ಮನ್ಸೂರ್ ಕ್ಷಮೆಯಾಚಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ನಟಿ ತ್ರಿಷಾ; ಅಷ್ಟಕ್ಕೂ ಹೇಳಿದ್ದೇನು?

trisha
Published on

ತ್ರಿಷಾ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ತಮಿಳು ನಟ ಮನ್ಸೂರ್ ಅಲಿ ಖಾನ್ ಇದೀಗ ಕ್ಷಮೆಯಾಚಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮನ್ಸೂರ್, ‘‘ಲಿಯೋ’ ಸಿನಿಮಾದಲ್ಲಿ ತ್ರಿಷಾ ಜತೆ ಬೆಡ್‌ರೂಂ ಸನ್ನಿವೇಶ ಇರುತ್ತದೆ ಅಂದುಕೊಂಡಿದ್ದೆ’ ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದರು.

ಇದರಿಂದ ಬೇಸರಗೊಂಡ ತ್ರಿಷಾ, ‘ಇಂತಹ ಹೇಳಿಕೆಗಳು ಮಾನವ ಕುಲಕ್ಕೆ ಧಕ್ಕೆ, ಇನ್ನುಮುಂದೆ ಯಾವತ್ತೂ ಇವರ ಜತೆ ನಟಿಸಲ್ಲ’ ಎಂದು ಪ್ರತಿಕ್ರಿಯಿಸಿದ್ದರು. ಅಷ್ಟೇ ಅಲ್ಲ, ಚಿಂರಜೀವಿ, ಚಿನ್ಮಯೀ ಶ್ರೀಪಾದ, ನಿರ್ದೇಶಕ ಲೋಕೇಶ್ ಕನಕರಾಜ್, ಖುಷ್ಬೂ, ಮಾಳವಿಕಾ ಮೋಹನನ್ ಸೇರಿ ಹಲವಾರು ತಾರೆಯರು ತ್ರಿಷಾ ಬೆಂಬಲಕ್ಕೆ ನಿಂತಿದ್ದರು. ಈ ಪ್ರಕರಣದ ಬಳಿಕವೂ ಮನ್ಸೂರ್ ಅಲಿ ಖಾನ್, ‘ನಾನು ತ್ರಿಷಾ ಬಳಿ ಕ್ಷಮೆ ಯಾಚಿಸುವುದಿಲ್ಲ. ನಾನೇನು ತಪ್ಪು ಹೇಳಿಲ್ಲ’ ಎಂದು ಸಮರ್ಥಿಸಿಕೊಂಡಿದ್ದರು. ಮತ್ತೊಂದೆಡೆ ರಾಷ್ಟ್ರೀಯ ಮಹಿಳಾ ಆಯೋಗ ಚೆನ್ನೈನಲ್ಲಿ ಐಪಿಸಿ 354ಎ ಹಾಗೂ 509 ವಿಭಾಗದಡಿಯಲ್ಲಿ ಮನ್ಸೂರ್ ವಿರುದ್ಧ ದೂರು ದಾಖಲಿಸಿತ್ತು.

ಈ ಎಲ್ಲ ಬೆಳವಣಿಗೆಗಳಿಂದ ಎಚ್ಚೆತ್ತುಕೊಂಡಿರುವ ಮನ್ಸೂರ್, ‘ನನ್ನ ಸಹನಟಿ, ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಹೇಳಿಕೊಂಡಿದ್ದಾರೆ. ಅದಕ್ಕೆ ತ್ರಿಷಾ ‘ಮನುಷ್ಯರು ತಪ್ಪು ಮಾಡುತ್ತಾರೆ, ಕ್ಷಮಿಸುವುದು ದೈವಿಕ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net