More

    1 ಚಿತ್ರ, 4 ಭಾಷೆ, 24 ಟ್ಯೂನ್​ಗಳು! ಪ್ಯಾನ್​ ಇಂಡಿಯಾ ಸಿಕಾಡಾ ಚಿತ್ರತಂಡದ ವಿಭಿನ್ನ ಪ್ರಯತ್ನ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಪ್ಯಾನ್​ ಇಂಡಿಯಾ ಚಿತ್ರಗಳಲ್ಲಿ ಸಾಮಾನ್ಯವಾಗಿ ಒಂದು ಭಾಷೆಯಲ್ಲಿ ಚಿತ್ರೀಕರಣ ನಡೆಸಿ, ನಾಲ್ಕೆ$ದು ಭಾಷೆಗಳಲ್ಲಿ ಡಬ್​ ಮಾಡಲಾಗುತ್ತದೆ. ಹಾಡುಗಳನ್ನೂ ಸಹ ಒಂದೇ ಸಂಗೀತಕ್ಕೆ ಬೇರೆ ಭಾಷೆಗಳಲ್ಲಿ ಸಾಹಿತ್ಯ ರಚಿಸಿ, ಆಯಾ ಭಾಷೆಗಳ ಸಿಂಗರ್​ಗಳಿಂದ ಹಾಡಿಸಲಾಗುತ್ತದೆ. ಆದರೆ, “ಸಿಕಾಡಾ’ ಎಂಬ ಚಿತ್ರತಂಡ ವಿಭಿನ್ನ ರೀತಿಯ ಪ್ರಯತ್ನಕ್ಕೆ ಮುಂದಾಗಿದೆ.

    ಇದನ್ನೂ ಓದಿ : ತಲೆ ಬೋಳಿಸಿಕೊಂಡ ‘ಮನಸೆಲ್ಲಾ ನೀನೆ’ ಸಿನಿಮಾ ನಟಿ; ಏನಾಯ್ತು? ಎಂದ ಅಭಿಮಾನಿಗಳು

    1 ಚಿತ್ರ, 4 ಭಾಷೆ, 24 ಟ್ಯೂನ್​ಗಳು! ಪ್ಯಾನ್​ ಇಂಡಿಯಾ ಸಿಕಾಡಾ ಚಿತ್ರತಂಡದ ವಿಭಿನ್ನ ಪ್ರಯತ್ನ

    ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಆರು ಹಾಡುಗಳಿದ್ದು, ನಾಲ್ಕು ಭಾಷೆಗಳಲ್ಲು ಭಿನ್ನ, ವಿಭಿನ್ನ ಟ್ಯೂನ್​ಗಳನ್ನು ಮಾಡಲಾಗಿದೆ. ಆ ಮೂಲಕ ಈ ಒಂದೇ ಚಿತ್ರ, ನಾಲ್ಕು ಭಾಷೆಗಳಲ್ಲಿ ಒಟ್ಟು 24 ಹೊಸ ಟ್ಯೂನ್​ನ ಹಾಡುಗಳು ಇರಲಿವೆ. ಅಂದಹಾಗೆ ಇದು ಶ್ರೀಜಿತ್​ ಎಡವನ ಚೊಚ್ಚಲ ಪ್ರಯತ್ನ. ಅವರೇ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ.

    ಇದನ್ನೂ ಓದಿ : ಬಿಡುಗಡೆಯಾಯ್ತು ಅನುಷ್ಕಾ ಶೆಟ್ಟಿ ನಟನೆಯ ‘ಮಿಸ್​ ಶೆಟ್ಟಿ ಮಿಸ್ಟರ್​ ಪೋಲಿಶೆಟ್ಟಿ’ ಟ್ರೇಲರ್​; ಫ್ಯಾನ್ಸ್​ ಹೇಳಿದ್ದೇನು?

    1 ಚಿತ್ರ, 4 ಭಾಷೆ, 24 ಟ್ಯೂನ್​ಗಳು! ಪ್ಯಾನ್​ ಇಂಡಿಯಾ ಸಿಕಾಡಾ ಚಿತ್ರತಂಡದ ವಿಭಿನ್ನ ಪ್ರಯತ್ನ

    ಇತ್ತೀಚೆಗಷ್ಟೆ ಸ್ಯಾಂಡಲ್​ವುಡ್​ ತಾರೆಯರಾದ ಮೇನಾ ರಾಜ್​ ಮತ್ತು ಪ್ರಜ್ವಲ್​ ದೇವರಾಜ್​ ಕನ್ನಡ ವರ್ಷನ್​ನ ಮೊದಲ ಲುಕ್​ ಬಿಡುಗಡೆ ಮಾಡಿದರು. ರಜಿತ್​ ಸಿ.ಆರ್​, ಗಾಯತ್ರಿ ಮಯೂರ, ಜೈಸ್​ ಜೋಸ್​ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಬೆಂಗಳೂರು, ಅಟ್ಟಪಾಡಿ, ವಾಗಮೋನ್​, ಕೊಚ್ಚಿ ಸೇರಿ ಹಲವೆಡೆ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ನವೀನ್​ ರಾಜ್​ ಛಾಯಾಗ್ರಹಣ, ಶೈಜಿತ್​ ಕುಮಾರನ್​ ಸಂಕಲನವಿರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts