More

    ಅಪ್ಪು ಸರ್​ ಆಫರ್​ ನೀಡಿದ್ದರು ; ರಿಷಬ್​ ಶೆಟ್ಟಿ ಜತೆ ಸಿನಿಮಾ ಮಾಡುವಾಸೆ ವ್ಯಕ್ತಪಡಿಸಿದ ನಟ ಗುಲ್ಶನ್​ ದೇವಯ್ಯ

    | ಹರ್ಷವರ್ಧನ್​ ಬ್ಯಾಡನೂರು

    ಬೆಂಗಳೂರು ಮೂಲದ ಕೊಡವ ಕುಟುಂಬಕ್ಕೆ ಸೇರಿದ ನಟ ಗುಲ್ಶನ್​ ದೇವಯ್ಯ ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ರಂಗಭೂಮಿಯಲ್ಲಿ ಕಲಿತು, ಹಿಂದಿ ಕಿರುತೆರೆಯಲ್ಲಿ ನಟಿಸಿ, ಇದೀಗ ಬಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಕಳೆದ 13 ವರ್ಷಗಳಲ್ಲಿ 18 ಹಿಂದಿ ಸಿನಿಮಾಗಳು, ಐದಾರು ವೆಬ್​ಸರಣಿಗಳಲ್ಲೂ ನಟಿಸಿದ್ದಾರೆ. ಇದೀಗ ಅವರು ನಟಿಸಿರುವ “ಗನ್ಸ್​ ಆ್ಯಂಡ್​ ಗುಲಾಬ್ಸ್​’ ವೆಬ್​ಸಿರೀಸ್​ ಬಿಡುಗಡೆಯಾಗಿದ್ದು, ಅದೇ ಖುಷಿಯಲ್ಲಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು.

    ಇದನ್ನೂ ಓದಿ : ಡಾಲಿ ಹುಟ್ಟುಹಬ್ಬಕ್ಕೆ ‘ಉತ್ತರಕಾಂಡ’ ಟೀಸರ್ ರಿಲೀಸ್​​​

    ಅಪ್ಪು ಸರ್​ ಆಫರ್​ ನೀಡಿದ್ದರು ; ರಿಷಬ್​ ಶೆಟ್ಟಿ ಜತೆ ಸಿನಿಮಾ ಮಾಡುವಾಸೆ ವ್ಯಕ್ತಪಡಿಸಿದ ನಟ ಗುಲ್ಶನ್​ ದೇವಯ್ಯ
    • ಬೆಂಗಳೂರಿನಿಂದ ಬಾಲಿವುಡ್​ ಪಯಣ ಹೇಗಿತ್ತು?
      – ಬೆಂಗಳೂರು ನನ್ನ ಮನೆ. ಇಲ್ಲೇ ಹುಟ್ಟಿ, ಬೆಳೆದಿದ್ದು. ಕ್ಲೂನಿ ಕಾನ್ವೆಂಟ್​, ಸೇಂಟ್​ ಜೋಸ್ಸ್​ೆನಲ್ಲಿ ಶಿಕ್ಷಣ ಓದಿದೆ. ಸಿಟಿಆರ್​ ದೋಸೆ ನನ್ನ ೇವರೇಟ್​. ನಾಟಕ ಮಾಡುತ್ತಿದ್ದೆ. ರಂಗಶಂಕರದಲ್ಲಿ ಹಲವು ಶೋಗಳನ್ನು ಮಾಡಿದ್ದೇನೆ. ಚಿತ್ರರಂಗದಲ್ಲಿ ಏನಾದರೂ ಮಾಡಬಹುದು ಅಂತ ಆತ್ಮವಿಶ್ವಾಸ ಬಂತು. ನನಗೆ ಚಿಕ್ಕವಯಸ್ಸಿನಿಂದಲೂ ಹಿಂದಿ ಸಿನಿಮಾಗಳನ್ನು ಹೆಚ್ಚು ನೋಡುತ್ತಿದ್ದ ಕಾರಣ ವಿಚಿತ್ರ ಪ್ರೇಮ. ನಾಟಕ ಮಾಡುವಾಗಲೇ ಬಾಲಿವುಡ್​ನವರು ಪರಿಚಯವಾದರು. ಆಡಿಷನ್ಸ್​ ಕೊಟ್ಟೆ. ಒಂದು ಅವಕಾಶ ದೊರೆಯಿತು, ನಂತರ ಮತ್ತೊಂದು ಅವಕಾಶ, ಅದೃಷ್ಟ ಚೆನ್ನಾಗಿದೆ. ಹೀಗೆ ಸಾಗುತ್ತಾ ಬಂದೆ.
    • ಪ್ಯಾನ್​ ಇಂಡಿಯಾ ಪರಿಕಲ್ಪನೆಯ ಬಗ್ಗೆ ನಿಮ್ಮ ಅಭಿಪ್ರಾಯ.
      – ನಾನು ಮೊದಲಿನಿಂದಲೇ ಪ್ಯಾನ್​ ಇಂಡಿಯಾ. ನಾನು ಮೂಲತಃ ಕೊಡವ, ಹುಟ್ಟಿದ್ದು ಬೆಳೆದಿದ್ದು ಬೆಂಗಳೂರು, ಕೆಲಸ ಮಾಡುತ್ತಿರುವುದು ಹಿಂದಿ ಚಿತ್ರರಂಗದಲ್ಲಿ.
    ಅಪ್ಪು ಸರ್​ ಆಫರ್​ ನೀಡಿದ್ದರು ; ರಿಷಬ್​ ಶೆಟ್ಟಿ ಜತೆ ಸಿನಿಮಾ ಮಾಡುವಾಸೆ ವ್ಯಕ್ತಪಡಿಸಿದ ನಟ ಗುಲ್ಶನ್​ ದೇವಯ್ಯ

