

ದುಬೈ: ಟೀಮ್ ಇಂಡಿಯಾದ ಮಾಜಿ ವೇಗಿ ಹಾಗೂ ಕನ್ನಡಿಗ ಜಾವಗಲ್ ಶ್ರೀನಾಥ್, ಅಕ್ಟೋಬರ್ 5ರಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಅಹಮದಾಬಾದ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಮ್ಯಾಚ್ ರೆಫ್ರಿಯಾಗಿ ಐಸಿಸಿಯಿಂದ ಶುಕ್ರವಾರ ನೇಮಕಗೊಂಡಿದ್ದಾರೆ.
ಭಾರತದ ನಿತಿನ್ ಮೆನನ್ ಮತ್ತು ಶ್ರೀಲಂಕಾದ ಕುಮಾರ ಧರ್ಮಸೇನಾ ಪಂದ್ಯಕ್ಕೆ ಇಬ್ಬರು ಮೈದಾನದ ಅಂಪೈರ್ಗಳಾಗಿರುತ್ತಾರೆ. ಪೌಲ್ ವಿಲ್ಸನ್ ತೃತೀಯ ಅಂಪೈರ್ ಮತ್ತು ಸೈಕತ್ 4ನೇ ಅಂಪೈರ್ ಆಗಿರುತ್ತಾರೆ. ವಿಶ್ವಕಪ್ನಲ್ಲಿ ಒಟ್ಟು 16 ಅಂಪೈರ್ಗಳು ಕಾರ್ಯನಿರ್ವಹಿಸಲಿದ್ದಾರೆ. ಈ ಪೈಕಿ 12 ಐಸಿಸಿ ಎಲೈಟ್ ಪ್ಯಾನಲ್ನವರಾಗಿರುತ್ತಾರೆ.