ನಟೋರಿಯಸ್ ಲಾರೆನ್ಸ್ ಬಿಷ್ಣೋಯ್​ ಗ್ಯಾಂಗ್​ನ ಭಯ:​ ನಟಿ ರಶ್ಮಿಕಾ ಮಂದಣ್ಣಗೂ ಭಾರಿ ಭದ್ರತೆ? Rashmika Mandanna

Rashmika Mandanna
Published on

Rashmika Mandanna: ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎನ್​ಸಿಪಿ ನಾಯಕ ಬಾಬಾ ಸಿದ್ದಿಕ್​ ಹತ್ಯೆಯಾಗಿದ್ದು ದೇಶಾದ್ಯಂತ ಭಾರಿ ಸುದ್ದಿಯಾಯಿತು. ನಟ ಸಲ್ಮಾನ್​ ಖಾನ್​ಗೆ ಆತ್ಮೀರಾಗಿದ್ದಕ್ಕೆ ಸಿದ್ದಿಕ್​ರನ್ನು ಹತ್ಯೆ ಮಾಡಿದೆವು ಎಂದು ನಟೋರಿಯಸ್​ ಲಾರೆನ್ಸ್ ಬಿಷ್ಣೋಯ್​ ಗ್ಯಾಂಗ್​ ಒಪ್ಪಿಕೊಂಡಿದೆ. ಅಲ್ಲದೆ, ಸಲ್ಮಾನ್​ಗೆ ಆಪ್ತರಾಗಿರುವವರು ಬಿಷ್ಣೋಯ್​ ಗ್ಯಾಂಗ್​ನ ಹಿಟ್​ ಲೀಸ್ಟ್​ನಲ್ಲಿದ್ದಾರೆ. ಸಿದ್ದಿಕ್​ ಹತ್ಯೆಯ ಬೆನ್ನಲ್ಲೇ ಸಲ್ಮಾನ್​ ಖಾನ್​ ಕೂಡ ತಮ್ಮ ಭದ್ರತೆಯನ್ನು ಇನ್ನಷ್ಟು ಹೆಚ್ಚು ಮಾಡಿಕೊಂಡಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನಿಂದ ಸಲ್ಮಾನ್ ಖಾನ್​ಗೆ ನಿರಂತರವಾಗಿ ಗಂಭೀರ ಬೆದರಿಕೆಗಳು ಬರುತ್ತಿವೆ. ಇತ್ತ ಕೆಲ ವರ್ಷಗಳ ಕಾಲ ಬಿಡುವು ಮಾಡಿಕೊಂಡಿದ್ದ ಸಲ್ಮಾನ್ ಖಾನ್ ಮತ್ತೆ ಚಿತ್ರದ ಶೂಟಿಂಗ್ ಆರಂಭಿಸಿದ್ದಾರೆ. ಸಲ್ಮಾನ್ ಸದ್ಯ ‘ಸಿಕಂದರ್’ ಸಿನಿಮಾ ಮಾಡುತ್ತಿದ್ದಾರೆ. ನಿರ್ದೇಶಕ ಎಆರ್ ಮುರುಗದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸಲ್ಮಾನ್ ಎದುರು ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ.

ಸಲ್ಮಾನ್ ಖಾನ್ ಅವರು ಸಿಕಂದರ್​ ಸಿನಿಮಾದ ಚಿತ್ರೀಕರಣಕ್ಕೆ ಬರುತ್ತಿದ್ದಂತೆ, ಈ ಚಿತ್ರದ ಸೆಟ್‌ಗಳ ಸುತ್ತಲೂ ಭಾರಿ ಭದ್ರತೆಯನ್ನು ಹೆಚ್ಚಿಸಲು ಚಿತ್ರತಂಡ ನಿರ್ಧರಿಸಿದೆ. ಸಲ್ಮಾನ್ ಖಾನ್ ಈಗಾಗಲೇ ತಮ್ಮ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಹೊಸ ಕಾರನ್ನು ಸಹ ಸಲ್ಮಾನ್​ ಖರೀದಿಸಿದ್ದಾರೆ.

ಮತ್ತೊಂದೆಡೆ, ಸಿಕಂದರ್​ ಸಿನಿಮಾದಲ್ಲಿ ನಟಿಸುತ್ತಿರುವ ನಾಯಕಿ ರಶ್ಮಿಕಾ ಮಂದಣ್ಣ ಸೇರಿದಂತೆ ಎಲ್ಲ ಕಲಾವಿದರನ್ನು ಸಲ್ಮಾನ್ ಶತ್ರುಗಳಿಂದ ರಕ್ಷಿಸಲು ಚಿತ್ರತಂಡ ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲು ಯೋಜಿಸುತ್ತಿದೆ ಎಂಬ ಊಹಾಪೋಹಗಳ ಹರಿದಾಡುತ್ತಿವೆ. ತೀವ್ರ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಚಿತ್ರತಂಡ ಈ ಕ್ರಮಕೈಗೊಳ್ಳಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಸಲ್ಮಾನ್ ಅಭಿನಯದ ಕೊನೆಯ ಚಿತ್ರ 'ಟೈಗರ್ 3' ಕಳೆದ ವರ್ಷ ದೀಪಾವಳಿಯಂದು ಬಿಡುಗಡೆಯಾಗಿತ್ತು. ಆದರೆ, ಈ ಸಿನಿಮಾ ನಿರೀಕ್ಷಿತ ಪ್ರದರ್ಶನ ಕಾಣಲಿಲ್ಲ. ಇದಾದ ಬಳಿಕ ಸಲ್ಮಾನ್ ಮತ್ತೆ ಹಿರಿತೆರೆಯಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಸಿಕಂದರ್​ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಸುನೀಲ್ ಶೆಟ್ಟಿ, ಕಾಜಲ್ ಅಗರ್ವಾಲ್, ಶರ್ಮನ್ ಜೋಶಿ, ಅಂಜಿನಿ ಧವನ್, ಪ್ರತೀಕ್ ಬಬ್ಬರ್ ಮತ್ತು ಸತ್ಯರಾಜ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು 2025, ಮಾರ್ಚ್ 31 ರಂದು ಈದ್ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net