RRR ಕಲೆಕ್ಷನ್​ ರಿಪೋರ್ಟ್​ 'ಸುಳ್ಳು' ಎಂದ ಬಾಲಿವುಡ್ ವಿಮರ್ಶಕ! ಹೇಗಿತ್ತು ಗೊತ್ತಾ ನೆಟ್ಟಿಗರ ರಿಯಾಕ್ಷನ್?

Published on
550 ಕೋಟಿ ಖರ್ಚು ಮಾಡಿದ ತೆಗೆದ 'RRR' ಸಿನಿಮಾವನ್ನು ಇಡೀ ವಿಶ್ವಾದ್ಯಂತ ಜನ ಹಾಡಿ ಹೊಗಳುತ್ತಿದ್ದಾರೆ. ಸಿನಿಮಾದ ಸ್ಟೋರಿ ಮಾತ್ರ ಚುರು ಇನ್ನೂ ಚೆನ್ನಾಗಿದ್ದರೇ, ದೃಶ್ಯಗಳು ಇಷ್ಟೇ ವೈಭವವಾಗಿದ್ದಾರೆ ಸಾಕು; ಈ ಸಿನಿಮಾ ಇನ್ನು ಹೆಚ್ಚು ಹೆಚ್ಚು ಸೂಪರ್ ಹಿಟ್ ಆಗುತ್ತಿತ್ತು ಎಂದು ಹಲವು ವಿಮರ್ಶಕರು ಅಭಿಪ್ರಾಯ ಪಟ್ಟರು. ಆದರೆ, ಬಾಲಿವುಡ್ ವಿಮರ್ಶಕ ಕಮಾಲ್ ಆರ್ ಖಾನ್ ಎಂಬುವವರು ಮಾತ್ರ ಈ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಒಂದು ವಿವಾದಾತ್ಮಕ ಹೇಳಿಕೆಯನ್ನು ಕೊಟ್ಟಿದ್ದಾರೆ. ಕಮಾಲ್ ಈಗಾಗಲೇ ದಿನಕ್ಕೊಂದು ಶಾಕಿಂಗ್ ಹೇಳಿಕೆ ಕೊಟ್ಟು ಅನೇಕ ಸ್ಟಾರ್ ಸೆಲೆಬ್ರಿಟಿಗಳನ್ನು ಎದುರು ಹಾಕಿಕೊಂಡಿದ್ದಾರೆ. ಇದೀಗ ಅವರು ನಟ ರಾಮ್ ಚರಣ್, ನಟ ಜ್ಯೂ. ಎನ್​ಟಿಆರ್, ನಟಿ ಆಲಿಯಾ ಭಟ್, ನಟ ಅಜಯ್ ದೇವಗನ್, ನಟಿ ಶ್ರಿಯಾ ಶರಣ್ ರಂತೆ ಮುಂತಾದವರು ಅಭಿನಯಿಸಿರುವ ‘ಆರ್​ಆರ್​ಆರ್’ನ ಭರ್ಜರಿ ಕಲೆಕ್ಷನ್ ಬಗ್ಗೆ ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಅಂದಹಾಗೆ, ಹಲವು ಬಾಕ್ಸಾಫೀಸ್ ವಿಶ್ಲೇಷಕರ ಪ್ರಕಾರ ಕೇವಲ 9 ದಿನಗಳಲ್ಲಿ ‘ಆರ್​ಆರ್​ಆರ್’ ಚಿತ್ರ ಬರೋಬ್ಬರಿ 819.06 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ.