    ಇದನ್ನೂ ಓದಿ : ತಲೆ ಬೋಳಿಸಿಕೊಂಡ ‘ಮನಸೆಲ್ಲಾ ನೀನೆ’ ಸಿನಿಮಾ ನಟಿ; ಏನಾಯ್ತು? ಎಂದ ಅಭಿಮಾನಿಗಳು

    • ನೀವು ಕನ್ನಡ ಚಿತ್ರದಲ್ಲೂ ನಟಿಸಬೇಕಿತ್ತಲ್ಲವೇ?
      – ಹೌದು, ರಿಷಬ್​ ಶೆಟ್ಟಿ ನಿರ್ದೇಶನದಲ್ಲಿ “ರುದ್ರಪ್ರಯಾಗ’ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಅದು ಪ್ರಾರಂಭವಾಗಲಿಲ್ಲ. ರಿಷಬ್​ ಕಾನ್ಸೆಪ್ಟ್​ಗಳು, ಸಿನಿಮಾ ಮಾಡುವ ಹುಚ್ಚು ನನಗಿಷ್ಟ. ಬೆಂಗಳೂರಿಗೆ ಬಂದಿದ್ದಾಗ ಅವರನ್ನು ಭೇಟಿಯಾಗಿದ್ದೆ. ಕಥೆಯನ್ನೂ ಒಪ್ಪಿಕೊಂಡಿದ್ದೆ. ಬಳಿಕ ನನ್ನ ಅಮ್ಮನಿಗೆ ತಿಳಿಸಿದಾಗ ಅವರು, “ನೀನು ಕರ್ನಾಟಕದವನು ಒಂದಾದರೂ ಕನ್ನಡ ಸಿನಿಮಾ ಮಾಡು’ ಅಂತ ಹೇಳಿದ್ದರು. ಆದರೆ, “ರುದ್ರಪ್ರಯಾಗ’ ಕಾರಣಾಂತರಗಳಿಂದ ಆಗಲಿಲ್ಲ. ಕನ್ನಡ ಸಿನಿಮಾ ಮಾಡುವುದಾದರೆ ರಿಷಬ್​ ಶೆಟ್ಟಿ ಜತೆ ಮಾತ್ರ ಸಿನಿಮಾ ಮಾಡುತ್ತೇನೆ.
    • ಕನ್ನಡ ಚಿತ್ರರಂಗದಲ್ಲಿ ಬೇರೆ ಕಲಾವಿದರು ಪರಿಚಯವಿದ್ದಾರಾ?
      – ಒಮ್ಮೆ ಪುನೀತ್​ ರಾಜಕುಮಾರ್​ ಜತ ಮಾತನಾಡಿದ್ದೆ. ದಾನಿಶ್​ ಸೇಠ್​ ನನ್ನ ಫ್ರೆಂಡ್​​. ಆತ ನಟಿಸಿದ್ದ “ಫ್ರೆಂಚ್​​ ಬಿರಿಯಾನಿ’ ಸಿನಿಮಾ ಪುನೀತ್​ ಸರ್​ ನಿರ್ಮಿಸಿದ್ದರು. ಶೂಟಿಂಗ್​ ಸಮಯದಲ್ಲಿ ದಾನಿಶ್​ ಒಮ್ಮೆ ವಿಡಿಯೋ ಕರೆ ಮಾಡಿದ್ದ. ಆಗ ಸ್ವಲ್ಪ ಹೊತ್ತು ಪುನೀತ್​ ಅವರ ಜತೆ ಮಾತನಾಡಿದ್ದೆ. ನನ್ನ ಜತೆ ಸಿನಿಮಾ ಮಾಡಬೇಕು ಅಂತ ಹೇಳಿದ್ದರು. ಬೆಂಗಳೂರಿಗೆ ಬಂದಾಗ ಭೇಟಿಯಾಗುವೆ ಎಂದೂ ಅವರಿಗೆ ತಿಳಿಸಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ. ಇನ್ನು ಸಿಹಿಕಹಿ ಚಂದ್ರು ಸರ್​ ರಂಗಭೂಮಿ ದಿನಗಳಿಂದಲೂ ಪರಿಚಯ.

