

Upasana Konidela : ಪ್ರೇಮಿಗಳ ದಿನದ ಸಂದರ್ಭದಲ್ಲಿ ಮೆಗಾಸ್ಟಾರ್ ಕುಟಂಬದ ಸೊಸೆ ಹಾಗೂ ಸೂಪರ್ಸ್ಟಾರ್ ರಾಮ್ಚರಣ್ ಅವರ ಪತ್ನಿ ಉಪಾಸನಾ ಕೊನಿಡೇಲಾ ಅವರು ಹಂಚಿಕೊಂಡಿರುವ ಇನ್ಸ್ಟಾಗ್ರಾಂ ಸ್ಟೋರಿ ಇದೀಗ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಪ್ರೇಮಿಗಳ ದಿನಕ್ಕೆ ಹೊಸ ಅರ್ಥ ನೀಡುವ ಈ ಪೋಸ್ಟ್ ಸದ್ಯ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಫೆಬ್ರವರಿ 14 ಕೇವಲ ಅವರಿಗೆ ಮಾತ್ರ ಎಂದು ಉಪಾಸನಾ ಅವರು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅಷ್ಟಕ್ಕೂ ಉಪಾಸನಾ ಅವರು ಬರೆದಿದ್ದೇನು? ಪ್ರೇಮಿಗಳ ದಿನ ಯಾರಿಗೆ? ವೈರಲ್ ಆಗುವಂಥದ್ದು ಏನಿದೆ? ಎಂಬುದನ್ನು ನಾವೀಗ ತಿಳಿಯೋಣ.
ಪ್ರೇಮಿಗಳ ದಿನ ಏನಿದ್ದರೂ 22 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮಾತ್ರ, ನೀವು ಅದಕ್ಕಿಂತ ದೊಡ್ಡವರಾಗಿದ್ದರೆ... ಆಂಟಿ ದಯವಿಟ್ಟು ಅಂತಾರಾಷ್ಟ್ರೀಯ ಮಹಿಳಾ ದಿನದವರೆಗೆ ಕಾಯಿರಿ ಎಂದು ಉಪಾಸನಾ ಅವರು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರೇಮಿಗಳ ದಿನದಂದೇ ಉಪಾಸನಾ ಅವರು ಮಾಡಿರುವ ಈ ಹಾಸ್ಯಭರಿತ ಪೋಸ್ಟ್ ಇದೀಗ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. ಉಪಾಸನಾ ಅವರ ಹಾಸ್ಯಪ್ರಜ್ಞೆ ಚೆನ್ನಾಗಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಉಪಾಸನಾ ಅವರು ಈ ಪೋಸ್ಟ್ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್)