ಕೌತುಕದ ಕಿಟಕಿಯೊಳಗೆ ಕಾನ್ಸೀಲಿಯಂ; ಇದು ಟೆಕ್ಕಿಗಳದೇ ಸಿನಿಮಾ..

Conscilium
Published on

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಐಟಿ ಮಂದಿಯ ಆಗಮನ ಹೊಸದೇನಲ್ಲ. ಇದೀಗ ಅಂಥದ್ದೆ ತಂಡವೊಂದು ಹೊಸ ಸಿನಿಮಾದ ಜತೆಗೆ ಆಗಮಿಸಿದೆ. ಈ ಚಿತ್ರದ ನಾಯಕ, ನಿರ್ದೇಶಕ, ನಿರ್ವಪಕ ಮತ್ತು ಬಹುತೇಕ ತಂಡದವರೆಲ್ಲರೂ ಟೆಕ್ಕಿಗಳೇ. ಇವರ ಚಿತ್ರದ ಶೀರ್ಷಿಕೆ ‘ಕಾನ್ಸೀಲಿಯಂ’ ಅಷ್ಟೇ ವಿಶೇಷ ಮತ್ತು ಅಷ್ಟೇ ಕನ್​ಪ್ಯೂಷನ್​ನಿಂದ ಕೂಡಿದೆ. ಇತ್ತೀಚೆಗಷ್ಟೇ ಟ್ರೇಲರ್ ಸಹ ಬಿಡುಗಡೆ ಆಗಿದೆ. ಹಾಗಾದರೆ ಏನಿದು ‘ಕಾನ್ಸೀಲಿಯಂ’? ಇದೊಂದು ಲ್ಯಾಟಿನ್ ಪದ. ಪ್ಲಾನಿಂಗ್, ಜಡ್ಜ್​ಮೆಂಟ್ ಅಡ್ವೈಸ್ ... ಹೀಗೆ ಹಲವು ಪದಗಳಿಂದ ಇದನ್ನು ಅರ್ಥೈಸಿಕೊಳ್ಳಬಹುದು.

ಸಮರ್ಥ ಈ ಚಿತ್ರದ ನಿರ್ದೇಶಕ ಮತ್ತು ನಾಯಕನಾದರೆ, ಅವರ ಸಹೋದರ ಪ್ರೀತಮ್ ಚಿತ್ರದ ಮತ್ತೋರ್ವ ನಾಯಕ. ಈ ಹೊಸ ತಂಡಕ್ಕೆ ಕಿರುತೆರೆಯಲ್ಲಿ ಗುರುತಿಸಿಕೊಂಡ ನಟಿ ಅರ್ಚನಾ ಸಹ ಜತೆಯಾಗಿದ್ದಾರೆ. ‘‘ಮನೆದೇವು›’ ಧಾರಾವಾಹಿ ‘ನೂರೊಂದು ನೆನಪು ಸಿನಿಮಾ ಮಾಡಿದ್ದೆ. ಅದಾದ ಬಳಿಕ ಒಪ್ಪಿದ ಚಿತ್ರವಿದು. ಹೊಸತಂಡವಾದರೂ, ಸಿನಿಮಾದ ಬಗ್ಗೆ ಎಲ್ಲರಲ್ಲೂ ಪ್ಯಾಷನ್ ಇದೆ. ನಾನಿಲ್ಲಿ ಮನಃಶಾಸ್ತ್ರಜ್ಞೆಯಾಗಿ ಕಾಣಿಸಿಕೊಂಡಿದ್ದೇನೆ. ಶೀರ್ಷಿಕೆ ಹೇಳುವಂತೆ ಒಂದಷ್ಟು ವಿಶೇಷತೆಗಳು ಸಿನಿಮಾದಲ್ಲಿವೆ. ಸೈನ್ಸ್ ಬಗ್ಗೆಯೂ, ಸ್ಪೇಸ್ ಬಗ್ಗೆಯೂ ಕಥೆ ಹೋಗುತ್ತಿರುತ್ತದೆ’ ಎಂಬುದು ಅರ್ಚನಾ ಮಾತು.

ಸೀತಾರಾಮ್ ಶಾಸ್ತ್ರಿ ಪ್ರೊಡಕ್ಷನ್​ನಡಿ ಚಿತ್ರ ತಯಾರಾಗಿದೆ. ಖುಷಿ, ಜಗದೀಶ್ ಮಲ್ನಾಡ್ ಚಿತ್ರದಲ್ಲಿದ್ದಾರೆ. ಸದ್ಯ ಬಹುತೇಕ ಶೂಟಿಂಗ್ ಮುಗಿಸಿರುವ ತಂಡ, ಪೋಸ್ಟ್ ಪ್ರೊಡಕ್ಷನ್​ನಲ್ಲಿ ತೊಡಗಿದೆ. ರೇಷ್ಮಾ ರಾವ್ ಕಾರ್ಯಕಾರಿ ನಿರ್ವಪಕಿಯಾಗಿದ್ದಾರೆ. ಸುದರ್ಶನ್ ಛಾಯಾಗ್ರಹಣ, ದ್ವೈಪಾಯನ್ ಸಿಂಗ ಸಂಗೀತ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net