Bigg Boss Kannada 8: ಬಿಗ್​ಬಾಸ್​ ಮನೆಯೊಳಗೆ ಗ್ರೂಪಿಸಂ ಇದೆಯೇ? ಗೀತಾ ಭಟ್​ ಹೇಳಿದ್ದೇನು?

Geetha 2
Published on

ಬೆಂಗಳೂರು: ಕನ್ನಡದ ‘ಬಿಗ್​ಬಾಸ್’ ಸೀಸನ್ 8ರ ಮೂರನೇ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ​ ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್​ ಮನೆಯಿಂದ ಹೊರಬಂದಿದ್ದಾರೆ. ಎಲಿಮಿನೇಟ್​ ಆದ ಬಳಿಕ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಗೀತಾ, ಮನೆಯೊಳಗೆ ಗ್ರೂಪಿಸಂ ನಡೆಯುತ್ತಿದೆ ಎಂದರು.

ಹೌದು. ಮನೆಯೊಳಗೆ ಗ್ರೂಪಿಸಂ ಇದೆ. ಆದರೆ, ನಾನು ಯಾರಿಂದಲೂ ಮೂಲೆ ಗುಂಪಾಗುವುದಿಲ್ಲ ಎಂದು ನಾನು ಭಾವಿಸಿದೆ. ನಾನು ಎಲ್ಲರೊಂದಿಗೆ ಮಾತನಾಡಲು ಪ್ರಯತ್ನಿಸಿದೆ. ಆದರೆ, ಅದರಲ್ಲಿ ವಿಫಲವಾದೆ. ಮನೆಯಲ್ಲಿ ಉಳಿಯಬೇಕಾದರೆ ಒಬ್ಬೊಬ್ಬರ ಬಾಂದವ್ಯವನ್ನು ಗೆಲ್ಲುವುದು ತುಂಬಾ ಮುಖ್ಯವೆಂದು ನಾನು ಭಾವಿಸಿದ್ದೇನೆ. ತುಂಬಾ ನೇರವಾಗಿ, ಮುಕ್ತವಾಗಿ ಮಾತನಾಡಬೇಕೆಂದು ಆ ಬಳಿಕ ತಿಳಿಯಿತು. ಅಷ್ಟರಲ್ಲಿ ಸಮಯ ಮುಗಿದು ಹೋಗಿತ್ತು ಎನ್ನುತ್ತಾರೆ ಗೀತಾ.

ಭಾವುಕತೆ ಬಗ್ಗೆ ಪಶ್ಚತಾಪ ಪಡುವುದಿಲ್ಲ

ಮನೆಯೊಳಗಿನ ಭಾವನಾತ್ಮಕ ವ್ಯಕ್ತಿತ್ವದ ಬಗ್ಗೆ ಕೇಳಿದಾಗ, ನನ್ನ ಭಾವನಾತ್ಮಕ ವಿಧಾನದ ಬಗ್ಗೆ ನನಗೆ ಒಂದಿಷ್ಟು ಪಶ್ಚಾತಾಪವಿಲ್ಲ. ನಾನು ಬಿಗ್​ಬಾಸ್​ ಆಟವನ್ನು ಅರ್ಥ ಮಾಡಿಕೊಂದು ಕೆಲವು ಬದಲಾವಣೆ ಮಾಡಿಕೊಳ್ಳಬೇಕಿತ್ತು ಅನಿಸುತ್ತದೆ. ಆದರೆ ಯಾವುದೇ ಸಮಯದಲ್ಲಿ ನನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳದ ಕಾರಣ ನಾನು ಎಲ್ಲರೊಂದಿಗೆ ಚೆನ್ನಾಗಿರುತ್ತೇನೆಂದು ಭಾವಿಸಿದೆ. ಇದು ಕೇವಲ ಆಟವಷ್ಟೇ, ಆದರೆ, ಜೀವನ ಇದಕ್ಕಿಂತ ದೊಡ್ಡದು. ನಾನು ಈಗ ಹೇಗಿದ್ದೀನೋ ಅದರಲ್ಲಿ ನನಗೆ ತೃಪ್ತಿ ಇದೆ ಎಂದರು.

ನಿಧಿ ಸುಬ್ಬಯ್ಯ, ವಿಶ್ವನಾಥ್​ ಹಾವೇರಿ, ಶಮಂತ್​ (ಬ್ರೋ ಗೌಡ), ದಿವ್ಯಾ ಸುರೇಶ್​, ದಿವ್ಯಾ ಉರುಡುಗ, ಅರವಿಂದ್​ ಕೆ.ಪಿ. ಮತ್ತು ಪ್ರಶಾಂತ್​ ಸಂಬರಗಿ ಜತೆ ಗೀತಾ ಸಹ ನಾಮಿನೇಟ್​ ಆಗಿದ್ದರು. ಆದರೆ, ಅತಿ ಕಡಿಮೆ ವೋಟ್​ ಪಡೆದು ಮನೆಯಿಂದ ಹೊರಬಂದಿದ್ದಾರೆ. ಗೀತಾ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 22 ದಿನಗಳನ್ನು ಕಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net