6ನೇ ತರಗತಿಯಲ್ಲೇ ಲವ್​ ಲೆಟರ್​! ಶಾಲಾ ವ್ಯಾನ್​ ಬಳಿ ನಡೆದಿದ್ದನ್ನು ಮರೆಯೋಕ್ಕಾಗಲ್ಲ ಎಂದ ಹನಿ ರೋಸ್​

Honey Rose
Published on

ತಿರುವನಂತಪುರಂ: ಸಾಮಾಜಿಕ ಜಾಲತಾಣದಲ್ಲಿ ಸದಾ ಬಿಜಿಯಾಗಿರುವವರಿಗೆ ಮಲಯಾಳಂ ಬ್ಯೂಟಿ ಹನಿ ರೋಸ್​ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ಹನಿ ರೋಸ್​ ಅವರು ಸಿನಿಮಾಗಳಿಗಿಂತ ಜಾಲತಾಣದಲ್ಲೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅವರ ಮೈಮಾಟಕ್ಕೆ ಅನೇಕ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಅವರ ಸೌಂದರ್ಯಕ್ಕೆ ಮಾರು ಹೋಗಿ ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಸದ್ಯಕ್ಕೆ ಕೆಲ ತಮಿಳು ಮತ್ತು ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಹನಿ ರೋಸ್​ ಬಿಜಿಯಾಗಿದ್ದಾರೆ.

Honey Rose 3

ತನ್ನ ಸಹಜ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆದಿರುವ ಹನಿ ರೋಸ್​, ಇತ್ತೀಚೆಗೆ ಆನ್​ಲೈನ್​ ಚಾನೆಲ್​ ಒಂದರಲ್ಲಿ ತಮ್ಮ ಮದುವೆ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಮದುವೆಯ ಪ್ಲಾನ್ ಬಗ್ಗೆ ಹನಿ ರೋಸ್ ಪ್ರತಿಕ್ರಿಯಿಸಿದ್ದು, ಭವಿಷ್ಯದಲ್ಲಿ ನನ್ನ ಮದುವೆ ನಡೆಯುತ್ತದೆ ಎಂದು ನಾನು ಭಾವಿಸುತ್ತೇನೆ. ನನಗೆ ಇನ್ನೂ ಸರಿಯಾದ ವ್ಯಕ್ತಿ ಸಿಕ್ಕಿಲ್ಲ, ನನಗೆ ಹೊಂದುವಂತಹ ವ್ಯಕ್ತಿ ಸಿಕ್ಕರೆ, ನಾನು ಮದುವೆಯಾಗುತ್ತೇನೆ. ಆದರೆ, ನಾನು ಅಂದುಕೊಂಡಿದ್ದು ನಡೆಯುತ್ತದೆಯೋ ಗೊತ್ತಿಲ್ಲ ಎಂದರು.

Honey Rose 1

ಸಿನಿಮಾವೇ ನನಗೆಲ್ಲ. ಸಿನಿಮಾಗಳನ್ನು ಪ್ರೀತಿಸುವವರೇ ನನ್ನ ಜೀವನದ ಸಂಗಾತಿ ಆಗಿರಬೇಕು ಮತ್ತು ನನ್ನನ್ನೂ ಪ್ರೀತಿ ಮಾಡಬೇಕೆಂದು ಬಯಸುತ್ತೇನೆ. ಅವನು ನನ್ನನ್ನು ಪ್ರೀತಿಸಿದರೆ, ಅವನು ಸಹಜವಾಗಿ ನನ್ನ ಇಷ್ಟಗಳನ್ನು ಇಷ್ಟಪಡುತ್ತಾನೆ ಎಂದು ಹನಿ ರೋಸ್​ ಹೇಳಿದರು.

ಇದೇ ಸಂದರ್ಭದಲ್ಲಿ ಹನಿ ರೋಸ್​ ತಮ್ಮ ಬಾಲ್ಯದ ಪ್ರೀತಿಯ ನೆನಪುಗಳನ್ನು ಸಹ ಹಂಚಿಕೊಂಡಿದ್ದಾರೆ. 6ನೇ ತರಗತಿಯಲ್ಲಿ ಓದುತ್ತಿದ್ದಾಗ ನನಗೆ ಪ್ರೇಮ ಪತ್ರ ಬಂದಿತ್ತು. ಇಂದಿಗೂ ಪ್ರೀತಿ ಎಂಬ ಪದ ಕೇಳಿದಾಗ ಮೊದಲು ನೆನಪಿಗೆ ಬರುವುದು ಅದೇ ದಿನ. 10ನೇ ತರಗತಿ ಓದುತ್ತಿರುವ ಹುಡುಗನೊಬ್ಬ ನನಗೆ ಪ್ರೇಮ ಪತ್ರ ಕೊಟ್ಟಿದ್ದ. ಶಾಲೆ ಮುಗಿಸಿ ಮನೆಗೆ ಬರಲು ನಾನು ವ್ಯಾನ್ ಹತ್ತಿದಾಗ ಅವನು ಓಡಿ ಬಂದು ಪತ್ರವನ್ನು ನನ್ನ ಮಡಿಲಿಗೆ ಎಸೆದ. ಪ್ರೇಮ ಪತ್ರಗಳು ನಿಜವಾಗಿಯೂ ಚೆನ್ನಾಗಿವೆ ಎಂದು ಹನಿ ರೋಸ್​ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net