"ಮದುವೆ ಯಾವಾಗ" ಕೇಳಿದ ಸುಹಾಸಿನಿಗೆ "ನಿಮ್ಮ ಡಿವೋರ್ಸ್ ಯಾವಾಗ?" ಎಂದ ಶ್ರುತಿ ಹಾಸನ್; ವಿಡಿಯೋ ವೈರಲ್​ ಬೆನ್ನಲ್ಲೇ ನೆಟ್ಟಿಗರ ಆಕ್ರೋಶ! Shruti Haasan

Actress Shruti Haasan has drawn the ire of netizens after responding to a question from her aunt, Suhasini Mani Ratnam, about her marriage plans by asking a counter-question regarding divorce.
ಮದುವೆ ಪ್ಲಾನ್ ಬಗ್ಗೆ ಕೇಳಿದ ದೊಡ್ಡಮ್ಮ ಸುಹಾಸಿನಿ ಮಣಿರತ್ನಂ ಅವರಿಗೆ ನಟಿ ಶ್ರುತಿ ಹಾಸನ್ ವಿಚ್ಛೇದನದ ಮರುಪ್ರಶ್ನೆ ಹಾಕಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Published on: 

ಚೆನ್ನೈ: ಮಧ್ಯ ವಯಸ್ಸನ್ನು ತಲುಪಿದರೂ ಮದೆವೆಯಾದವರಿಗೆ ಮದುವೆ ಯಾವಾಗ? ಎಂಬ ಪ್ರಶ್ನೆ ಕೇಳುವುದು ತೀರಾ ಸಾಮಾನ್ಯವಾದ ಸಂಗತಿಯಾಗಿದೆ. ಅದರಲ್ಲೂ ಸಿನಿಮಾ ನಟ-ನಟಿಯರಿಗೆ ಈ ಪ್ರಶ್ನೆ ಕೇಳಿ-ಕೇಳಿ ಸಾಕಾಗಿ ಹೋಗಿರುತ್ತದೆ.

ಈಗ, ಬಹುಭಾಷಾ ನಟಿ ಶ್ರುತಿ ಹಾಸನ್ ಅವರಿಗೂ ಇಂಥದ್ದೇ ಪ್ರಶ್ನೆ ಎದುರಾಗಿದೆ. ಆದರೆ, ಈ ಪ್ರಶ್ನೆ ಕೇಳಿದ ವ್ಯಕ್ತಿಗೆ ಶ್ರುತಿ ನೀಡಿರುವ ಉತ್ತರ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ದೊಡ್ಡ ಸುನಾಮಿಯನ್ನೇ ಎಬ್ಬಿಸಿದೆ ಎಂದರೆ ಸುಳ್ಳಲ್ಲ.

ನಿಮ್ಮ ಡಿವೋರ್ಸ್​ ಯಾವಾಗ?

ಇತ್ತೀಚೆಗೆ, ನಟಿ ಶ್ರುತಿ ಹಾಸನ್ ಜತೆ ಅವರ ದೊಡ್ಡಮ್ಮ ಹಾಗೂ ಹಿರಿಯ ನಟಿ ಸುಹಾಸಿನಿ ಮಣಿರತ್ನಂ ಒಂದು ಟಾಕ್​ ಶೋ ನಡೆಸಿದ್ದರು. ಈ ಸಂವಾದ ವೇಳೆ, ಹಿರಿಯ ನಟಿ ಸುಹಾಸಿನಿ ಮಣಿರತ್ನಂ ಅವರು ಶ್ರುತಿ ಹಾಸನ್​ಗೆ "ನಿನ್ನ ಮದುವೆ ಪ್ಲಾನ್ ಏನು?" ಎಂದು ನೇರವಾಗಿ ಕೇಳಿದ್ದಾರೆ.

ಸಾಮಾನ್ಯವಾಗಿ ಇಂತಹ ವೈಯಕ್ತಿಕ ಪ್ರಶ್ನೆಗಳಿಗೆ ನಟಿಯರು ನಾಚಿಕೊಳ್ಳುತ್ತಾರೆ ಅಥವಾ ವಿಷಯವನ್ನು ಬದಲಾಯಿಸುತ್ತಾರೆ. ಆದರೆ, ಶ್ರುತಿ ಮಾತ್ರ ಸ್ವಲ್ಪವೂ ತಡವರಿಸದೆ, "ನೀವು ನಿಮ್ಮ ಪತಿಯಿಂದ (ನಿರ್ದೇಶಕ ಮಣಿರತ್ನಂ) ಯಾವಾಗ ಡಿವೋರ್ಸ್ ಪಡೆಯಲು ಪ್ಲಾನ್ ಮಾಡಿದ್ದೀರಿ?" ಎಂದು ಮರುಪ್ರಶ್ನೆ ಹಾಕಿದ್ದಾರೆ.

ಶ್ರುತಿ ಬಾಯಿಂದ ಇಂಥದ್ದೊಂದು ಅನಿರೀಕ್ಷಿತ ಉತ್ತರ ಬರುತ್ತದೆ ಎಂದು ಊಹಿಸಿಯೇ ಇರದ ಸುಹಾಸಿನಿ, ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ನಂತರ ಈ ಮಾತನ್ನು ತಮಾಷೆಗಾಗಿ ಸ್ವೀಕರಿಸಿದ ಹಿರಿಯ ನಟಿ ನಕ್ಕು ಸುಮ್ಮನಾಗಿದ್ದಾರೆ.

Also Read
ವಾರಣಾಸಿಯಲ್ಲಿ ಸಹೋದರಿಯರ ದಾಂಧಲೆ: ತಂದೆ ಮೇಲಿನ ಹಲ್ಲೆಗೆ ರೆಸ್ಟೋರೆಂಟ್‌ಗೆ ನುಗ್ಗಿ ಆಕ್ರೋಶ; ವಿಡಿಯೋ ವೈರಲ್​! Varanasi Girls
Actress Shruti Haasan has drawn the ire of netizens after responding to a question from her aunt, Suhasini Mani Ratnam, about her marriage plans by asking a counter-question regarding divorce.

ವಯಸ್ಸಿಗೆ ಮರ್ಯಾದೆ ಕೊಡಿ!

ಇನ್ನು ನಟಿ ಶ್ರುತಿ ಮತ್ತು ಸುಹಾಸಿನಿ ಅವರ ವಿಡಿಯೋ ವೈರಲ್​ ಆಗುತ್ತಲೇ ನೆಟ್ಟಿಗರು ಶ್ರುತಿ ಹಾಸನ್ ವಿರುದ್ಧ ಕೆಂಡ ಕಾರುತ್ತಿದ್ದಾರೆ. ನಿಮಗೆ ಪ್ರಶ್ನೆ ಕೇಳಿದ್ದು, ನಿಮ್ಮ ದೊಡ್ಡಮ್ಮ ಜತೆಗೆ ಚಿತ್ರರಂಗದ ಹಿರಿಯ ನಟಿ. ಅವರು ಕೇಳಿದ ಪ್ರಶ್ನೆಗೆ ಸೌಜನ್ಯಯುತವಾಗಿ ಉತ್ತರಿಸಲು ನಿಮಗೆ ಏಕೆ ಸಾಧ್ಯವಾಗಿಲ್ಲ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ.

ಸುಹಾಸಿನಿ ಅವರು ಭಾರತೀಯ ಚಿತ್ರರಂಗದ ದಿಗ್ಗಜ ನಾಯಕಿ ಆಗಿದ್ದಾರೆ. ಕನಿಷ್ಟ ಅವರ ವಯಸ್ಸನ್ನು ನೋಡಿ, ಶ್ರುತಿ ಉತ್ತರಿಸಬೇಕಿತ್ತು ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಇನ್ನೂ ಕೆಲವರು, ನಟಿ ಸುಹಾಸಿನಿ ಅವರು, ಶ್ರುತಿ ಅವರ ವೈಯಕ್ತಿ ವಿಚಾರದ ಬಗ್ಗೆ ಪ್ರಶ್ನೆ ಕೇಳಿದ್ದೇ ತಪ್ಪೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮದುವೆಗಿಂತ 'ಜೊತೆಯಾಗಿರುವುದೇ' ಮುಖ್ಯ!

