More

    ಸಿಕ್ಸ್​ ಪ್ಯಾಕ್​ ಸಂಗೀತಾ : ವರ್ಕೌಟ್​, ಡಯಟ್​ ಬಗ್ಗೆ ತಿಳುವಳಿಕೆ ಇಲ್ಲದವರು ಹೆದರುತ್ತಾರೆ

    | ಹರ್ಷವರ್ಧನ್​ ಬ್ಯಾಡನೂರು

    ಇತ್ತೀಚಿನ ಕೆಲ ಬೆಳವಣಿಗೆಗಳು ಡಯಟ್​ ಮತ್ತು ವರ್ಕೌಟ್​ ಬಗ್ಗೆ ಜನರನ್ನು ಮತ್ತೆ ಯೋಚಿಸುವಂತೆ ಮಾಡಿವೆ. ವರ್ಕೌಟ್​ ಮಾಡಿದರೆ ಹೃದಯಾಘಾತ ಸಂಭವಿಸುತ್ತಂತೆ, ಡಯಟ್​ ಮಾಡಿದರೆ ಆರೋಗ್ಯ ಸಮಸ್ಯೆ ಉಂಟಾಗುತ್ತಂತೆ ಅಂತೆಲ್ಲ ಮಾತುಗಳು ಕೇಳಿಬರುತ್ತಿವೆ. ಅದರ ನಡುವೆಯೇ “777 ಚಾರ್ಲಿ’, “ಲಕ್ಕಿಮ್ಯಾನ್​’ ನಟಿ ಸಂಗೀತಾ ಶೃಂಗೇರಿ ಮೊದಲ ಬಾರಿಗೆ ಸಿಕ್ಸ್​ ಪ್ಯಾಕ್​ ಮಾಡಿಕೊಂಡಿದ್ದಾರೆ. ಡಯಟ್​, ವರ್ಕೌಟ್​ ಬಗ್ಗೆ ಏನಂತಾರೆ? ಸಿಕ್ಸ್​ ಪ್ಯಾಕ್​ ಹೇಗೆ ಮಾಡಿಕೊಂಡರು? ಮುಂದಿನ ಯೋಜನೆಗಳೇನು? ಎಂಬುದನ್ನು ವಿಜಯವಾಣಿ ಜತೆ ಮಾತನಾಡಿದ್ದಾರೆ.

    ನನಸಾಯಿತು ಬಾಲ್ಯದ ಕನಸು
    ಸಂಗೀತಾಗೆ ಚಿಕ್ಕ ವಯಸ್ಸಿನಿಂದಲೂ ಸಿಕ್ಸ್​ ಪ್ಯಾಕ್​ ಆಸೆಯಿತ್ತಂತೆ. “ಶಾಲಾದಿನಗಳಿಂದ ಕ್ರೀಡೆಗಳಲ್ಲಿದ್ದೆ. ಆಗಿನಿಂದಲೂ ಸಿಕ್ಸ್​ ಪ್ಯಾಕ್​ ಆಸೆಯಿತ್ತು. ಬಳಿಕ ಸೀರಿಯಲ್​ ಮತ್ತು ಸಿನಿಮಾಗಳಲ್ಲಿ ಬಿಜಿಯಿದ್ದ ಕಾರಣ ಸಾಧ್ಯವಾಗಿರಲಿಲ್ಲ. ಈಗ ಬ್ರೇಕ್​ ಸಿಕ್ಕಿತು. 9 ವಾರಗಳಲ್ಲಿ ಸಿಕ್ಸ್​ ಪ್ಯಾಕ್​ ಮಾಡಿಕೊಂಡೆ. ಫಿಟ್ನೆಸ್​ ತರಬೇತುದಾರ ಸವೀನ್​ ಅವರಿಂದ ತರಬೇತಿ ಪಡೆದೆ, ಈಗ ಅಂದುಕೊಂಡಿದ್ದನ್ನು ಸಾಧಿಸಿದ ಖುಷಿಯಿದೆ’ ಎಂದು ಹೇಳಿಕೊಳ್ಳುತ್ತಾರೆ.

    ಇದನ್ನೂ ಓದಿ : ದುಲ್ಕರ್​ ಸಲ್ಮಾನ್​ ಜತೆ ಹೀಗೊಂದು ಮಾತುಕತೆ: ಮೊದಲ ಒಟಿಟಿ, ವೆಬ್​ಸರಣಿ ಅನುಭವ ಹಂಚಿಕೊಂಡ ನಟ

    ಸಿಕ್ಸ್​ ಪ್ಯಾಕ್​ ಸಂಗೀತಾ : ವರ್ಕೌಟ್​, ಡಯಟ್​ ಬಗ್ಗೆ ತಿಳುವಳಿಕೆ ಇಲ್ಲದವರು ಹೆದರುತ್ತಾರೆ

    ಹೇಗಿತ್ತು ವರ್ಕೌಟ್​, ಡಯಟ್​?
    ವರ್ಕೌಟ್​ಗಿಂತ ಡಯಟ್​ ತುಂಬ ಕಷ್ಟ ಎನ್ನುವ ಸಂಗೀತಾ, “ಪ್ರತಿ ಮೂರು ತಾಸಿಗೆ ದಿನ ಏಳು ಬಾರಿ ಅಲಾರ್ಮ್​ ಇಟ್ಟುಕೊಂಡು ಊಟ ಮಾಡಬೇಕು. ಕೋಚ್​ ಹೇಳಿದ್ದನ್ನು, ಹೇಳಿದಷ್ಟೇ ತಿನ್ನಬೇಕು. ಪ್ರೋಟಿನ್​ ಪೌಡರ್​, ಸಪ್ಲಿಮೆಂಟ್​ ಸೇವಿಸುವಂತಿಲ್ಲ. ಮೊದಲ ಎರಡು ವಾರ ಕಷ್ಟವಿತ್ತು, ಹೀಗಾಗಿ ಅತ್ತಿದ್ದೂ ಇದೆ. ಪ್ರತಿದಿನ ಜಿಮ್​ಗೆ ಹೋಗಿ ಬರಲು 52 ಕಿಮೀ ಕ್ರಮಿಸಬೇಕಿತ್ತು. ಒಂದೂವರೆ ತಾಸು ವರ್ಕೌಟ್​ ಮಾಡುತ್ತಿದ್ದೆ. ಮೊದಲೆಲ್ಲ ದೋಸೆ, ಸಮೋಸ, ಸ್ವೀಟ್ಸ್​ ತಿನ್ನಬೇಕು ಅಂತ ಆಸೆಯಾಗುತ್ತಿತ್ತು. ಈಗ ಹೋಟೆಲ್​ಗೆ ಹೋದರೂ ತಿನ್ನಬೇಕು ಅನ್ನಿಸುವುದಿಲ್ಲ’ ಎಂದು ಮಾಹಿತಿ ನೀಡುತ್ತಾರೆ.

