ವೆಬ್​ ಸಿರೀಸ್​ನಲ್ಲಿ ಪ್ರಕಾಶ್​ ರಾಜ್ ಮುಖ್ಯಭೂಮಿಕೆ

Prakash Ra
Published on

ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಓಟಿಟಿ ವೇದಿಕೆ ಬೃಹದಾಕಾರವಾಗಿ ಬೆಳೆದು ನಿಲ್ಲುತ್ತಿದೆ. ಸರಣಿ ಸಿನಿಮಾಗಳು, ವೆಬ್​ಸಿರೀಸ್​ಗಳು ಬಿಡುಗಡೆಯಾಗುತ್ತಿವೆ. ಇದೀಗ ಅದೇ ವೆಬ್​ಸಿರೀಸ್​ ಲೋಕಕ್ಕೆ ಪ್ರಕಾಶ್​ ರೈ​ ಎಂಟ್ರಿ ಕೊಡುತ್ತಿದ್ದಾರೆ.

ಹೌದು, ಈಗಾಗಲೇ ಚಿತ್ರೀಕರಣ ಪೂರ್ವ ಕೆಲಸಗಳು ಶುರುವಾಗಿದ್ದು, ತೆಲುಗಿನ ಖ್ಯಾತ ನಿರ್ಮಾಪಕ ​ಅನಿಲ್​ ಸುಂಕರ ಬಂಡವಾಳ ಹೂಡಲಿದ್ದಾರೆ. ಇನ್ನು ಶೀರ್ಷಿಕೆ ಅಂತಿಮವಾಗದ ಈ ವೆಬ್​ಸಿರೀಸ್​ನಲ್ಲಿ ಪ್ರಕಾಶ್​ ರೈ ಮುಖ್ಯಭೂಮಿಕೆ ನಿಭಾಯಿಸಲಿದ್ದು, ಚಿತ್ರಕಥೆ ಬರೆಯುವ ಕೆಲಸ ಶುರುವಾಗಿದೆ.

ಒಂದಷ್ಟು ನೈಜ ಘಟನೆಗಳನ್ನೇ ಪ್ರಧಾನವಾಗಿಟ್ಟುಕೊಂಡು ಈ ವೆಬ್​ಸಿರೀಸ್ ಮೂಡಿಬರಲಿದ್ದು, ಕ್ರೈಂ ಥ್ರಿಲ್ಲರ್​ ಶೈಲಿಯಲ್ಲಿ ಸಿದ್ಧವಾಗಲಿದೆಯಂತೆ. ಇನ್ನುಳಿದಂತೆ ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ, ನಿರ್ದೇಶಕರು ಯಾರು ಎಂಬಿತ್ಯಾದಿ ವಿವರಗಳನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳಲಿದೆಯಂತೆ ತಂಡ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net