ಶ್ರುತಿ ಹಾಸನ್ ಮದುವೆ ವಿಚಾರದಲ್ಲಿ ಮೊದಲಿನಿಂದಲೂ ವಿಭಿನ್ನ ನಿಲುವು ಹೊಂದಿದ್ದಾರೆ. ಮದುವೆ ಎಂಬ ಕಾನೂನುಬದ್ಧ ಕಟ್ಟುಪಾಡು ಮತ್ತು ಸಮಾಜಕ್ಕೆ ತೋರಿಸುವ ಸಂಪ್ರದಾಯಗಳಿಗಿಂತ, ಇಬ್ಬರ ನಡುವಿನ ಅರ್ಥಪೂರ್ಣವಾದ ಪ್ರೀತಿ ಮತ್ತು ಹೊಂದಾಣಿಕೆ ಮುಖ್ಯ ಎನ್ನುವುದು ಶ್ರುತಿ ಅವರ ವಾದವಾಗಿದೆ.

Also Read
ಮೆಟ್ರೋ ನಿಲ್ದಾಣಕ್ಕೆ ಶಂಕರ್‌ನಾಗ್‌ ಹೆಸರಿಡಿ: ಸರ್ಕಾರಕ್ಕೆ ಆಟೋ ಯೂನಿಯನ್​ಗಳಿಂದ ಒತ್ತಾಯ! Shankar Nag
Actress Shruti Haasan has drawn the ire of netizens after responding to a question from her aunt, Suhasini Mani Ratnam, about her marriage plans by asking a counter-question regarding divorce.

ತಮ್ಮ ಪೋಷಕರಾದ ಕಮಲ್ ಹಾಸನ್ ಮತ್ತು ಸಾರಿಕಾ ಅವರ ಸಂಬಂಧದ ಬಗ್ಗೆಯೂ ಶ್ರುತಿ ಈ ಹಿಂದೆ ಮುಕ್ತವಾಗಿ ಮಾತನಾಡಿದ್ದರು. 1988 ರಲ್ಲಿ ಮದುವೆಯಾಗಿದ್ದ ಕಮಲ್ ಮತ್ತು ಸಾರಿಕಾ, 2004ರಲ್ಲಿ ವಿಚ್ಛೇದನ ಪಡೆದಿದ್ದರು. ಪೋಷಕರ ಈ ಪಯಣ ತಮಗೆ ವೈಯಕ್ತಿಕ ಮತ್ತು ಸೃಜನಶೀಲ ಹೊಂದಾಣಿಕೆಯ ಬಗ್ಗೆ ಸಾಕಷ್ಟು ಪಾಠ ಕಲಿಸಿದೆ ಎಂದು ಶ್ರುತಿ ಹೇಳಿಕೊಂಡಿದ್ದಾರೆ.

ಶಾಂತನು ಜೊತೆ ಬ್ರೇಕಪ್ ಆಗಿದ್ದೇಕೆ?

ಇನ್ನು ಶ್ರುತಿ ಹಾಸನ್ ಅವರ ಲವ್ ಲೈಫ್ ಕೂಡ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. 2020 ರಲ್ಲಿ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಶ್ರುತಿ, ಖ್ಯಾತ ಡೂಡಲ್ ಕಲಾವಿದ ಶಾಂತನು ಹಜಾರಿಕಾ ಅವರನ್ನು ಪ್ರೀತಿಸಲು ಶುರುಮಾಡಿದ್ದರು. ನಂತರ ಇಬ್ಬರೂ ಮುಂಬೈನಲ್ಲಿ ಲಿವ್-ಇನ್ ರಿಲೇಶನ್‌ಶಿಪ್​ನಲ್ಲಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಸದಾ ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ ಈ ಜೋಡಿ, ಸುಮಾರು ನಾಲ್ಕು ವರ್ಷಗಳ ಕಾಲ ಜೊತೆಯಾಗಿತ್ತು. ಆದರೆ, ವೈಯಕ್ತಿಕ ಭಿನ್ನಾಭಿಪ್ರಾಯಗಳ ಕಾರಣದಿಂದ 2024ರ ಆರಂಭದಲ್ಲಿ ಇಬ್ಬರೂ ಬ್ರೇಕಪ್ ಮಾಡಿಕೊಂಡು ದೂರವಾಗಿದ್ದಾರೆ, (ಏಜೆನ್ಸೀಸ್​).