿದ್ದು, ದಿನೇಶ್ ಎಂಬ ಪಾತ್ರದಲ್ಲಿ ಬೆಳ್ಳಿ ತೆರೆ ಮೇಲೆ ಮೊದಲ ಬಾರಿ ಮಿಂಚಲಿದ್ದಾರೆ ಎಂಬ ಮಾಹಿತಿ ಇದೆ.
ಮತ್ತೊಂದೆಡೆ, ಅಗ್ನಿಸಾಕ್ಷಿ ಧಾರಾವಾಹಿ ಹಾಗೂ ಬಿಗ್ ಬಾಸ್ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ಈ ಸಿನಿಮಾದಲ್ಲಿ ಹಳ್ಳಿ ಹುಡ್ಗಿ ಕವಿತಾ ಪಾತ್ರದಲ್ಲಿ ನಟ ಮಹೇಶ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ತೊನ್ನು ಅಂದರೆ ವಿಟಿಲಿಗೋ ಎಂಬ ಸಮಸ್ಯೆ ಇರುವ ಈ ಸಿನಿಮಾದ ನಾಯಕ, ತಮ್ಮ ಊರಿನ ಒಂದು ಚೆಂದದ ಹಾಗೂ ಮುದ್ದಾದ ಹುಡ್ಗಿ ಕವಿತಾಳನ್ನು ಮದುವೆಯಾಗುತ್ತಾರೆ. ಇನ್ನು, ದಿನೇಶ್​ಗೆ ಇರುವ ಸಮಸ್ಯೆ ಗೊತ್ತಿದ್ರೂ ಕವಿತಾ ತನ್ನನ್ನ ಮದ್ವೆಯಾಗೋದೇಕೆ ಅನ್ನೋ ಕನ್ಫೂಷನ್ ನಾಯಕನಿಗೆ ಕಾಡ್ತಿರುತ್ತದೆ.
ನಂತರದ ಒಂದೊಂದು ಬೆಳವಣಿಗೆಯನ್ನು ಕಾಮಿಡಿ ರೀತಿಯಲ್ಲಿ ತೋರಿಸುವುದೇ ಈ ಸಿನಿಮಾದ ಕಥೆ ಎನ್ನಲಾಗಿದೆ. ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ರೋಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಇದು ಸಿನಿಪ್ರಿಯರಿಗೆ ಪಕ್ಕಾ ಮನರಂಜನೆ ನೀಡಲಿದೆ ಎಂದಿದ್ದಾರೆ ಚಿತ್ರತಂಡ. ಇಲ್ಲಿಯ ವಿಶೇಷವೆಂದರೆ, ತಮಗೆ ನಿಜವಾಗಿಯೂ ಇರುವ ತೊನ್ನು ಅಂದರೆ ವಿಟಿಲಿಗೋ ಸಮಸ್ಯೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರಂತೆ ಮಹೇಶ್ ಗೌಡ. ಸದ್ಯ, ಸಿನಿಮಾದ ಫಸ್ಟ್ ಲುಕ್ ನಲ್ಲಿ ನಟಿ ವೈಷ್ಣವಿ ಗೌಡ ಅವರ ಹೊಸ ಹಳ್ಳಿ ಹುಡುಗಿಯ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net