ಹೀಗಿದ್ದರೂ, ಸದ್ಯ ಈ ಪಾರ್ಟಿಯಲ್ಲಿ ಸೌದಿ ಸಚಿವ ಹಾಗೂ ರೆಡ್ ಸೀ ಫಿಲ್ಮ್ ಫೆಸ್ಟಿವಲ್ ಅಧ್ಯಕ್ಷ ಆಗಿರುವ ಮೊಹಮ್ಮದ್ ಅಲ್ ಟರ್ಕಿ ಅವರು ಭಾಗಿಯಾಗಿದ್ದು ಮಾತ್ರ ಎಲ್ಲರ ಗಮನವನ್ನು ಹೆಚ್ಚು ಹೆಚ್ಚು ಸೆಳೆಯುತ್ತಿದೆ. ಇನ್ನು, ಈ ನಾಲ್ಕು ನಟರ ಜತೆಗೆ ಸೌದಿ ಸಚಿವ ಮೊಹಮ್ಮದ್ ಅಲ್ ಟರ್ಕಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಸೌದಿ ಸಚಿವ ಭಾಗಿಯಾಗಿದ್ದರು ಎಂದ ತಕ್ಷಣ 'ಯಾವ ಉದ್ದೇಶಕ್ಕೆ ಈ ಸಮ್ಮಿಲನ ಆಗಿದೆ?' ಎಂಬ ಪ್ರಶ್ನೆ ನಟರ ಅಭಿಮಾನಿಗಳನ್ನು ಹಾಗೂ ದೇಶದ ಜನತೆಯನ್ನು ಕಾಡುತ್ತಿದೆ. ಅಂದಹಾಗೆ, ಸೋಶಿಯಲ್ ಮೀಡಿಯಾದಲ್ಲಿ ಟರ್ಕಿ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಪೋಸ್ಟ್ಗೆ ''ಭಾರತದಲ್ಲಿರುವ ನನ್ನ ಸಹೋದರ ಶಾರುಖ್ ಅವರಿಂದ ರಂಜಾನ್ ಹಬ್ಬದ ಶುಭಾಶಯಗಳು ಸಿಕ್ಕಿವೆ'', ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.