ಐಎಂಡಿಬಿ 2023ರ ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಕನ್ನಡದಿಂದ ಒಂದೇ ಚಿತ್ರ … ಯಾವುದದು?

Pathaan - Salaar
Published on

ಬೆಂಗಳೂರು: ಹೊಸ ವರ್ಷ ಶುರುವಾಗುತ್ತಿದ್ದಂತೆಯೇ, ಈ ವರ್ಷದ ಕೆಲವು ಪ್ರಮುಖ ವಿಷಯಗಳ ಕುರಿತು ಸಮೀಕ್ಷೆಗಳು ಶುರುವಾಗಿವೆ. ಈ ಪೈಕಿ ಇಂಟರ್​ನೆಟ್​ ಮೂವಿ ಡೇಟಬೇಸ್​ (ಐಎಂಡಿಬಿ) ಈ ವರ್ಷದ ಅತೀ ನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಈ ವರ್ಷ ಹಲವು ಸ್ಟಾರ್​ಗಳ ಒಂದಿಷ್ಟು ನಿರೀಕ್ಷೆಯ ಚಿತ್ರಗಳು ಬಿಡುಗಡೆಯಾಗುತ್ತಿವೆ. ಸಂಕ್ರಾಂತಿಗೆ ಅಜಿತ್​ ಅಭಿನಯದ ತಮಿಳು ಚಿತ್ರ 'ತುನಿವು', ಚಿರಂಜೀವಿ ಅಭಿನಯದ 'ವಾಲ್ಟರ್​ ವೀರಯ್ಯ', ನಂದಮೂರಿ ಬಾಲಕೃಷ್ಣ ಅಭಿನಯದ 'ವೀರ ಸಿಂಹ ರೆಡ್ಡಿ', ವಿಜಯ್​ ಅಭಿನಯದ 'ವಾರಿಸು', ಶಾರುಖ್​ ಖಾನ್​ ಅಭಿನಯದ 'ಪಠಾಣ್​' ಚಿತ್ರಗಳು ಬಿಡುಗಡೆಯಾಗುತ್ತಿವೆ.

ವರ್ಷ ಮುಂದುವರೆಯುತ್ತಿದ್ದಂತೆಯೇ 'ಆದಿಪುರುಷ್​', 'ಸಲಾರ್​', 'ಪುಷ್ಪ 2', 'ಟೈಗರ್​ 3', 'ಇಂಡಿಯನ್​ 2', 'ಜೈಲರ್​', 'ಅನಿಮಲ್​' ಚಿತ್ರಗಳಿವೆ. ಈ 20 ಚಿತ್ರಗಳ ಪಟ್ಟಿಯಲ್ಲಿ, ಕನ್ನಡದ ಒಂದೇ ಒಂದು ಚಿತ್ರವಿದೆ. ಅದೇ ಉಪೇಂದ್ರ ಮತ್ತು ಸುದೀಪ್ ನಟಿಸಿರುವ 'ಕಬ್ಜ'. ಇದಲ್ಲದೆ ಬೇರೆ ಯಾವುದೇ ಚಿತ್ರವಿಲ್ಲದಿರುವುದು ಕನ್ನಡಿಗರಲ್ಲಿ ಬೇಸರ ಮೂಡಿಸಿದೆ.

ಇನ್ನು, ಈ ಚಿತ್ರದಲ್ಲಿ ಶಾರುಖ್​ ಖಾನ್​ ಅಭಿನಯದ 'ಪಠಾಣ್​', 'ಜವಾನ್​' ಮತ್ತು 'ಡಂಕಿ' ಚಿತ್ರಗಳಿವೆ. ಪ್ರಭಾಸ್​ ಅಭಿನಯದ 'ಸಲಾರ್​' ಮತ್ತು 'ಆದಿಪುರುಷ್​', ವಿಜಯ್ ಅಭಿನಯದ 'ವಾರಿಸು' ಮತ್ತು ದಳಪತಿ 67' ಮತ್ತು ಸಲ್ಮಾನ್​ ಖಾನ್​ ಅಭಿನಯದ 'ಟೈಗರ್ 3' ಮತ್ತು 'ಕಿಸಿ ಕ ಭಾಯ್‌ ಕಿಸಿ ಕಿ ಜಾನ್' ಚಿತ್ರಗಳಿವೆ. ಮಿಕ್ಕಂತೆ ಅಜಯ್​ ದೇವಗನ್​, ಅಕ್ಷಯ್​ ಕುಮಾರ್​, ಅಲ್ಲು ಅರ್ಜುನ್​, ರಣಬೀರ್​ ಕಪೂರ್​ ಮುಂತಾದವರ ಚಿತ್ರಗಳಿವೆ.

ಐಎಂಡಿಬಿಯ 2023ರ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿ ಹೀಗಿದೆ:

1) ಪಠಾಣ್‌

2) ಪುಷ್ಪ: ದಿ ರೂಲ್ - ಭಾಗ 2

3) ಜವಾನ್

4) ಆದಿಪುರುಷ್

5) ಸಲಾರ್

6) ವಾರಿಸು

7) ಕಬ್ಜಾ

8) ದಳಪತಿ 67

9) ದಿ ಆರ್ಚಿಸ್

10) ಡಂಕಿ

11) ಟೈಗರ್ 3

12) ಕಿಸಿ ಕ ಭಾಯ್‌ ಕಿಸಿ ಕಿ ಜಾನ್

13) ತುನಿವು

14) ಅನಿಮಲ್

15) ಏಜೆಂಟ್

16) ಇಂಡಿಯನ್ 2

17) ವಾಡಿವಾಸಲ್

18) ಶೆಹಜಾದ

19) ಬಡೇ ಮಿಯಾ ಛೋಟೆ ಮಿಯಾ

20) ಭೋಲಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net