    ಇದನ್ನೂ ಓದಿ : ‘ಪುಷ್ಪ’ ನಟಿ ರಶ್ಮಿಕಾ ವಿತ್ ಔಟ್ ಮೇಕಪ್‌ನಲ್ಲಿರೋ ಫೋಟೋ ಶೇರ್​​-‘ನ್ಯಾಚುರಲ್ ಬ್ಯೂಟಿ ಎಂದ ಫ್ಯಾನ್ಸ್’

    ಅಪ್ಪು ಸರ್​ ಆಫರ್​ ನೀಡಿದ್ದರು ; ರಿಷಬ್​ ಶೆಟ್ಟಿ ಜತೆ ಸಿನಿಮಾ ಮಾಡುವಾಸೆ ವ್ಯಕ್ತಪಡಿಸಿದ ನಟ ಗುಲ್ಶನ್​ ದೇವಯ್ಯ
    • ಸಿನಿಮಾ, ಒಟಿಟಿ ಎರಡೂ ಕಡೆಗಳಲ್ಲಿ ಬಿಜಿಯಿದ್ದೀರಿ…
      – ಎರಡಕ್ಕೂ ವ್ಯತ್ಯಾಸ ಹೆಚ್ಚೇನೂ ಇರುವುದಿಲ್ಲ. ಅದೇ ತಂತ್ರಜ್ಞರು, ಕಲಾವಿದರರ ಜತೆ ಅದೇ ರೀತಿ ಚಿತ್ರೀಕರಣ ನಡೆಯುತ್ತದೆ. ಆದರೆ, ವೆಬ್​ಸರಣಿಗಳಲ್ಲಿ ಕೆಲವೊಮ್ಮೆ ಯೂನಿಟ್​ ಎ, ಯೂನಿಟ್​ ಬಿ ಎಂಬಂತೆ ಎರಡು ತಂಡಗಳಾಗಿ ಚಿತ್ರೀಕರಣ ಮಾಡುತ್ತಾರೆ. ಹೀಗಾಗಿ ವೇಗವಾಗಿ ಕೆಲಸಗಳು ನಡೆಯುತ್ತವೆ. ಹೊಸ ಪ್ರತಿಭೆಗಳಿಗೆ ಒಟಿಟಿ ಉತ್ತಮ ವೇದಿಕೆ ಒದಗಿಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts