ಡಿಸೆಂಬರ್ ನನ್ನ ಲಕ್ಕಿ ತಿಂಗಳು ಎಂದ ರಶ್ಮಿಕಾ ಮಂದಣ್ಣ..!

rash
Published on

ನ್ಯಾಷನಲ್​ ಕ್ರಶ್​, ಬಾಲಿವುಡ್ ಬ್ಯೂಟಿ ರಶ್ಮಿಕಾ ಮಂದಣ್ಣ ನಟಿಸಿರುವ ‘ಅನಿಮಲ್’ ಸಿನಿಮಾ ಡಿಸೆಂಬರ್ 1ಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಡಿಸೆಂಬರ್ ನನ್ನ ಲಕ್ಕಿ ತಿಂಗಳು ಯಾಕೆ ಎಂಬುದನ್ನ ಮಾತನಾಡಿದ್ದಾರೆ.


'ಪುಷ್ಪ’ ನಟಿ ರಶ್ಮಿಕಾ ಮಂದಣ್ಣ- ರಣ್‌ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.
ನಾನು ನಟಿಸಿದ ಮೊದಲ ಸಿನಿಮಾ ಕಿರಿಕ್ ಪಾರ್ಟಿಯಿಂದ ಪುಷ್ಪ ಚಿತ್ರದವರೆಗೂ ಡಿಸೆಂಬರ್‌ನಲ್ಲಿ ರಿಲೀಸ್ ಆಗಿ ಸೂಪರ್ ಡೂಪರ್ ಹಿಟ್ ಆಗಿತ್ತು. ಕಿರಿಕ್ ಪಾರ್ಟಿ, ಚಮಕ್, ಅಂಜನಿಪುತ್ರ, ಪುಷ್ಪ ಡಿಸೆಂಬರ್‌ನಲ್ಲಿ ತೆರೆಕಂಡಿತ್ತು.

ಈಗ ಡಿಸೆಂಬರ್‌ನಲ್ಲಿ ರಿಲೀಸ್ ಆಗುತ್ತಿರೋ ನನ್ನ 5ನೇ ಸಿನಿಮಾ ‘ಅನಿಮಲ್’ ಕೂಡ ನನ್ನ ಲಕ್ಕಿ ತಿಂಗಳಿನಲ್ಲಿ ರಿಲೀಸ್ ಆಗ್ತಿದೆ ಎಂದು ನಟಿ ಖುಷಿಯಿಂದ ಮಾತನಾಡಿದ್ದಾರೆ.


ಅದಷ್ಟು ಬೇಗ ಅನಿಮಲ್ ಸಿನಿಮಾ ತೆರೆಗೆ ಬರಲಿ ಎಂದು ನಾನು ಎದುರು ನೋಡ್ತಿದ್ದೇನೆ.‘ಅನಿಮಲ್’ ಸಿನಿಮಾದಲ್ಲಿ ನನ್ನ ಪಾತ್ರ ಯೂನಿಕ್ ಆಗಿದೆ. ನಾನು ಎಂದೂ ಈ ತರಹದ ಪಾತ್ರದಲ್ಲಿ ನಟಿಸಿಲ್ಲ. ಪ್ರೇಕ್ಷಕರ ಅಭಿಪ್ರಾಯ ತಿಳಿದುಕೊಳ್ಳಲು ನಾನು ಕಾಯುತ್ತಿದ್ದೇನೆ.ಈ ಚಿತ್ರ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತದೆ. ಡಿಫರೆಂಟ್ ಕಥೆಯಾಗಿದ್ದು, ಅಭಿಮಾನಿಗಳು ನಿಜಕ್ಕೂ ಈ ಚಿತ್ರ ಇಷ್ಟಪಡುತ್ತಾರೆ ಎಂದು ರಶ್ಮಿಕಾ ಮಾತನಾಡಿದ್ದಾರೆ.


‘ಅನಿಮಲ್’ ಸಿನಿಮಾದಲ್ಲಿ ಮೊದಲ ಬಾರಿಗೆ ಜೋಡಿಯಾಗಿ ರಣ್‌ಬೀರ್- ರಶ್ಮಿಕಾ ನಟಿಸಿದ್ದಾರೆ. ಈ ಚಿತ್ರದ ಟ್ರೈಲರ್‌ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ನೋಡಲು ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net