ಈ ಮೂಲಕ ಎಸ್.ಎಸ್.ರಾಜಮೌಳಿ ಅವರ ‘ಆರ್​ಆರ್​ಆರ್’ ಸಿನಿಮಾ ಅವರದ್ದೇ ಆದ 'ಬಾಹುಬಲಿ, ಬಾಹುಬಲಿ-2' ಸಿನಿಮಾಗಳ ಹಾಗೂ ನಮ್ಮ ದೇಶದ ಹಲವು ಬೇರೆ ಭಾಷೆಗಳ ಸ್ಟಾರ್ ನಟರ ಹಲವು ಸಿನಿಮಾಗಳ ದಾಖಲೆಗಳನ್ನು ಮುರಿದಿದೆ ಎಂದು ಸುದ್ದಿಗಳು ಹೇಳುತ್ತಿವೆ. ಇಂತಹ ಸಿನಿಮಾದ ಕಲೆಕ್ಷನ್ ರಿಪೋರ್ಟ್ 'ದೊಡ್ಡ ಸುಳ್ಳು' ಎಂದು ಕಮಾಲ್ ಟ್ವೀಟ್ ಮಾಡಿದ್ದಾರೆ. ಕಮಾಲ್ ಅವರಿಗೆ ‘ಆರ್​ಆರ್​ಆರ್’ ಚಿತ್ರದ ಬಜೆಟ್ ಬಗ್ಗೆಯೂ ಶಂಕೆ ಇದೆ. ಕಮಾಲ್ ಅವರು ತಮ್ಮ ಟ್ವೀಟ್​ನಲ್ಲಿ, ‘ಜನರು ಆರ್​ಆರ್​ಆರ್' ಚಿತ್ರವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಈ ಸಿನಿಮಾ ಒಂದು ದುರಂತ. ಆದರೆ, ನಿರ್ಮಾಪಕರು ಮಾಧ್ಯಮಗಳನ್ನು ಬಳಸಿ ಸುಳ್ಳು ಹೈಪ್ ಸೃಷ್ಟಿಸಿ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಜನ ನೋಡುವಂತೆ ಮಾಡುತ್ತಿದ್ದಾರೆ. ಈ ಚಿತ್ರದ ಕಲೆಕ್ಷನ್ ರಿಪೋರ್ಟ್ ಕೂಡಾ ದೊಡ್ಡ ಸುಳ್ಳು ಎಂಬುದನ್ನು, ನಾನು ನನ್ನ ಮುಂದಿನ ವಿಮರ್ಶೆಯಲ್ಲಿ ಸಾಬೀತು ಮಾಡುತ್ತೇನೆ. 680 ಕೋಟಿ ರೂಪಾಯಿ ಬಜೆಟ್ ಕಲೆಕ್ಷನ್ ಅನ್ನು ಹೇಗೆ ಲೆಕ್ಕಾ ಹಾಕಬೇಕು ಎಂದು ಜನರಿಗೆ ಗೊತ್ತಿಲ್ಲ'' ಎಂದಿದ್ದಾರೆ.
ಸದ್ಯ, ಕಮಾಲ್ ಅವರ ಈ ಟ್ವೀಟ್ ಕಂಡು ಎಸ್.ಎಸ್.ರಾಜಮೌಳಿ, ನಟ ರಾಮ್ ಚರಣ್, ನಟ ಜ್ಯೂ. ಎನ್​ಟಿಆರ್ ಅವರು ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಜತೆಗೆ, ಕಮಾಲ್ ಅವರ ಈ ಹಗುರವಾದ ಮಾತುಗಳನ್ನು ವಿರೋಧಿಸಿದ್ದಾರೆ. ಅಭಿಮಾನಿಗಳು ಕಮಾಲ್ ಅವರ ಟ್ವೀಟ್ ಕೆಳಗೆ ಕಮೆಂಟ್​ಗಳ ಮೂಲಕವೇ ತಮ್ಮ ಪ್ರತ್ಯುತ್ತರ ನೀಡಿದ್ದಾರೆ. ''ದಕ್ಷಿಣ ಭಾರತದ ಸಿನಿಮಾಗಳ ಗೆಲುವಿನ ಬಗ್ಗೆ ನಿಮಗೆ ಯಾಕೆ ಹೊಟ್ಟೆಕಿಚ್ಚು'' ಹಾಗೂ ''ನಿಮ್ಮ ಹುಚ್ಚಾಟ ನಿಲ್ಲಿಸಿ. ನಾನು ಇಂದು ಸಿನಿಮಾ ನೋಡಲು ಹೋಗಿದ್ದೆ. ಚಿತ್ರಮಂದಿರ ಹೌಸ್​ಫುಲ್​ ಆಗಿತ್ತು. ಜನರು ಸಿನಿಮಾ ನೋಡುತ್ತ ಎಂಜಾಯ್​ ಮಾಡುತ್ತಿದ್ದರು. ನಾನು ಎರಡನೇ ಬಾರಿಗೆ ಸಿನಿಮಾ ನೋಡಲು ಹೋಗಿದ್ದೆ. ಆದರೂ ಸಹ ಖುಷಿ ನೀಡಿತು. ಕೊನೆಯ ದೃಶ್ಯ ರೋಮಾಂಚಕವಾಗಿತ್ತು'', ಎಂದು ಹಲವು ನೆಟ್ಟಿಗರು ಕಮಾಲ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net