‘ಉಗ್ರಾವತಾರ’ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಉಪೇಂದ್ರ

DSC_0028 (1)
Published on

ಬೆಂಗಳೂರು: ನಟಿ ಪ್ರಿಯಾಂಕಾ ಉಪೇಂದ್ರ ಜನ್ಮದಿನದ ನಿಮಿತ್ತ, ಗುರುಮೂರ್ತಿ ನಿರ್ದೇಶನದ ಉಗ್ರಾವತಾರ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಆಗಿದೆ. ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಉಪೇಂದ್ರ, ‘ಚಿತ್ರದ ತುಣುಕುಗಳನ್ನು ನೋಡುತ್ತಿದ್ದರೆ ಮಾಲಾಶ್ರೀ ಸಿನಿಮಾಗಳು ನೆನಪಿಗೆ ಬರುತ್ತವೆ. ಪೊಲೀಸ್ ಲುಕ್​ನಲ್ಲಿ ಮಾಲಾಶ್ರೀ ಥರ ಕಾಣಿಸುತ್ತಾರೆ ಎಂದು ಹೇಳಿ ತಂಡಕ್ಕೆ ಶುಭ ಹಾರೈಸಿದ್ದಾರೆ.

‘ಕಳೆದ ಹುಟ್ಟುಹಬ್ಬದಂದು ಇದೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿತ್ತು. ಈ ವರ್ಷ ಮೋಷನ್ ಪಿಕ್ಚರ್ ಸಿದ್ದಗೊಂಡಿದೆ. ನಿರ್ದೇಶಕರು ಕತೆ ಹೇಳಿದಾಗ ಇದನ್ನು ಮಾಡಬಹುದಾ ಎಂಬುದಾಗಿ ಪ್ರಶ್ನೆ ಕಾಡಿತ್ತು. ಆದರೆ ನಿರ್ಮಾಪಕರು, ನಿರ್ದೇಶಕರು ಮತ್ತು ಛಾಯಾಗ್ರಾಹಕರು ಸಾಥ್ ನೀಡಿದ್ದರಿಂದ ಎಲ್ಲವನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಯಿತು. ಪ್ರಸಕ್ತ ಸಾಮಾಜಿಕ ವಿಷಯಗಳು, ಮಹಿಳೆಯರ ಮೇಲಿನ ದೌರ್ಜನ್ಯ, ಅಪರಾಧ ಇದರ ಜತೆಗೆ ಒಂದಷ್ಟು ಗಂಭೀರ ವಿಷಯಗಳನ್ನು ಕಮರ್ಷಿಯಲ್ ಅಂಶಗಳೊಂದಿಗೆ ತೋರಿಸುವ ಪ್ರಯತ್ನ ಮಾಡಲಾಗಿದೆ. ಐಪಿಎಸ್ ಅಧಿಕಾರಿ ರೂಪ ನನಗೆ ಪ್ರೇರಣೆಯಾಗಿದ್ದಾರೆ’ ಎಂದರು ಪ್ರಿಯಾಂಕಾ.

ಈಗಾಗಲೇ ಚಿತ್ರದ ಶೇಕಡ 30 ರಷ್ಟು ಚಿತ್ರೀಕರಣ ಮುಗಿದಿದೆ. ಮೂರು ಫೈಟ್ ಬಾಕಿ ಇದೆ. ಡಿಸೆಂಬರ್ ಒಳಗೆ ಶೂಟಿಂಗ್ ಮುಗಿಸಿ, ಸಂಕ್ರಾಂತಿ ಹಬ್ಬದಂದು ರಿಲೀಸ್ ಮಾಡುವುದು ತಂಡದ ಪ್ಲ್ಯಾನ್. ಸತ್ಯಪ್ರಕಾಶ್, ಸುಮನ್ ಸೇರಿ ಹಲವರು ನಟಿಸುತ್ತಿದ್ದಾರೆ. ಕಿನ್ನಾಳ್‌ರಾಜ್ ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ. ವೀಣಾ ನಂದಕುಮಾರ್ ಛಾಯಾಗ್ರಾಹಕ ಮಾಡಿದ್ದು, ಎಸ್.ಜಿ.ಸತೀಶ ಬಂಡವಾಳ ಹೂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net