ಆದರೆ, ಅದು ಪ್ರೀತಿಯ ವಿಚಾರವಾಗಿ ಅಲ್ಲ. ಬದಲಿಗೆ ನಟನೆಯ ವಿಚಾರವಾಗಿ ಪೂಜಾ ಅವರು ಈ ಮಾತನ್ನು ವ್ಯಕ್ತಪಡಿಸಿದ್ದಾರೆ. ನಟಿ ಪೂಜಾ ಹೆಗ್ಡೆ ಅವರಿಗೆ ‘ರಾಧೆ ಶ್ಯಾಮ್’ ಚಿತ್ರದ ಪ್ರಚಾರದ ಒಂದು ಸಂದರ್ಶನದ ವೇಳೆ ಒಂದಿಷ್ಟು ಪ್ರಶ್ನೆಗಳನ್ನು ಕೇಳಲಾಗಿದ್ದು, ನೀವು ಯಾರ್ಯಾರ ಜತೆ ನಟಿಸಬೇಕು ಎಂದುಕೊಂಡಿದ್ದೀರಿ ಎಂಬ ಪ್ರಶ್ನೆಯೂ ಕೇಳಲಾಗಿತ್ತು. ಆಗ, ನಟಿ ಪೂಜಾ ಅವರು ಬಾಲಿವುಡ್ನಲ್ಲಿ ರಣಬೀರ್ ಕಪೂರ್ ಅವರ ಜತೆಗೆ ನಟಿಸುವ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ. ಇನ್ನು, ತಮಿಳಿನಲ್ಲಿ ನಟ ಧನುಷ್ ಅವರ ಜತೆಗೆ ನಟಿಸಬೇಕು ಎಂದು ಹೇಳಿದ್ದಾರೆ ನಟಿ ಪೂಜಾ ಹೆಗ್ಡೆ. ನಟಿಯ ಈ ಉತ್ತರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.