ಡಾಲಿ ಹುಟ್ಟುಹಬ್ಬಕ್ಕೆ ‘ಉತ್ತರಕಾಂಡ’ ಟೀಸರ್ ರಿಲೀಸ್​​​

dff
Published on

ಡಾಲಿ ಧನಂಜಯ್ ನಟನೆಯ ‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ಕೂಡ ಶುರುವಾಗಿಲ್ಲ ಎಂದು ಹೇಳಲಾಗಿತ್ತು. ಇದೀಗ ಚಿತ್ರತಂಡದಿಂದ ಹೊಸ ಅಪ್ ಡೇಟ್ ಸಿಕ್ಕಿದ್ದು, ಧನಂಜಯ್ ಹುಟ್ಟು ಹಬಕ್ಕಾಗಿ ಟೀಸರ್ ರಿಲೀಸ್ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ.


ಸಿನಿಮಾದ ಮುಹೂರ್ತವಾಗಿ ಹಲವು ತಿಂಗಳುಗಳೇ ಕಳೆದಿತ್ತು ಇದೀಗ ಡಾಲಿ ಹುಟ್ಟುಹಬ್ಬದಂದೇ ಟ್ರೇಲರ್​ ರಿಲೀಸ್​​ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಡಾಲಿ ಹುಟ್ಟು ಹಬ್ಬದ ಮುನ್ನ ದಿನ ಆ.22 ರಂದು ಉತ್ತರಕಾಂಡ ಸಿನಿಮಾದ ಟೀಸರ್ ರಿಲೀಸ್ ಆಗಲಿದ್ದು, ಸಂಜೆ 5.30ಕ್ಕೆ ಸಂತೋಷ ಚಿತ್ರಮಂದಿರದಲ್ಲಿ ಟೀಸರ್ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲಿಯೇ ಸಿನಿಮಾ ಟೀಮ್ ನೆಚ್ಚಿನ ನಟನ ಹುಟ್ಟು ಹಬ್ಬವನ್ನೂ ಆಚರಿಸಲಿದೆ.


ಹುಟ್ಟು ಹಬ್ಬದ ದಿನದಂದು ತಾವು ಮನೆಯಲ್ಲಿ ಇರದೇ ಇರುವ ಕಾರಣಕ್ಕಾಗಿ ಯಾರೂ ಮನೆ ಹತ್ತಿರ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಟ್ಟುಹಬ್ಬವನ್ನು ಅಭಿಮಾನಿಗಳು ಡಾಲಿ ಉತ್ಸವ ಹೆಸರಿನಲ್ಲಿ ಆಚರಿಸುತ್ತಿದ್ದಾರೆ. ಡಾಲಿ ಉತ್ಸವ ಎಂದು ಹೆಸರಿಟ್ಟು ‘ಅಭಿಮಾನದ ತೇರು ಎಳೆಯೋಣ ಬನ್ನಿ‘ ಎಂದು ಟ್ಯಾಗ್ ಲೈನ್ ಇಡಲಾಗಿದೆ. 4 ವರ್ಷಗಳ ಬಳಿಕ ಅದ್ದೂರಿಯಾಗಿ ಅಭಿಮಾನಿಗಳ ಜೊತೆ ಡಾಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಜೊತೆಗೆ ಡಾಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು 10 ವರ್ಷಗಳಾಗಿದೆ.
ಆಗಸ್ಟ್ 23ಕ್ಕೆ ಡಾಲಿ ಹುಟ್ಟು ಹಬ್ಬ. ಅಂದು ಮತ್ತೆ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೂ ನಂದಿ ಲಿಂಕ್ಸ್ ಗ್ರೌಂಡ್‍ ನಲ್ಲೇ ಧನಂಜಯ್ ಅಭಿಮಾನಿಗಳೊಂದಿಗೆ ಸಮಯ ಕಳೆಯುವುದಾಗಿ ತಿಳಿಸಿದ್ದಾರೆ. ಹುಟ್ಟು ಹಬ್ಬಕ್ಕೆ ಬರುವವರು ಕೇಕ್, ಹಾರ ತರಬೇಡಿ ಎಂದು ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net