ಕನ್ಯತ್ವ ಕಳೆದುಕೊಳ್ಳಲು ಸರಿಯಾದ ವಯಸ್ಸು ಎಷ್ಟು? ಬೋಲ್ಡ್​ ಉತ್ತರ ನೀಡಿದ ನಟಿ ಅತುಲ್ಯಾ

Athulya Ravi 1
Published on

ಚೆನ್ನೈ: ಕಾಲಿವುಡ್​ ನಟಿ ಅತುಲ್ಯಾ ರವಿ ಅವರು ಕನ್ಯತ್ವ ಕಳೆದುಕೊಳ್ಳುವ ಹಾಗೂ ಮದುವೆ ಮುಂಚಿನ ಲೈಂಗಿಕ ಕ್ರಿಯೆಯ ಬಗ್ಗೆ ಓಪನ್​ ಆಗಿ ಮಾತನಾಡಿರುವುದು ಎಲ್ಲರ ಹುಬ್ಬೇರಿಸಿದೆ.

ಅತುಲ್ಯಾ ಕೆಲ ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊದ ಮೊದಲು ಯೂಟ್ಯೂಬ್​ ಕಿರುಚಿತ್ರ ಒಂದರಲ್ಲಿ ನಟಿಸಿದರು. ಕಾದಲ್​ ಕಣ್​ ಕಟ್ಟುತ್ತೆ ಹೆಸರಿನ ಕಿರುಚಿತ್ರದಲ್ಲಿ ನಟಿಸಿದ ಬಳಿಕ ಅತುಲ್ಯಾ ಪ್ರಖ್ಯಾತಿ ಗಳಿಸಿದ್ದಲ್ಲದೆ, ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನೂ ಪಡೆದುಕೊಂಡರು. ತಮಿಳಿನಲ್ಲಿ ಕೆಲವೇ ಸಿನಿಮಾಗಳಲ್ಲಿ ಅತುಲ್ಯಾ ನಟಿಸಿದ್ದಾರೆ. ನಟ ಶಾಂತನೂ ಜತೆ ಮುರುಂಗಕೈ ಚಿಪ್ಸ್​ ಸಿನಿಮಾದಲ್ಲಿ ನಟಿಸಿದ ಬಳಿಕ ಖ್ಯಾತಿ ಗಳಿಸಿದ ಅತುಲ್ಯಾ, ಅಭಿಮಾನಿಗಳನ್ನು ಸಂಪಾದಿಸಿದರು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅತುಲ್ಯಾ ಮುಕ್ತವಾಗಿ ಮಾತನಾಡಿದ್ದಾರೆ. ಕನ್ಯತ್ವ ಕಳೆದುಕೊಳ್ಳಲು ಸರಿಯಾದ ವಯಸ್ಸು ಯಾವುದು ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಅತುಲ್ಯಾ, ನನ್ನ ಪ್ರಕಾರ 21 ರಿಂದ 25 ವರ್ಷದ ಒಳಗೆ ಸೂಕ್ತ ಎಂದರು.

ಮದುವೆಗೂ ಮುಂಚೆ ಸೆಕ್ಸ್​ ಮಾಡುವುದು ಸರಿಯೇ? ಅಥವಾ ಮದುವೆಯ ನಂತರ ಸೆಕ್ಸ್​ ಮಾಡುವುದು ಸರಿಯೇ? ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರ ನೀಡಿದ ಅತುಲ್ಯಾ, ಮದುವೆಯ ನಂತರವೇ ನಮ್ಮ ಸಂಸ್ಕೃತಿಗೆ ಹೊಂದಿಕೆಯಾಗುತ್ತದೆ ಎಂದರು. ನನ್ನ ಪ್ರಕಾರ ಮದುವೆಯ ನಂತರ ಸಂಬಂಧ ಬೆಳೆಸುವುದು ಸರಿಯಾದ ಕ್ರಮ. ಆದರೆ ಬದಲಾಗುತ್ತಿರುವ ಕಾಲದಲ್ಲಿ, ಅನೇಕ ಜನರು ಲಿವ್-ಇನ್ ಸಂಬಂಧಗಳಲ್ಲಿದ್ದಾರೆ ಎಂದು ತಿಳಿಸಿದರು.

ಲಿವಿಂಗ್​ ಟುಗೆದರ್​ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ನಿರ್ಧಾರವಾಗಿದೆ. ಅದರ ಮೇಲೆ ಅಧಿಕಾರ ಚಲಾಯಿಸುವ ಹಕ್ಕು ಯಾರಿಗೂ ಇಲ್ಲ. ಅದೇ ಸಮಯದಲ್ಲಿ ನಮ್ಮ ಸಂಸ್ಕೃತಿಯ ಪ್ರಕಾರ ಮದುವೆಯ ನಂತರ ಸಂಬಂಧ ಬೆಳೆಸುವುದು ಸರಿ ಎಂದು ಪುನರುಚ್ಛರಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net