ಅವರು ಹಾಗೆ ಮಾಡಬಾರದಿತ್ತು ; "ಡ್ರೀಮ್​ ಗರ್ಲ್​ 2' ಚಿತ್ರತಂಡದ ಬಗ್ಗೆ ನಟಿ ನುಶ್ರತ್​ ಭರೂಚಾ ಬೇಸರ

Nushrat (5)
Published on

ಬಾಲಿವುಡ್​ ನಟಿ ನುಶ್ರತ್​ ಭರೂಚಾ, 14 ವರ್ಷಗಳ ಕರಿಯರ್​ನಲ್ಲಿ 20ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. 2019ರಲ್ಲಿ ರಿಲೀಸ್​ ಆದ "ಡ್ರೀಮ್​ಗರ್ಲ್​'ನಲ್ಲಿ ಆಯುಷ್ಮಾನ್​ ಖುರಾನಾಗೆ ನಾಯಕಿಯಾಗಿದ್ದರು. ಆದರೆ, ಇದೀಗ "ಡ್ರೀಮ್​ಗರ್ಲ್​ 2'ನಲ್ಲಿ ಅವರಿಗೆ ಕೊಕ್​ ನೀಡಿರುವ ಚಿತ್ರತಂಡ, ಅನನ್ಯಾ ಪಾಂಡೆಗೆ ಅವಕಾಶ ನೀಡಿದೆ.

ಮೊದಲ ಭಾಗದಲ್ಲಿ ನಟಿಸಿದ್ದ ನಾಯಕ ಆಯುಷ್ಮಾನ್​ ಹಾಗೂ ಮಂಜೋತ್​ ಸಿಂಗ್​, ಅನ್ನು ಕಪೂರ್​, ವಿಜಯ್​ ರಾಜ್​ ಸೇರಿ ಹಲವರು ಸೀಕ್ವಲ್​ನಲ್ಲೂ ಮುಂದುವರಿದಿದ್ದು, ನಾಯಕಿಯನ್ನು ಮಾತ್ರ ಬದಲಿಸಿರುವುದು, ನುಶ್ರತ್​ ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ಮೌನ ಮುರಿದಿರುವ ಅವರು, "ಅವರು ನನ್ನನ್ನು ಏಕೆ ಆಯ್ಕೆ ಮಾಡಿಕೊಳ್ಳಲಿಲ್ಲ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು. ಆದರೆ, ಚಿತ್ರತಂಡದ ಜತೆ ಕೆಲಸ ಮಾಡುವುದನ್ನು ಮಿಸ್​ ಮಾಡಿಕೊಳ್ಳಲಿದ್ದೇನೆ. ಈ ಬದಲಾವಣೆಗೆ ಲಾಜಿಕ್​ ಇಲ್ಲ, ಉತ್ತರವೂ ಇಲ್ಲ. ನಾನೂ ಮನುಷ್ಯಳು. ಹೀಗಾಗಿ ಈ ಬದಲಾವಣೆ ಬೇಸರ ಮೂಡಿಸಿದೆ' ಎಂದು ಹೇಳಿಕೊಂಡಿದ್ದಾರೆ.

ಅಂದಹಾಗೆ, ರಾಜ್​ ಶಾಂಡಿಲ್ಯ ನಿರ್ದೇಶನದ "ಡ್ರೀಮ್​ಗರ್ಲ್​ 2' ಆ.25ರಂದು ರಿಲೀಸ್​ ಆಗಲಿದ್ದು, ಅಂದೇ ನುಶ್ರತ್​ ಅಭಿನಯದ "ಅಕೇಲಿ' ಚಿತ್ರವೂ ಬಿಡುಗಡೆಯಾಗಲಿದೆ. ಜತೆಗೆ "ಛೋರಿ 2' ಚಿತ್ರದಲ್ಲೂ ನುಶ್ರತ್​ ಕಾಣಿಸಿಕೊಳ್ಳಲಿದ್ದಾರೆ.
-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net