ಸದ್ಯ, ಈ ಚಿತ್ರಕ್ಕೆ ದೊಡ್ಡ ತಾರಾಬಳಗವೆ ಇದ್ದು, ಈ ಸಿನಿಮಾದಲ್ಲಿ ಎಲ್ಲರೂ ಗಮನಿಸುತ್ತಿರುವ ಒಂದು ಹೈಲೈಟ್ ಅಂದೆರೆ ಸ್ಯಾಂಡಲ್ವುಡ್ನ ಸೂಪರ್ ಹಿಟ್ ಸಿನಿಮಾ ಆದ 'ರಣಧೀರ' ಚಿತ್ರದ ನಾಯಕ-ನಾಯಕಿ, ಕಿರೀಟಿ ಅವರ ಈ ಟೈಟಲ್ ಇಲ್ಲದ ಚಿತ್ರದ ಮೂಲಕ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ. ಹೌದು, ನಟ ವಿ.ರವಿಚಂದ್ರನ್ ಹಾಗೂ ನಟಿ ಖುಷ್ಬೂ ಅವರು ಕಿರೀಟಿ ಅವರ ಮೊದಲ ಚಿತ್ರದ ಮೂಲಕ ಮತ್ತೆ ಒಟ್ಟಿಗೆ ಅಭಿನಯಿಸಲಿದ್ದಾರೆ. ಅಂದಹಾಗೆ, 'ರಣಧೀರ', 'ಅಂಜದ ಗಂಡು', 'ಯುಗ ಪುರುಷ' ಎಂಬ ಹಲವು ಹಿಟ್ ಚಿತ್ರಗಳಲ್ಲಿ ನಟ ವಿ.ರವಿಚಂದ್ರನ್ ಹಾಗೂ ನಟಿ ಖುಷ್ಬೂ ಅಭಿನಯಿಸಿ ಕನ್ನಡ ಸಿನಿಪ್ರೇಕ್ಷಕರ ಮನಸ್ಸು ಕದ್ದ ಈ ಜೋಡಿ ಆಗ ಭಾರಿ ಜನಪ್ರಿಯತೆಗಳಿಸಿತ್ತು.