    ಸಿಕ್ಸ್​ ಪ್ಯಾಕ್​ ಸಂಗೀತಾ : ವರ್ಕೌಟ್​, ಡಯಟ್​ ಬಗ್ಗೆ ತಿಳುವಳಿಕೆ ಇಲ್ಲದವರು ಹೆದರುತ್ತಾರೆ

    ವರ್ಕೌಟ್​ನಿಂದ ಹೃದಯಾಘಾತ ಸಂಭವಿಸುತ್ತಾ?
    ಡಯಟ್​, ವರ್ಕೌಟ್​ ಮತ್ತು ಹೃದಯಾಘಾತ ಪ್ರಕರಣಗಳ ಬಗ್ಗೆ ಸಂಗೀತಾ, “ಪ್ರತಿದಿನ ಅಪಘಾತದಿಂದ ಸಾವುಗಳಾಗುತ್ತವೆ. ಹಾಗಂತ ಎಲ್ಲರೂ ಗಾಡಿ ಓಡಿಸುವುದನ್ನು ಬಿಡುವುದಿಲ್ಲ ಅಲ್ಲವಾ? ಜಾಸ್ತಿ ವರ್ಕೌಟ್​ ಮಾಡಬೇಡಿ ಅಂತ ನನಗೂ ಹಲವರು ಕಮೆಂಟ್​ ಮಾಡಿದ್ದರು. ಕಷ್ಟದಲ್ಲಿ ತಪ್ಪು ಕಂಡುಬಂದರೆ, ಕಷ್ಟಪಡುವುದೇ ಬೇಡ ಅಂತ ನೆಪ ಮಾಡಿಕೊಳ್ಳುವವರು ಹಾಗನ್ನುತ್ತಾರೆ. ವರ್ಕೌಟ್​, ಡಯಟ್​ ಬಗ್ಗೆ ತಿಳಿದಿರುವವರು ಹಾಗೆ ಮಾತನಾಡುವುದಿಲ್ಲ. ಕೆಲವರು ಆ್ಯಪ್ಸ್​, ಗೂಗಲ್​, ಮತ್ತೊಬ್ಬರ ಡಯಟ್​ ಫಾಲೋ ಮಾಡುತ್ತಾರೆ. ಪ್ರತಿಯೊಬ್ಬರ ಡಯಟ್​ ಬೇರೆ ಬೇರೆ ಇರುತ್ತದೆ. ನುರಿತ, ಅನುಭವಿ ಕೋಚ್​ಗಳ ಬಳಿ ತರಬೇತಿ ಪಡೆಯಬೇಕು. ಡಯಟ್​ ಅಂದರೆ ಊಟ ಬಿಡುವುದಲ್ಲ. ವರ್ಕೌಟ್​ ಮಾಡಲಿ, ಮಾಡದಿರಲಿ ಸಾವು ಬಂದೇಬರುತ್ತದೆ. ಮಾನಸಿಕ, ದೈಹಿಕ ಸದೃಢತೆಗೆ ವರ್ಕೌಟ್​ ಮಾಡಲೇಬೇಕು’ ಎನ್ನುತ್ತಾರೆ.

    ಇದನ್ನೂ ಓದಿ : ಬಾಕ್ಸ್ ಆಫೀಸ್​ನಲ್ಲಿ ‘ಜೈಲರ್’ ದಾಖಲೆ; ಸ್ನೇಹಿತರೊಟ್ಟಿಗೆ ಹಿಮಾಲಯಕ್ಕೆ ತೆರಳಿದ ತಲೈವಾ

    ಸಿಕ್ಸ್​ ಪ್ಯಾಕ್​ ಸಂಗೀತಾ : ವರ್ಕೌಟ್​, ಡಯಟ್​ ಬಗ್ಗೆ ತಿಳುವಳಿಕೆ ಇಲ್ಲದವರು ಹೆದರುತ್ತಾರೆ

    ಕಷ್ಟಪಡುವ ಪಾತ್ರಕ್ಕೆ ಕಾಯುತ್ತಿದ್ದೇನೆ
    ಸಂಗೀತಾ ವರ್ಕೌಟ್​ ಜತೆಗೆ ಕಥೆಗಳನ್ನೂ ಕೇಳುತ್ತಿದ್ದಾರಂತೆ. “ಈಗ ಆಯ್ಕೆಯ ವಿಷಯದಲ್ಲಿ ತುಂಬ ಎಚ್ಚರವಹಿಸಿದ್ದೇನೆ. ಕಷ್ಟವಾದರೂ ಪರವಾಗಿಲ್ಲ ಇಷ್ಟವಾಗುವ ಪಾತ್ರ ಮಾಡಬೇಕು ಅಂತ ನಿರ್ಧರಿಸಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts