ಶೆಫ್​ ಚಿದಂಬರ ಮುಹೂರ್ತ : ಚಿತ್ರಕ್ಕೆ ಚಾಲನೆ ನೀಡಿದ ಭಾರತಿ ವಿಷ್ಣುವರ್ಧನ್​, ಉಪೇಂದ್ರ

Chef Chidambara (1)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಎಂ. ಆನಂದ್​ರಾಜ್​ ನಿರ್ದೇಶನದ, ಅನಿರುದ್ಧ್​ ಅಭಿನಯಿಸುತ್ತಿರುವ ಚಿತ್ರ "ಶೆಫ್​ ಚಿದಂಬರ'. ಇತ್ತೀಚೆಗಷ್ಟೆ ಚಿತ್ರದ ಮೊದಲ ನೋಟವನ್ನು ಕಿಚ್ಚ ಸುದೀಪ್​ ಅನಾವರಣ ಮಾಡಿ ತಂಡಕ್ಕೆ ಶುಭಕೋರಿದ್ದರು. ಗುರುವಾರ (ಆ.10) ಹನುಮಂತನಗರದ ಶ್ರೀರಾಮಾಂಜನೇಯ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಜತೆಗೆ ಚಿತ್ರದ ಕ್ಯಾರೆಕ್ಟರ್​ ಟೀಸರ್​ ಕೂಡ ಬಿಡುಗಡೆ ಮಾಡಲಾಗಿದೆ. ಚಿತ್ರದ ಮೊದಲ ಸನ್ನಿವೇಶಕ್ಕೆ ಉಪೇಂದ್ರ ಲಕ ತೋರಿದರೆ, ಭಾರತಿ ವಿಷ್ಣುವರ್ಧನ್​ ಕ್ಯಾಮರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದರು.

ನಿರ್ದೇಶಕ ಆನಂದರಾಜ್​, "ಇದೊಂದು ಡಾರ್ಕ್​ ಕಾಮಿಡಿ ಸಿನಿಮಾ. ಬೆಂಗಳೂರಿನ ಸುತ್ತಮತ್ತ ಚಿತ್ರೀಕರಣ ಮಾಡಲಿದ್ದೇವೆ. ಐದು ವರ್ಷಗಳ ಬಳಿಕ ಅನಿರುದ್ಧ್​ ನಟಿಸುತ್ತಿರುವ ಚಿತ್ರವಿದು' ಎಂದು ಮಾಹಿತಿ ನೀಡಿದರು. ಇನ್ನು ಶೆಫ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಅನಿರುದ್ಧ, "ಇದು ಕೇವಲ ಕಾಮಿಡಿ ಅಷ್ಟೇ ಅಲ್ಲ, ಒಂದು ಕೊಲೆಯ ಸುತ್ತ ನಡೆಯುವ ಕಥೆ. ಹೀಗಾಗಿ ಕೌತಕವೂ ಇದೆ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ' ಎಂದು ಹೇಳಿದರು.

ಹಿರಿಯ ನಟಿ ಭಾರತಿ ವಿಷ್ಣುವರ್ಧನ್​, "ಇದೇ ಸ್ಥಳದಲ್ಲಿ ವಿಷ್ಣುವರ್ಧನ್​ ಅಭಿನಯದ "ಯಜಮಾನ' ಚಿತ್ರದ ಮುಹೂರ್ತ ನಡೆದಿತ್ತು. ಆ ಚಿತ್ರ ಯಶಸ್ಸು ಕಂಡ ಹಾಗೆ ಈ ಚಿತ್ರಕ್ಕು ಒಳಿತಾಗಲಿ' ಎಂದರು. ಇನ್ನು ಅನಿರುದ್ಧ್​ ಜತೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ರೇಚಲ್​ ಡೇವಿಡ್​ ಅಭಿನಯಿಸುತ್ತಿದ್ದಾರೆ. ಜತೆಗೆ ಶರತ್​ ಲೋಹಿತಾಶ್ವ, ಕೆ.ಎಸ್​.ಶ್ರೀಧರ್​, ರಘು ರಮಣಕೊಪ್ಪ, ಶಿವಮಣಿ ಮುಖ್ಯ ತಾರಾಗಣದಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ ರಿತ್ವಿಕ್​ ಮುರಳಿಧರ್​ ಸಂಗೀತ, ವಿಜೇತ್​ ಚಂದ್ರ ಸಂಕಲನವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net