More

    ಬಿಡುಗಡೆಯಾಯ್ತು ಅನುಷ್ಕಾ ಶೆಟ್ಟಿ ನಟನೆಯ ‘ಮಿಸ್​ ಶೆಟ್ಟಿ ಮಿಸ್ಟರ್​ ಪೋಲಿಶೆಟ್ಟಿ’ ಟ್ರೇಲರ್​; ಫ್ಯಾನ್ಸ್​ ಹೇಳಿದ್ದೇನು?

    ಆಂಧ್ರಪ್ರದೇಶ: ಕರಾವಳಿ ಬೆಡಗಿ, ಟಾಲಿವುಡ್​ ನಟಿ ಅನುಷ್ಕಾ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ರೋಮ್ಯಾಂಟಿಕ್-ಕಾಮಿಡಿ ಜಾನರ್​ನ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಚಿತ್ರದ ಟ್ರೇಲರ್​ ಇಂದು ಯುಟ್ಯೂಬ್​ನಲ್ಲಿ ಬಿಡುಗಡೆಗೊಂಡಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.

    ಇದನ್ನೂ ಓದಿ: ಅಪ್ಪು ಸರ್​ ಆಫರ್​ ನೀಡಿದ್ದರು ; ರಿಷಬ್​ ಶೆಟ್ಟಿ ಜತೆ ಸಿನಿಮಾ ಮಾಡುವಾಸೆ ವ್ಯಕ್ತಪಡಿಸಿದ ನಟ ಗುಲ್ಶನ್​ ದೇವಯ್ಯ

    ಅನುಷ್ಕಾ ಶೆಟ್ಟಿ ಮತ್ತು ನವೀನ್ ಪೋಲಿಶೆಟ್ಟಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಮಿಸ್​ ಶೆಟ್ಟಿ ಮಿಸ್ಟರ್​ ಪೋಲಿಶೆಟ್ಟಿ’ ಚಿತ್ರಕ್ಕೆ ಈ ಹಿಂದಿನಿಂದಲೂ ಸಾಕಷ್ಟು ನಿರೀಕ್ಷೆಗಳು ವ್ಯಕ್ತವಾಗಿತ್ತು. ಸಿನಿಮಾ ರಿಲೀಸ್​ಗೆ ಕಾಯುತ್ತಿದ್ದ ಸಿನಿಪ್ರೇಕ್ಷಕರು ಮತ್ತು ಅಭಿಮಾನಿಗಳಿಗೆ ಇದೀಗ ಚಿತ್ರತಂಡ ಟ್ರೇಲರ್​ ಬಿಡುಗಡೆಗೊಳಿಸುವ ಮೂಲಕ ಸಂತಸ ನೀಡಿದೆ.

    ಮಹೇಶ್ ಬಾಬು ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರದ ಟ್ರೇಲರ್​ ಇಂದು ಸಂಜೆ 6:30ಕ್ಕೆ ಯುವಿ ಕ್ರಿಯೇಷನ್ಸ್​ ಯೂಟ್ಯೂಬ್​ ಚಾನಲ್​ನಲ್ಲಿ ಅಧಿಕೃತವಾಗಿ ರಿಲೀಸ್​ ಆಗಿದೆ. ಟ್ರೇಲರ್​ನಲ್ಲಿ ನಟ ನವೀನ್ ಪೋಲಿಶೆಟ್ಟಿ ಸಿಧು ಎಂಬ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಪಾತ್ರವನ್ನು ನಿಭಾಯಿಸಿದ್ದು, ಅನುಷ್ಕಾ ಶೆಟ್ಟಿ ಎಕ್ಸ್​ಪರ್ಟ್​ ಮಾಸ್ಟರ್ ಚೆಫ್ ಅನ್ವಿತಾ ಆಗಿ ತೆರೆ ಮೇಲೆ ಮಿಂಚಿದ್ದಾರೆ.

    ಇದನ್ನೂ ಓದಿ: ಮರುಪರೀಕ್ಷೆಗೆ ಅಂತಿಮ ಪದವಿ ವಿದ್ಯಾರ್ಥಿಗಳ ಆಗ್ರಹ

    ಇಂಜಿನಿಯರಿಂಗ್​ ಮಾಡಿ ಸ್ಟ್ಯಾಂಡ್​ ಅಪ್​ ಕಾಮಿಡಿಯನ್​ ಆಗುವ ಆಸೆ ಯಾಕೆ? ಎಂಬ ಪ್ರಶ್ನೆಯೊಂದಿಗೆ ಶುರುವಾಗಿ, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಪ್ರಯತ್ನ ಚಿತ್ರತಂಡದಿಂದ ಉತ್ತಮವಾಗಿ ಮೂಡಿಬಂದಿದೆ. ಹಾಸ್ಯದ ಜತೆ ಪ್ರೀತಿಯ ಬೆಸುಗೆ ನೋಡಗರನ್ನು ಸೆಳೆಯುತ್ತದೆ.

    ಟ್ರೇಲರ್ ವೀಕ್ಷಣೆ ಬಳಿಕ ಚಿತ್ರವನ್ನು ದೊಡ್ಡ ಪರದೆಯ ಮೇಲೆ ಶೀಘ್ರವೇ ನೋಡಬೇಕು ಎಂಬ ಕುತೂಹಲವನ್ನು ಪ್ರೇಕ್ಷಕರಲ್ಲಿ ಮೂಡಿಸುವ ಕೆಲಸವನ್ನು ಚಿತ್ರತಂಡ ಟ್ರೇಲರ್​ ಮೂಲಕ ಸಾಧಿಸಿದೆ. ಟ್ರೇಲರ್​ ವೀಕ್ಷಿಸಿದ ಅಭಿಮಾನಿಗಳು ದೊಡ್ಡ ಬ್ರೇಕ್​ ನಂತರ ಚಿತ್ರರಂಗಕ್ಕೆ ಮರಳಿರುವ ಅನುಷ್ಕಾ ಶೆಟ್ಟಿ ನಟನೆಗೆ ಫಿದಾ ಆಗಿದ್ದು, ಕಮೆಂಟ್​ ಮಾಡುವ ಮೂಲಕ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ಗೆ ಪತ್ರ ಬರೆದು ರಾಜ್ಯಕ್ಕೆ ಹಣಕಾಸಿನ ಬೇಡಿಕೆಯಿಟ್ಟ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts