ಟೈಗರ್ ಮಾಸ್ ಟೀಸರ್; ಟೈಗರ್ ನಾಗೇಶ್ವರ್ ರಾವ್ ಪಾತ್ರದಲ್ಲಿ ರವಿತೇಜ ಮಿಂಚು

tnr
Published on

ಟಾಲಿವುಡ್ ಸ್ಟಾರ್ ರವಿತೇಜ ಅಭಿನಯಿಸುತ್ತಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ‘ಟೈಗರ್ ನಾಗೇಶ್ವರ್ ರಾವ್’. ಬಾಲಿವುಡ್ ನಟ ಅನುಪಮ್ ಖೇರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೆ ಅವರ ಸ್ಟ್ ಲುಕ್ ಬಿಡುಗಡೆಯಾಗಿತ್ತು. ಅದರ ಬೆನ್ನಲ್ಲೇ ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ.

ಮದ್ರಾಸ್ ಸೆಂಟರ್ ಜೈಲಿನಿಂದ ತಪ್ಪಿಸಿಕೊಳ್ಳುವ ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿರುವ ದೃಶ್ಯಗಳ ಮೂಲಕ ಟೀಸರ್ ಪ್ರಾರಂಭವಾಗುತ್ತದೆ. ಮುರಳಿ ಶರ್ಮಾ ಮತ್ತು ಅನುಪಮ್ ಖೇರ್ ಗುಪ್ತಚರ ಇಲಾಖೆ ಅಧಿಕಾರಿಗಳ ಪಾತ್ರದಲ್ಲಿ ನಟಿಸಿದ್ದು, ನಾಗೇಶ್ವರ್ ರಾವ್ ಕುಖ್ಯಾತ ಕಳ್ಳ ಯಾಕೆ? ಮತ್ತು ಹೇಗಾಗುತ್ತಾನೆ? ಎಂಬುದನ್ನು ಮುರಳೀ ಶರ್ಮಾ ವಿವರಿಸುತ್ತಾರೆ. ಮಾಸ್ ಅವತಾರದಲ್ಲಿ ರವಿತೇಜ ಕಾಣಿಸಿಕೊಂಡಿದ್ದಾರೆ. 70ರ ದಶಕದಲ್ಲಿ ಹೈದರಾಬಾದ್‌ನ ಸ್ಟುವರ್ಟ್‌ಪುರಂನ ಕುಖ್ಯಾತ ಕಳ್ಳನ ಜೀವನಾಧಾರಿತ ಚಿತ್ರವಿದು. ಇದೇ ಮೊದಲ ಬಾರಿಗೆ ರವಿತೇಜ ಗೆಟಪ್ ಮತ್ತು ಬಾಡಿ ಲಾಂಗ್ವೇಜ್ ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ.

ಅವರಿಗೆ ಬಾಲಿವುಡ್ ನಟಿ ನೂಪುರ್ ಸನೊನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿದ್ದು, ಚಿತ್ರಕ್ಕೆ ಆರ್. ಮಧಿ ಛಾಯಾಗ್ರಹಣ, ಶ್ರೀಕಾಂತ್ ಸಂಭಾಷಣೆ, ಪ್ರಕಾಶ್ ಕುಮಾರ್ ಸಂಗೀತವಿರಲಿದೆ. ದಸರಾ ಹಬ್ಬದ ಸಂಭ್ರಮದಲ್ಲಿ ಅ. 22ರಂದು ‘ಟೈಗರ್ ನಾಗೇಶ್ವರ್ ರಾವ್’ ರಿಲೀಸ್ ಆಗಲಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net